ಶಿವಮೊಗ್ಗ: ಶಿವಮೊಗ್ಗ ನಗರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಚನ್ನಬಸಪ್ಪನವರ ನೂತನ ಕಚೇರಿ ಉದ್ಘಾಟನೆಯ ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಮಾಜಿ ಸಿಎಂಗಳಾದ ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಫೋಟೊದ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಫೋಟೊ ರಾರಾಜಿಸಿದೆ.
ಬಿಜೆಪಿಯ ಬಲಪಂಥಿಯ ಸಿದ್ದಾಂತವನ್ನು ವಿರೋಧಿಸುತ್ತಾ ಬಂದಿರುವ ಸಿದ್ದರಾಮಯ್ಯನವರು ಬಿಜೆಪಿಯ ಶಾಸಕರ ಕಚೇರಿ ಉದ್ಘಾಟನೆಯ ವೇದಿಕೆ ಕಾರ್ಯಕ್ರಮದಲ್ಲಿ ರಾರಾಜಿಸಿದ್ದು ವಿಶೇಷ ಜೊತೆಗೆ ಕುತೂಹಲಕ್ಕೂ ಕಾರಣವಾಗಿದೆ.
ಶಾಸಕರಾಗುವ ಮುನ್ನ ಸಿದ್ದರಾಮಯ್ಯನವರ ವಿರುದ್ಧ ಹಲವು ಬಾರಿ ಹರಿಹಾಯ್ದಿದ್ದ ಚನ್ನಬಸಪ್ಪನವರು, ಕಚೇರಿ ಉದ್ಘಾಟನೆಯ ವೇಳೆಯಲ್ಲಿ ಸಿದ್ದರಾಮಯ್ಯನವರ ಫೊಟೊ ಹಾಕಿಕೊಂಡಿರುವುದು ಗಮನಸೆಳೆದಿದೆ.
ಸಿದ್ದರಾಮಯ್ಯ ಸಿಎಂ ಎನ್ನುವ ಕಾರಣಕ್ಕೆ ಫೋಟೊ ಹಾಕಿಕೊಂಡರೋ ಅಥವಾ ಕಣ್ಣುತಪ್ಪಿನಿಂದ ಸಿದ್ದರಾಮಯ್ಯನವರ ಫೊಟೊ ಹಾಕಿಕೊಳ್ಳಲಾಯಿತೋ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯನವರ ಫೋಟೊ ಬಿಜೆಪಿಯ ಸ್ಥಳೀಯ, ರಾಜ್ಯ, ರಾಷ್ಟ್ರ ನಾಯಕರ ನಡುವೆ ರಾರಾಜಿಸಿರುವುದು ವಿಶೇಷವಾಗಿದೆ.