ಗದಗ: ನಿನ್ನೆ ಗದಗದಲ್ಲಿ ಬಿಜೆಪಿ ಪ್ರಚಾರ ಸಭೆ ನಡೆದಿತ್ತು. ವೇದಿಕೆಯಲ್ಲಿದ್ದಿದ್ದು ಗೃಹಮಂತ್ರಿ ಅಮಿತ್ ಶಾ. ಆದರೆ ಗದಗ ಎಂದ ಮೇಲೆ ಬಿಸಿಲು ಧಗ ಧಗ ಎಂದು ಹೇಳಬೇಕಿಲ್ಲ. ಜನ ಬಾಯಾರಿದ್ದರು. ಬ್ಲೂಜೆಪಿ ದುಡ್ಡುಕೊಡುವುದಾಗಿ ಹೇಳಿ ಕರೆಸಿತ್ತು. ಆದರೆ ಬಂದವರಿಗೆ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಿರಲಿಲ್ಲ.
ಶರೀಫ ಎಂಬ ಎಳೆಯ ಹುಡುಗ ತಂಪು ಪಾನೀಯ ಮಾರಾಟ ಮಾಡಲೆಂದು ಇಲ್ಲಿಗೆ ಬಂದಿದ್ದಾನೆ. ಕೂಲ್ ಡ್ರಿಂಕ್ಸ್ ವಾಹನ ಈ ಜಾಗಕ್ಕೆ ತಲುಪಿದ್ದೇ ತಡ ಜನ ಮಂಗಗಳಂತೆ ಛಂಗನೆ ವಾಹನದ ಮೇಲೆಯೇ ನೆಗೆದಿದ್ದಾರೆ. ಕೈಗೆ ಸಿಕ್ಕಷ್ಟು ಬಾಟಲಿಗಳನ್ನು ಬಾಚಿದ್ದಾರೆ. ಜನರ ಪ್ರಕಾರ ಇದು ಬಿಜೆಪಿ ಉಚಿತವಾಗಿ ವಿತರಿಸಿರುವ ತಂಪು ಪಾನೀಯ! ಆದರೆ ಶರೀಫನ ವ್ಯಾಪಾರಕ್ಕೆ ಆಗಿದ್ದು ಭಾರೀ ನಷ್ಟ.
ಭಯಭೀತಗೊಂಡ ಶರೀಫ ಅತ್ತೇ ಬಿಟ್ಟಿದ್ದಾನೆ. ಪೊಲೀಸರು ಆತನನ್ನು ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡುವಂತೆ ಮಾಡಿದ್ದಾರೆ.
ಲಕ್ಷಾಂತರ ಮಂದಿ ಸೇರುವ ಸಭೆಯಲ್ಲಿ ಒಬ್ಬ ವ್ಯಾಪಾರಿಗೆ ಆದ ಅನ್ಯಾಯಾವು ಆ ದಿನ ಅವನ ಮನೆಯ ಮತ್ತು ಆತನ್ನ ಹೊಟ್ಟೆಯ ಅನ್ನವನ್ನು ಕಿತ್ತು ತಿಂದ ನರ ಭಕ್ಷಕರಂತೆ ಅಲ್ಲಿರುವವರು ಕಂಡರು