ದೇಶದ ಮಹತ್ವವುಳ್ಳ ವ್ಯಕ್ತಿ ಎಂದರೆ ಅದು ರೈತ – ಹೇಮಂತ್ ಕೋಲಾರ

ಹಿರಿಯರು ಹೇಳುತ್ತಾರೆ ಹೊಲ ಮತ್ತು ನುಡಿ ಎರಡು ಒಂದೇ ಅಂತ ಹೇಳುತ್ತಾರೆ. ಒಳ್ಳೆಯ ಬೀಜಗಳನ್ನು ಹೊಲದಲ್ಲಿ ಚೆಲ್ಲಿದರೆ ಫಸಲನ್ನು ನೂರಕ್ಕೆ ನೂರರಷ್ಟು ನೀಡುತ್ತದೆ. ಅದೇ ರೀತಿ ನುಡಿ ಎಂದರೆ ಒಂದು ಒಳ್ಳೆಯ ಮಾತು. ಅದನ್ನು ಹಂಚಿಕೊಂಡರೆ ಸಹ ನೂರಕ್ಕೆ ನೂರರಷ್ಟು ಫಲಿತವಾಗಿರುತ್ತದೆ. ವಿದ್ಯಾರ್ಥಿಗಳನ್ನು ಹೆಚ್ಚಾಗಿ ಇಂಜಿನಿಯರ್ ಆಗ್ತೀರಾ?, ಡಾಕ್ಟರ್ ಆಗ್ತೀರಾ?, ಕಲೆಕ್ಟರ್ ಆಗ್ತೀರಾ?.. ಎಂದು ಕೇಳುವರೋ ಒರೆತು ರೈತ ಆಗುವಿರಾ?.. ಅಂತ ಯಾರೂ ಕೇಳುವುದಿಲ್ಲ. ಚಿಕ್ಕ ಆಯ್ಕೆಯೂ ಸಹ ನೀಡುವುದಿಲ್ಲ. ಓದಿ ಇರುವವರು ಮಾತ್ರ ರೈತರಾಗಬೇಕು ಎನ್ನುವುದು ತಪ್ಪು.

ಭಾರತದಲ್ಲಿ ವ್ಯವಸಾಯವೇ ದೇಶದ ಬೆನ್ನೆಲುಬು ಆದರೆ ನಮ್ಮ ದೇಶದಲ್ಲಿ ವ್ಯವಸಾಯವನ್ನು ಮುಂದೆ ತರದೆ ಹಿಂದೆ ತಳ್ಳುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳದೆ ಬದುಕುತ್ತಿದ್ದೇವೆ. ಅರ್ಥಮಾಡಿಕೊಂಡವನು ವ್ಯವಸಾಯ ಮಾಡಲು ಬಂದರೆ ಅವರನ್ನು ನೋಡಿ ನಗುವ ಸಮಾಜದ ಸೃಷ್ಟಿಯಾಗಿದೆ. ಈ ಸಮಾಜದಲ್ಲಿ ಮದುವೆಯಾಗಲು ಹೆಣ್ಣು ಹುಡುಕುವ ಸಂದರ್ಭದಲ್ಲಿ ಸಹ ಹೆಣ್ಣಿನ ಕಡೆಯವರು ಹುಡುಗ ಯಾವ ಕೆಲಸದಲ್ಲಿದ್ದಾನೆ ಎಂದು ಕೇಳಿ, ಗಂಡಿನ ಕಡೆಯವರು ರೈತ ಎಂದ ತಕ್ಷಣ ಹೆಣ್ಣು ಕೊಡುವವರು ಸಹ ಹಿಂಜರಿಯುತ್ತಿದ್ದಾರೆ. ಆ ರೈತ ಬೆಳೆದ ಬೆಳೆಯಿಂದಲೇ ಜೀವನ ಸಾಗುತ್ತಿರುವುದು ಎನ್ನುವುದನ್ನು ಮರೆತಿರುತ್ತಾರೆ. ನಮ್ಮ ಬಳಿ ಎಷ್ಟೇ ಹಣವಿದ್ದರೂ ಸಹ ರೈತನ ಸಹಾಯವಿಲ್ಲದೆ ಬದುಕಲು ಸಾಧ್ಯವೇ ಇಲ್ಲ.

ಆದ್ದರಿಂದಲೇ ರೈತ ದೇಶದಲ್ಲೇ ಮಹತ್ವವುಳ್ಳ ವ್ಯಕ್ತಿ ಎಂದು ಹೇಳಿರುವುದು. ಬೇರೆ ದೇಶದಲ್ಲಿ ಓದಿರುವವರು ಸಹ ವ್ಯವಸಾಯವನ್ನ ಮಾಡುತ್ತಿರುವರು, ಆದರೆ ನಮ್ಮ ಭಾರತ ದೇಶದಲ್ಲಿ ಓದದೆ ಇರುವವರು ಮಾತ್ರ ಹೆಚ್ಚಾಗಿ ರೈತರಾಗಿರುತ್ತಾರೆ. ನಮ್ಮ ದೇಶದಲ್ಲಿ ಸರಿಯಾದ ಸಮಯಕ್ಕೆ ಮಳೆಯಾಗದೆ ಇದ್ದ ಸಮಯದಲ್ಲಿ ಅಥವಾ ಅತಿಯಾದ ಮಳೆಯಿಂದಾಗಿ ಬೆಳೆ ನಾಶ ಆದ ಸಂಧರ್ಭದಲ್ಲಿ ರೈತನ ತನ್ನ ಬೆಳೆಯನ್ನು ಕಳೆದುಕೊಂಡು ಸಾಲಗಾರನಾಗುತ್ತಾನೆ. ನಮ್ಮ ಕೆಲವು ನಾಯಕರು ರೈತರ ಸಾಲವನ್ನು ಮನ್ನಾ ಮಾಡಿದರೆ ರೈತ ಸೋಮರಿಯಾಗುತ್ತಾನೆ. ಕೈಗಾರಿಕೆಯ ಸ್ನಾನವನ್ನು ಮನ್ನಾ ಮಾಡಿದರೆ ಅದು ಇನ್ನಷ್ಟು ಅಭಿವೃದ್ಧಿಯಾಗುವುದು ಬೆಳೆಯುವುದು ಎಂದು ಮೂರ್ಖತನದಿಂದ ಯೋಚನೆ ಮಾಡುವವರಾಗಿದ್ದಾರೆ.

ರೈತರ ಯಾವುದೇ ಬೆಳೆಯನ್ನು ರೈತರ ಬಳಿ ಕಡಿಮೆ ಬೆಲೆಗೆ ಕೊಂಡು ಅದನ್ನು ಹೆಚ್ಚು ಲಾಭದಲ್ಲಿ ಮಾರಿ ರೈತರಿಗೆ ಅನ್ಯಾಯ ಮಾಡುವುದನ್ನು ಸಹ ಕಾಣಬಹುದಾಗಿದೆ. ಮೊದಲು ರೈತನಿಗೆ ರೈತ ಬೆಳೆದ ಬೆಳೆಗೆ ನ್ಯಾಯವನ್ನು ಕೊಡಬೇಕಾಗಿದೆ. ರೈತರ ಕಷ್ಟಕ್ಕೆ ಸ್ಪಂದಿಸಬೇಕಾಗಿದೆ. ನಾವು ರೈತರಾಗುವುದಕ್ಕೂ ಮುಂಚೆ ಒಂದು ದಿನ ರೈತರ ಜೊತೆಗಿದ್ದರೆ ರೈತರ ಕಷ್ಟವೂ ಅರ್ಥವಾಗುತ್ತದೆ. ನಾವು ಯಾವುದೇ ಕೆಲಸ ಮಾಡಿದರು ಅದರ ಜೊತೆಗೆ ವ್ಯವಸಾಯವನ್ನು ಮಾಡಬೇಕಾಗುತ್ತದೆ. ಏಕೆಂದರೆ ಇನ್ನೊಬ್ಬರ ಬಳಿ ಕೈ ಚಾಚುವುದು ತಪ್ಪುತ್ತದೆ. ಇಲ್ಲಿ ಹುಟ್ಟಿಸುವವನು ದೇವರಾದರೆ, ಬೆಳೆ ಬೆಳೆದವನು ಸಹ ದೇವರು.

ಹೇಮಂತ್ ಕೋಲಾರ
ದ್ವಿತೀಯ ಬಿ.ಎಸ್ಸಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ದೊಡ್ಡಬಳ್ಳಾಪುರ.

Related Posts

ಅಂಬೇಡ್ಕರ್ ರಾಷ್ಟ್ರೀಯ ನಾಯಕರೇ ಅಲ್ಲ : ಗುಜರಾತ್ ಬಿಜೆಪಿ ಸರ್ಕಾರ 

ಆತ್ಮೀಯರೇ,  ಇದ್ದಕ್ಕಿದ್ದಂತೆ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಅಪ್ಪಿಕೊಳ್ಳಲು ಹೊರಟಿರುವ ಸಂಘಿಗಳು ಏನೇ ನಾಟಕವಾಡಿದರೂ….  ಅವರ ಸಂವಿಧಾನ ದ್ವೇಷ ಮತ್ತು ಅಂಬೇಡ್ಕರ್ ದ್ವೇಷವನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ….   ಅದರ ಮತ್ತೊಂದು ಉದಾಹರಣೆ ಇಲ್ಲಿದೆ…   ಈಗ ದೇಶಾದ್ಯಂತ ದಲಿತ ಬಂಧು ಎಂದು ಪೋಸು ಹೊಡೆಯುತ್ತಿರುವ…

ಸಿಗರೇಟ್, ಪೆಪ್ಸಿ, ಕೋಕಾಕೋಲಾ ಬೆಲೆ ಶೇ. 35ಕ್ಕೆ ಏರಿಕೆ ಸಾಧ್ಯತೆ

ನವದೆಹಲಿ: ಜಿಎಸ್​ಟಿ ದರ ಪರಿಷ್ಕರಣೆ ನಿರ್ಧರಿಸಲು ರಚಿಸಲಾಗಿರುವ ಸಚಿವರ ಮಂಡಳಿಯು (ಜಿಒಎಂ) ತಂಬಾಕು ಇತ್ಯಾದಿ ದುಷ್ಕರ್ಮ ಸರಕುಗಳಿಗೆ ಸಿನ್ ಟ್ಯಾಕ್ಸ್ ಅನ್ನು ಶೇ. 28ರಿಂದ ಶೇ. 35ಕ್ಕೆ ಹೆಚ್ಚಿಸಲು ನಿರ್ಧರಿಸಿದೆ. ಇದರೊಂದಿಗೆ ದುಷ್ಕರ್ಮ ಸರಕುಗಳೆಂದು ಪರಿಗಣಿಸಲಾದ ಸಿಗರೇಟು ಇತ್ಯಾದಿ ತಂಬಾಕು ಉತ್ಪನ್ನಗಳು, ಪೆಪ್ಸಿ,…

Leave a Reply

Your email address will not be published. Required fields are marked *