ಸಾಮಾಜಿಕ ಜಾಲತಾಣ: ಪುಲ್ವಾಮ ದಾಳಿ ನಡೆದು ನಾಲ್ಕು ವರ್ಷಗಳೆ ಕಳೆಯುತ್ತಿವೆ ಆದರೆ ಆ ದಾಳಿಗೆ ಸಂಬಂಧ ಪಟ್ಟಂತೆ ಆಗಾಗ ಚರ್ಚೆಗಲು ಮುನ್ನೆಲೆಗೆ ಬರುತ್ತಿರುವುದನ್ನು ನಾವು ನೋಡುತ್ತಲೆ ಇದ್ದೇವೆ. ಕಳೆದ ಸುಮಾರು ದಿನಗಳ ಹಿಂದೆ ಈ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡುವಂತೆ ಜಮ್ಮು ಕಾಶ್ಮಿರದ ಮಾಜಿ ರಾಜ್ಯಪಾಲರಾದ ಸತ್ಯಪಾಲ್ ಮಲ್ಲಿಕ್ ರವರು ದಿ ವೈರ್ ಎಂಬ ಸುದ್ಧಿ ವಾಹಿನಿಯ ಸಂದರ್ಶದಲ್ಲಿ ಪುಲ್ವಾಮ ದಾಳಿಯ ಬಗ್ಗೆ ನೀಡಿರುವ ಹೇಳಿಕೆಗಳು ದೇಶದಲ್ಲೆ ತಲ್ಲಣ ಮೂಡಿಸಿ ಮೋದಿ ಆಡಳಿತದ ಬಿಜೆಪಿ ಸರ್ಕಾರ ಚುನಾವಣಾ ಕಾರಣಕ್ಕಾಗಿ 40 ಜನ ಯೋಧರನ್ನು ಕೊಂದಿದೆ ಎಂಬ ಭಾವನೆಯನ್ನು ಮೂಡಿಸುವಂತಿದೆ. ಈ ವಿಚಾರವಾಗಿ ಕರ್ನಾಟಕದಲ್ಲಿಯೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದ್ದು ಈಗ ಮಾಜಿ ಮಾಹಿತಿ ಹಕ್ಕು ಆಯೋಗ ಆಯುಕ್ತರು ಮತ್ತು ಹಾಲಿ ಕಾಂಗ್ರಸ್ ಪಕ್ಷದ ಕೆಪಿಸಿಸಿ ವಿಭಾಗದ ಪ್ರಚಾರ ಸಮಿತಿಯ ಸಹ ಅಧ್ಯಕ್ಷರಾದ ಹೆಚ್.ಪಿ ಸುಧಾಮ್ ದಾಸ್ ರವರು ಈ ಕುರಿತು ಟ್ಚೀಟ್ ಮಾಡಿದ್ದು ʼಪುಲ್ವಾಮದ ದಾಳಿಯಲ್ಲಿ ನಮ್ಮ 40 ಸೈನಿಕರ ಹತ್ಯಾಕಾಂಡ ಕುರಿತಂತೆ ಆ ರಾಜ್ಯದ ಅಂದಿನ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿದ್ದ ‘ಶ್ರೀ ಸತ್ಯಪಾಲ್ ಮಲ್ಲಿಕ್’ ರವರ ಹೇಳಿಕೆ ಅತ್ಯಂತ ಗಂಭೀರ ಸ್ವರೂಪದಾಗಿದ್ದು, ಚುನಾವಣೆ ಲಾಭಕ್ಕಾಗಿ ದೇಶದ ಸೈನಿಕರನ್ನು ಬಿಜೆಪಿ ಸರ್ಕಾರ ಬಲಿ ತೆಗೆದುಕೊಂಡಿರಬಹುದೆಂಬ ದೇಶದ ಹಲವಾರು ನಾಗರಿಕರ ಅನುಮಾನಕ್ಕೆ ಪುಷ್ಟಿ ಕೊಡುವಂಥಹುದಾಗಿದೆ.
ಮಾನ್ಯ ‘ಸರ್ವೋಚ್ಚ ನ್ಯಾಯಾಲಯ’ ಸದರಿ ಹತ್ಯಕಾಂಡ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿ, ಅಂದಿನ ಗೃಹ ಸಚಿವ ಶ್ರೀ ರಾಜನಾಥ್ ಸಿಂಗ್ ಹಾಗೂ ಭದ್ರತಾ ಸಲಹೆಗಾರ ಶ್ರೀ ಅಜಿತ್ ಧೋವಲ್ ರವರ ಪಾತ್ರ ಕುರಿತು ವಿಚಾರಣೆ ಕೈಗೊಳ್ಳುವ ಸಲುವಾಗಿ ‘ಸರ್ವೋಚ್ಚ ನ್ಯಾಯಾಲಯ’ವನ್ನು ಒತ್ತಾಯಿಸುತ್ತಿದ್ದೇನೆ. ಮತ್ತು ದೇಶದಾದ್ಯಂತ ಇದರ ಕುರಿತು ಅಭಿಯಾನವನ್ನು ನಡೆಸಲು ಕಾರ್ಯಶೀಲರಾಗುತ್ತೇವೆ.ʼ ಎಂದು ಇದರ ಕುರಿತು ಸುಪ್ರಿಂ ಕೋರ್ಟ್ ವಿಚಾರಣೆ ಕೈಗೊಳ್ಳಬೇಕು ಎಂದು ಅಭಿಯಾನವನ್ನು ಮಾಡುತ್ತೇವೆೆ ಎಂದು #DemandSCInquiryInToPulwamaSainikCarnage #SCInquiryAboutThePulwamaAttack ಎಂಬ ಹ್ಯಾಶ್ ಟ್ಯಾಗ್ ಅನ್ನು ಬಳಸಿ ತಮ್ಮ ಟ್ವಿಟರ್ ಖಾತೆಲ್ಲಿ ಹಂಚಿಕೊಂಡಿರುವುದು ಈ ವಿವಾದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.