ದಲಿತ ಬಾಲಕಿಯ ಮೇಲೆ ಅತ್ಯಾಚಾರ: ಸಂಘಪರಿವಾರದ ಮೂವರ ಬಂಧನ

ದಕ್ಷಿಣ ಕನ್ನಡ: ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು, ಸಂಘಪರಿವಾರದ ಮೂವರು ಕಾರ್ಯಕರ್ತರನ್ನು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಠಾಣೆ ಪೊಲೀಸರು ಬಂಧಿಸಿದ್ದಾರೆ. 

  ಬಂಧಿತರನ್ನು ಮೂಡುಬಿದಿರೆ ಮೂಲದ ಪ್ರಸ್ತುತ ಬೆರಿಪದವಿ ನಿವಾಸಿ ಅಕ್ಷಯ್ ದೇವಾಡಿಗ (24), ಬಾಯಾರು ಗ್ರಾಮದ ಕೊಜಪ್ಪ ನಿವಾಸಿ ಕಮಲಾಕ್ಷ ಬೆಳ್ಚಾಡ (30), ಬೆರಿಪದವು ನಿವಾಸಿ ಸುಕುಮಾರ ಬೆಳ್ಚಾಡ (28) ಎಂದು ಗುರುತಿಸಲಾಗಿದೆ. 

  ಬಾಲಕಿ ನೀಡಿದ ಮಾಹಿತಿ ಆಧರಿಸಿ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಮತ್ತು ಎಸ್‌ಸಿ, ಎಸ್‌ಟಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 

  ಅಕ್ಷಯ್ ಬೆರಿಪದವಿನಲ್ಲಿ ಅಣ್ಣನ ಮನೆಯಲ್ಲಿದ್ದುಕೊಂಡು ಪೈಂಟಿಂಗ್ ಕೆಲಸ ನಿರ್ವಹಿಸುತ್ತಿದ್ದ. ಕಮಲಾಕ್ಷ ಗಾರೆ ಕೆಲಸ ಹಾಗೂ ಸುಕುಮಾರ ಚಾಲಕ ವೃತ್ತಿಯನ್ನು ಮಾಡುತ್ತಿದ್ದ. ಬಂಧಿತರು ಸಂಘಪರಿವಾರದ ಕಾರ್ಯಕರ್ತರು ಎಂದು ಪೊಲೀಸರು ತಿಳಿಸಿದ್ದಾರೆ. 

  ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಲಕಿಯನ್ನು 2019 ರಲ್ಲಿ ಆಕೆಯ ಸಂಬಂಧಿಕರ ಮನೆಯಲ್ಲಿ ಜಯಪ್ರಕಾಶ್‌ ಎಂಬಾತ ಅತ್ಯಾಚಾರ ನಡೆಸಿದ್ದ.‌ ಕಳೆದ ಜನವರಿಯಲ್ಲಿ ಅಕ್ಷಯ್‌ ಎಂಬಾತ ಬೆರಿಪದವು ಶಾಲೆಯ ಬಳಿಗೆ ಬಂದು ಬೇರೆ ಬೇರೆ ದಿನಗಳಲ್ಲಿ 3 ಬಾರಿ ಅತ್ಯಾಚಾರ ನಡೆಸಿದ್ದಾನೆ. 

  ಕಳೆದ ಮೇ ತಿಂಗಳಿನಲ್ಲಿ ಬೆರಿಪದವು ರಾಜ ಎಂಬಾತ ಬಾಲಕಿಗೆ ಕರೆ ಮಾಡಿ ಮಾತನಾಡುತ್ತಿದ್ದ. ಬೆರಿಪದವು ವಿದ್ಯಾರಣ್ಯ ಶಾಲೆಯ ಗುಡ್ಡ ಜಾಗಕ್ಕೆ ಬರಲು ಹೇಳಿ, ಬಾಲಕಿಯನ್ನು ಮದುವೆಯಾಗುತ್ತೇನೆಂದು ಪುಸಲಾಯಿಸಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ನಡೆಸಿರುತ್ತಾನೆ. 

  ಕಳೆದ ಜೂನ್‌ ತಿಂಗಳಿನ ಮೊದಲ ವಾರದಲ್ಲಿ ಅಚ್ಚು ಯಾನೆ ಅಕ್ಷಯ್‌ ಎಂಬಾತನ ಮುಖಾಂತರ ಸುಕುಮಾರ ಪರಿಚಯಿಸಿಕೊಂಡು ಮದುವೆಯಾಗುತ್ತೇನೆಂದು ಬೆರಿಪದವು ಎಂಬಲ್ಲಿಗೆ ಬರಲು ಹೇಳಿ ಅಲ್ಲಿನ ವಿದ್ಯಾರಣ್ಯ ಶಾಲೆಯ ಗುಡ್ಡ ಜಾಗದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. 

  ಅಲ್ಲದೇ 2023ರ ಜುಲೈ 28ರಂದು ರಾತ್ರಿ ವೇಳೆ ಕಮಾಲಾಕ್ಷ ಬೆಳ್ಚಡನು ಮದುವೆಯಾಗುತ್ತೇನೆಂದು ಭರವಸೆ ನೀಡಿದ್ದ. ಅಲ್ಲದೇ ಆತನ ಮನೆಯಾದ ಬಾಯಾರು ಗ್ರಾಮದಲ್ಲಿರುವ ಅವರ ಸಂಬಂಧಿಯ ಖಾಲಿ ಮನೆಗೆ ಬರಲು ಹೇಳಿ ಬಾಲಕಿಯು ಹೋದಾಗ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. 

  ಈ ಎಲ್ಲ ಘಟನೆಗಳನ್ನು ಬಾಲಕಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದು, ಅದರಂತೆ ಪೋಕ್ಸೋ, ಅತ್ಯಾಚಾರ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Related Posts

ಸಂವಿಧಾನ ಕೊಟ್ಟ ಕಾನೂನಿನ ಮೂಲಕ ರಕ್ತ ಚಂದನದ ಕಳ್ಳ ಪುಷ್ಪನನ್ನು ಕರ್ನಾಟಕದಲ್ಲಿ ಬಂಧಿಸಿದ ಧೀರ ಭಗತ್ ರಾಯ್

ಬೆಂಗಳೂರು: ಬಹುಕೋಟಿಯ ಸಿನಿಮಾ ಪುಷ್ಪ 2 ಕಳೆದ ಗುರುವಾರ ಬಿಡುಗಡೆಗೊಂಡಿದ್ದು ಕರ್ನಾಟಕದ ಬಹುತೇಕ ಚಿತ್ರಮಂದಿರಗಳನ್ನು ಆವರಿಸಿಬಿಟ್ಟಿದ್ದ, ಎಲ್ಲರೂ ಕೂಡ ಪುಷ್ಪ ಟು ಚಿತ್ರವನ್ನು ನೋಡಲು ತುದಿಕಾಳಿನಲ್ಲಿ ಕಾದು ನಿಂತಿದ್ದರು. ಆದರೆ ಚಿತ್ರತಂಡವು ಪ್ರೇಕ್ಷಕರ ಈ ಎಲ್ಲಾ ಭರವಸೆಗಳನ್ನು ಸಂಪೂರ್ಣವಾಗಿ ಹುಸಿ ಮಾಡಿದೆ…

ಪುಷ್ಪ 2 ಚಿತ್ರ ಬಾಯ್ ಕಟ್ ಗೆ ಕರವೆ ಕರೆ : ಶಂಕರ್ ಗೌಡ

ಬೆಂಗಳೂರು: ಪುಷ್ಪ 2 ಚಿತ್ರವು ಇದೆ ತಿಂಗಳ 05 ನೇ ತಾರೀಖು ಬಿಡುಗಡೆಗೊಳ್ಳುಲ್ಲು ಸಜ್ಜಾಗಿದ್ದು ಚಿತ್ರಕ್ಕೆ ಈಗ ಬಾಯ್ ಕಟ್ ಅಭಿಯಾನದ ಬಿಸಿ ಮುಟ್ಟಿದೆ. ಕರ್ನಾಟಕದಲ್ಲಿ ಕನ್ನಡಿಗರೆ ಸಾರ್ವಭೌಮ ಕನ್ನಡ ಚಿತ್ರಗಳಿಗೆ ಹೆಚ್ಚು ಚಿತ್ರಮಂದಿರಗಳನ್ನು ಕೊಡಬೇಕು ಎಂದು ತಿಳಿಸಿದ್ದಾರೆ. ಹಾಗೇಯೆ ಪುಷ್ಪ…

Leave a Reply

Your email address will not be published. Required fields are marked *