ಬೆಂಗಳೂರು ಗ್ರಾಮಾಂತರ ಜೆಲ್ಲೆಯ ನೆಲಮಂಗಲ ತಾಲ್ಲೂಕಿನ ಹಂಚಿಪುರ ಗ್ರಾಮದಲ್ಲಿ ಕುಕ್ಕರೆ ಸ್ಪೋಟಕ್ಕೆ ಸಂಬಂಧಿಸಿದಂತೆ
ಮೂರು ವರ್ಷಗಳ ಹಳೆಯ ಕುಕ್ಕರನ್ನು ಬಳಸುತ್ತಿದ್ದೇವು ಇಂದು ಬೆಳಗ್ಗೆ ಸಾಂಬಾರ್ ಮಾಡುತ್ತಿದ್ದೆ ಇದೆ ಸಂದರ್ಭದಲ್ಲಿ ಕುಕ್ಕರ್ ಸಮಸ್ಯೆಯಾಗಿ ಏಕಾಏಕಿ ಕುಕ್ಕರ್ ಬ್ಲಾಸ್ಟ್ ಆಗಿದೆ ಎಂದು ಲಕ್ಷಮ್ಮ ಅವರು ಸ್ಪಷ್ಟನೆ ನೀಡಿದ್ದಾರೆ.
ಲಕ್ಷ್ಮಮ್ಮ ಅವರು ನೆಲಮಂಗಲ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು ಕುಕ್ಕರ್ ಬ್ಲಾಸ್ಟ್ ನಿಂದ ಮುಖದಲ್ಲಿ ಗಾಯಗಳಾಗಿದ್ದು ಪ್ರಾಣಕ್ಕೆ ಯಾವುದೆ ಅಪಾಯವಿಲ್ಲ ಎಂದು ತನಿಖೆ ನ್ಯೂಸ್ ಗೆ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
ಈ ವಿಚಾರನ್ನು ಕೆಲವರು ಕಾಂಗ್ರೆಸ್ ಅಭ್ಯರ್ಥಿ ನೀಡಿದ ಕುಕ್ಕರ್ ಬ್ಲಾಸ್ಟ್ ಎಂದು ಸುಳ್ಳು ಸುದ್ಧಿಗಳನ್ನು ಹಬ್ಬಿಸುತ್ತಿದ್ದು ಇದಕ್ಕೆ ಕುಕ್ಕರ್ ಸ್ಪೋಟದಲ್ಲಿ ಗಾಯಗೊಂಡ ಲಕ್ಷ್ಮಮ್ಮರವರೆ ಸ್ಪಷ್ಟನೆ ನೀಡಿದ್ದು ಶ್ರೀನಿವಾಸ್ ಕೊಟ್ಟ ಹೊಸ ಕುಕ್ಕರ್ ಅನ್ನು ನಾವು ಇನ್ನು ಕೂಡ ಬಿಚ್ಚಿಲ್ಲ ಎಂದು ಹೇಳಿದ್ದಾರೆ.
ಸುಳ್ಳು ಸುದ್ಧಿಗಳಿಗಳನ್ನು ನಂಬುವ ಮೊದಲು ವಾಸ್ತವತೆಯ ಬಗ್ಗೆ ಪರಿಕ್ಷಿಸುವ ಅವಶ್ಯಕತೆಯಿದೆ ಸದ್ಯಕ್ಕೆ ಈ ಪ್ರಕರಣದಲ್ಲಿನ ಕೆಲವರ ಮಾತುಗಳು ಮತ್ತು ಮಾಹಿತಿಗಳು ಸತ್ಯಕ್ಕೆ ದೂರವಾದೂದು ಎಂಬುದುನ್ನು ನಾವು ತಿಳಿಯಬೇಕಿದೆ.