ಕಷ್ಟ ಸುಖಗಳಿಂದ ಕೂಡಿರುವುದೇ ಜೀವನ. ಸಮಸ್ಯೆಗಳಿಲ್ಲದ ಬದುಕು ಜೀವನವೇ ಅಲ್ಲ. ಹಾಗೆಯೇ ಸಮಸ್ಯೆಗಳು ಶಾಶ್ವತವೂ ಅಲ್ಲ. ಜೀವನದಲ್ಲಿ ನಾನಾ ಬಗೆಯ ಸಮಸ್ಯೆಗಳನ್ನು ಕಾಣಬಹುದು. ಮನುಷ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾನೆ ಎಂದರೆ, ಅದರ ಅರ್ಥ ಮುಂದೆ ಅವನಿಗೆ ಮುಂದೆ ಸುಖದ ದಿನಗಳು ಬರುತ್ತಿವೆ ಎಂದರ್ಥ. ಇಂತಹ ಸಮಸ್ಯೆಗಳು ಎದುರಾದಾಗ ಧೃಡವಾಗಿ ನಿಂತು ಸಂಕಷ್ಟಗಳನ್ನು ಎದುರಿಸಬೇಕು. ಸಂಕಷ್ಟದ ಬಗ್ಗೆ ಯೋಚಿಸದೆ ಪರಿಹಾರದ ಬಗ್ಗೆ ಯೋಚಿಸಬೇಕು. ಒಂದು ಸಮಸ್ಯೆಗೆ ನೂರು ಪರಿಹಾರಗಳು ಇರುತ್ತವೆ. ಅದನ್ನು ಹುಡುಕಬೇಕು. ಕೆಲವರು ಸಮಸ್ಯೆ ಬಂದ ಸಂದರ್ಭದಲ್ಲಿ ಸಾಯುವ ಯೋಚನೆ ಮಾಡುವ ಘಟನೆಗಳು ಸಹ ನಡೆದಿವೆ. ಸಾವು ಅನಿರೀಕ್ಷಿತವಾಗಬೇಕೇ ಹೊರತು ನಾವೇ ಸಾಯುವ ಪ್ರಯತ್ನ ಮಾಡಬಾರದು. ಬದುಕಿಗೆ ಬೆಲೆ ಕಟ್ಟಲಾಗದಷ್ಟು ಅರ್ಥ ಇದೆ.
ಸಾಯುವುದು ಜೀವನ ಅಲ್ಲ, ಎಲ್ಲಾ ಸಮಸ್ಯೆಗಳಿಗೂ ಸಾವೇ ಪರಿಹಾರವಲ್ಲ. ಸಾವೇ ಎಲ್ಕದಕ್ಕೂ ಪರಿಹಾರವಾಗಿದ್ದರೆ ಈ ಜಗತ್ತಿನಲ್ಲಿ ಯಾರೂ ಉಳಿಯುತ್ತಿರಲಿಲ್ಲ. ಸತ್ತು ಏನು ಸಾಧಿಸುವುದಕ್ಕೂ ಆಗುವುದಿಲ್ಲ. ಸತ್ತವರ ಬಗ್ಗೆ ಮೂರು ದಿನ ಗೋಳಾಡಿ, ಆಮೇಲೆ ಸುಮ್ಮನಾಗುತ್ತಾರೆ. ಸತ್ತರೆ ಬರಿ ನೆನಪು ಅಷ್ಟೆ, ಆದರೆ ಬರುವ ಸಂಕಷ್ಟಗಖನ್ನು ಎದುರಿಸಿ ಬದುಕ್ಕಿದರೆ ಇತಿಹಾಸವನ್ನೇ ಸೃಷ್ಟಿಸಬಹುದು. ಸಾಯುವುದು ನಮ್ಮ ಹಕ್ಕಲ್ಲ, ಬದುಕುವುದು ನಮ್ಮ ಹಕ್ಕು. ನಮ್ಮ ಜೀವನ ಕೇವಲ ನಮ್ಮದಲ್ಲ. ಸಾಯುವ ಯೋಚನೆ ಬಂದಾಗ, ತಾಳ್ಮೆಗೆಡಬೇಡಿ, ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹುಡುಕಿ.
ಜಗತ್ತಿನಲ್ಲಿ ಎಷ್ಟೋ ಸಾಧಕ ವ್ಯಕ್ತಿಗಳ ಬದುಕು ಸಮಸ್ಯೆ ಮತ್ತು ಸಂಕಷ್ಟಗಳಿಂದಲೇ ಆರಂಭವಾಗಿ, ಅದನ್ನು ಎದುರಿಸಿ, ಸಾಧನೆಯ ಉತ್ತುಂಗಕ್ಕೆ ಏರಿದವರಿದ್ದಾರೆ. ಬದುಕನ್ನು ಕಟ್ಟಿಕೊಳ್ಳಲು ಯಾರು ನಮ್ಮೊಂದಿಗೆ ಇಲ್ಲದಿದ್ದರೂ, ನಮಗೆ ನಾವೇ ಸಕಾರಾತ್ಮಕವಾಗಿ ಮುಂದುವರಿದೂ ಅಮೂಲ್ಯವಾದ ಜೀವನಕ್ಕೆ ಅರ್ಥ ಸಿಗುವಂತೆ ಮಾಡಬೇಕು. ಜೀವನವನ್ನು ಆನಂದಿಸಿ, ಸಂತೋಷವಾಗಿರಿ.
ಹೇಮಂತ್ ಕೋಲಾರ
ದ್ವಿತೀಯ ಬಿ.ಎಸ್ಸಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ದೊಡ್ಡಬಳ್ಳಾಪುರ.
Ur ina another level 🔥 keep rocking
Me really proud that I am u r friend
Super nin mathu keloke ishtta me loveed it lot 🤗💟