ತುಮಕೂರು ಜಿಲ್ಲೆಯ ಗೂಳೂರು ಹೋಬಳಿಲ್ಲಿ ಮಂಚಗೊಂಡನಹಳ್ಳಿ ಗ್ರಾಮ ನಿವಾಸಿ ಗೋವಿಂದರಾಜು ಎಂಬ ದಲಿತ ವ್ಯಕ್ತಿಯ ಮೇಲೆ ಅದೇ ಊರಿನ ಸವರ್ಣಿಯ ವ್ಯಕ್ತಿಯೊಬ್ಬ ತೋಟದ ಕೂಲಿ ಕೆಲಸಕ್ಕಾಗಿ ಕರೆದುಕೊಂಡು ಹೋಗಿ ಸತ್ತ ನಾಯಿಯನ್ನು ಸುಡಲು ಹೇಳಿದ್ದು, ಸತ್ತ ನಾಯಿಯನ್ನು ಅರ್ಧಂಬರ್ಧ ಸುಟ್ಟಿದ್ದೀಯ ಎಂದು ಬೆಂದ ಕಟ್ಟಿಗೆಯಿಂದ ದಲಿತನ ಎಡಗೈ ಸುಟ್ಟು ಹಾಕಿ, ಅವಾಚ್ಯ ಶಬ್ದಗಳಿಂದ ಅವನನ್ನು ಮತ್ತು ಅವನ ಜಾತಿಯನ್ನು ನಿಂದಿಸಿ ಬಹಳ ಕ್ರೂರಿಯಾಗಿ ವರ್ತಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗೋವಿಂದರಾಜು ಪ್ರಾಣಭಯದಿಂದ ಸುಮಾರು ಮೂರು ತಿಂಗಳು ಯಾರಿಗೂ ವಿಷಯ ತಿಳಿಸದೆ ಮರೆಮಾಚಿದ್ದು, ಈ ವಿಷಯ ಗೊವಿಂದರಾಜುವಿನ ಕುಟುಂಬ ಸದಸ್ಯರನೊಬ್ಬ ಅಂಬೇಡ್ಕರ್ ಸೇನೆ(ರಿ) ಬಳಿ ಬಂದು ಅಳಲು ತೋಡಿಕೊಂಡಿದ್ದಾರೆ.
ವಿಷಯ ತಿಳಿದು ಅಂಬೇಡ್ಕರ್ ಸೇನೆಯವರು ಖಚಿತ ಮಾಹಿತಿ ಪಡೆದು ಕೂಡಲೆ ಕ್ಯಾತಸಂದ್ರ ಪೊಲೀಸ್ ಠಾಣೆಗೆ ಕರೆದೊಯ್ದು ಲಿಖಿತ ದೂರು ನೀಡುವ ಮೂಲಕ FIR ಮತ್ತು SC/ST ಕಾಯಿದೆ ಅಡಿ ದೂರು ನೀಡಲಾಗಿದ್ದು ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಅಂಬೇಡ್ಕರ್ ಸೇನೆ ತುಮಕೂರು ಜಿಲ್ಲಾಧ್ಯಕ್ಷಯ ಶ್ರೀನಿವಾಸ ತನಿಖೆ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.