ಮೂಲಭೂತ ಸೌಕರ್ಯಗಳ ಕೊರತೆಯ ಅವ್ಯವಸ್ಥೆಯೊಂದಿಗೆ ಪ.ಪೂ ಕಾಲೇಜು ಹಂತದ ತಾಲ್ಲೂಕು ಕ್ರೀಡಾ ಕೂಟ ಮುಕ್ತಾಯ.!

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಪದವಿ ಪೂರ್ವ ಶಿಕ್ಷಣ ಇಲಾಖೆಯು ಆರೋಜಿಸಿದ್ದಂತಹ ಕ್ರೀಡಾಕೂಟವನ್ನು ದಿನಾಂಕ 26 ನೇ ತಾರೀಖಿನ ಸೋಮವಾರದಂದು 10:45 ಕ್ಕೆ ಉದ್ಘಾಟಿಸಲಾಯಿತು.

12 ಗಂಟೆಯ ವರೆಗೂ ಬಿಸಿಲಿನಲ್ಲಿ ಭಾಷಣ, ಮಕ್ಕಳು ಹೈರಾಣು

ಉದ್ಘಾಟನೆಯ ನಂತರ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಂದಂತಹ ಮಕ್ಕಳೆಲ್ಲ 12 ಗಂಟೆಯ ವರೆಗೂ ವೇದಿಕೆಯ ಭಾಷಣಗಳನ್ನು ಕೇಳಿಯೆ ಬಿಸಿಲಿನಲ್ಲಿ ಕುಳಿತು ಸಾಕಪ್ಪ ಈ ಕ್ರೀಡೆ! ಎನ್ನುವಷ್ಟರ ಮಟ್ಟಿಗೆ ತಮ್ಮ ಕ್ರೀಡಾಸಕ್ತಿಯನ್ನು ಕಳೆದುಕೊಂಡುರು, ಇನ್ನೇನು ಬಿಸಿಲಿನಲ್ಲಿ ಕುಳಿತು ಸುಸ್ತಾದ ಮಕ್ಕಳು ಎದ್ದು ಹೋಗಿ ಬಿಡೋಣಾ ಎನ್ನುವಷ್ಟರಲ್ಲಿ ಕ್ರೀಡಾ ಕೂಟವನ್ನು ಪ್ರಾರಂಭ ಮಾಡಲಾಯಿತು.

ಮೊದಲಿಗೆ 1500 ಮೀಟರಗಳ ಓಟದಿಂದ ಪ್ರಾರಂಭವಾದ ಕ್ರೀಡಾ ಕೂಟದಲ್ಲಿ ಓಟದ ವಿಭಾಗದಲ್ಲಿ ಭಾಗವಹಿಸಿದಂತಹ ವಿದ್ಯಾರ್ಥಿಗಳಿಗೆ ಸರಿಯಾದ ಟ್ಯಾಕ್ ಮಾರ್ಕಿಂಗ್ ವ್ಯವಸ್ಥೆಯಿಲ್ಲದೆ ಎಲ್ಲಿ ಓಡಬೇಕು ಎಲ್ಲಿ ಓಡಬಾರದು ಎಂಬ ಗೋಜಿಗೆ ಸಿಲುಕಿ ಪೇಚಾಡುವ ಪರಿಸ್ಥಿತಿಯಲ್ಲಿ ನಿರಾಸಕ್ತರಾದರು.

1500 ಮೀ ಓಟ ಪ್ರಾರಂಭ

ಇನ್ನೂ ಓಟದ ವಿಭಾಗದಲ್ಲಿ ಕಂಡ ಆ ವ್ಯವಸ್ಥೆಯೆ ಎಸೆತ ವಿಭಾಗಳಲ್ಲಿ, ಜಿಗಿತ ವಿಭಾಗಗಳಲ್ಲಿ ಕಂಡು ಬಂದಿದ್ದು ತಾಲ್ಲೂಕಿನಲ್ಲಿ ಕ್ರೀಡೆಗೆ ಯಾವ ರೀತಿಯ ಪ್ರೋತ್ಸಾಹವನ್ನು ತಾಲ್ಲೂಕು ಆಡಳಿತ ಮತ್ತ ಪದವಿ ಪೂರ್ವ ಕಾಲೇಜು ವಿಭಾಗ ನೀಡುತ್ತಿದ್ದಾರೆ ಎಂಬುದನ್ನು ಉಹಿಸಬೇಕಿದೆ.

ನೆಲಮಂಗಲ ತಾಲ್ಲೂಕಿನಲ್ಲಿರುವ ಪದವಿ ಪೂರ್ವ ಕಾಲೇಜುಗಳಲ್ಲಿ ಯಾವುದೆ ದೈಹಿಕ ಶಿಕ್ಷಣದ ನಿರ್ದೇಶಕರನ್ನು ನೇಮಕ ಮಾಡಿಕೊಳ್ಳದೆ ಇರುವುದು ಕಾಲೇಜು ಆಡಳಿತ ಮಂಡಳಿಗೆ ಕ್ರೀಡಾಸಾಕ್ತಿಯ ಮಕ್ಕಳ ಮೇಲಿರುವ ನಿರಾಸಕ್ತಿಯನ್ನು ತೋರುತ್ತದೆ, ಕ್ರೀಡೆ ಇವರ್ಯಾರಿಗೂ ಬೇಡವಾಗದೆ ಪಠ್ಯ ಶಿಕ್ಷಣದ ಜೊತೆ ಅಳತೆಗೂ ಮೀರಿ ಶುಲ್ಕವನ್ನು ಕಟ್ಟಿಸಿಕೊಂಡು ಕಾಲೇಜುಗಳನ್ನು ನಡೆಸಿಕೊಂಡು ಹೋದರೆ ಸಾಕಪ್ಪ ಎಂಬ ವ್ಯವಸ್ಥೆಯು ಎದ್ದು ಕಾಣುತ್ತಿದೆ.

ಸರಿಯಾದ ಟ್ರಾಕ್ ವ್ಯವಸ್ಥೆ ಇಲ್ಲದಿರುವುದು

ಕ್ರೀಡಾ ಕೂಡದ ಆಯೋಜನೆಯು ಬೇರೆ ಬೇರೆ ಸ್ಥಳಗಳಲ್ಲಿ ಆಯೋಜನೆಗೊಂಡಿದ್ಡು ಕನಿಷ್ಠ ಅಂಬೇಡ್ಕರ್ ಕ್ರೀಡಾಂಗಣ ಬಿಟ್ಟರೆ ಇನ್ಯಾವುದೆ ಸ್ಥಳಗಲ್ಲಿ ಆಂಬುಲೆನ್ಸ್ ಅಥವ ಪ್ರಥಮ ಚಿಕಿತ್ಸೆಯ ವ್ಯವಸ್ಥೆಯು ಇಲ್ಲದ ಕಾರಣ ಆಟವಾಡುವ ಸಂದರ್ಭದಲ್ಲಿ ಗಾಯಗಳಾದಗ ಸ್ವತಃ ವಿದ್ಯಾರ್ಥಿಗಳೆ ನೇರವಾಗಿ ಆಸ್ಪತ್ರೆಗೆ ಬಂದಂತಹ ಉದಾಹರಣೆಗಳು ಕಂಡದ್ದುಂಟು.

ಸಮವಸ್ತ್ರ ಬದಲಿಸಲು ಹೆಣ್ಣು ಮಕ್ಕಳ ಪರದಾಟ!

ಕಾಲೇಜು ಸಮವಸ್ತ್ರದಲ್ಲಿ ಕ್ರೀಡಾಂಗಕ್ಕೆ ಬಂದಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಂದಿದ್ದ ಹೆಣ್ಣು ಮಕ್ಕಳು ಕ್ರೀಡಾವಸ್ತ್ರವನ್ನು ಬದಲಿಸಲು ಒಂದು ಕೊಠಡಿಯ ವ್ಯವಸ್ಥೆಯನ್ನು ಮಾಡದ ಕ್ರೀಡಾಕೂಡ ಆಯೋಜಕರು.

ಕ್ರೀಡೆಯಲ್ಲಿ ಭಾಗವಹಿಸಲು ಮಾರ್ಚ್ ಫಾಸ್ಟ್ ನಲ್ಲಿ ಸಮವಸ್ತ್ರ ಧರಿಸಿಕೊಂಡು ಬಂದಿದ್ದ ಹೆಣ್ಣು ಮಕ್ಕಳು ಇನ್ನೆನೂ ಕ್ರೀಡಾಕೂಟ ಪ್ರಾರಂಭವಾಗಿಯೆ ಬಿಡುತ್ತದೆ ಎಂಬ ಸಂಧರ್ಭದಲ್ಲಿ ಕ್ರೀಡಾಸಮವಸ್ತ್ರವನ್ನು ಬದಲಿಸಲು ಕೊಠಡಿಯ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಶೌಚಾಲಯದಲ್ಲಿ ಸಮವಸ್ತ್ರವನ್ನು ಬದಲಿಸಿಕೊಂಡ ಬೇಸರವನ್ನು ವ್ಯಕ್ತಪಡಿಸಿದರು.

ಜಾವಲಿಸ್ ಎಸೆತದಲ್ಲಿ ಪಾಲನೆಯಾಗದ ಕಾನೂನು ವಿದ್ಯಾರ್ಥಿಗಳಿಗೆ ಮಾಡಿದ ಮಹಾನ್ ಮೋಸ!

ಜಾವಲಿನ ಎಸೆತದಲ್ಲಿ ಮೂರು ಬಾರಿ ಎಸೆಯಲು ಅವಕಾಶಗಳಿದ್ದರೂ ಕೂಡ ಕ್ರೀಡಾ ಕೂಟವನ್ನು ಬೇಗ ಮುಗಿಸಬೇಕಪ್ಪ ಎಂಬ ಮನಸ್ಥಿತಿಯಲ್ಲಿ ಅಲ್ಲಿದ್ದಂತ ದೈಹಿಕ ಶಿಕ್ಷಕರು ಒಂದೆ ಬಾರಿಗೆ ಎಸೆಯಲು ಅವಕಾಶ ಮಾಡಿಕೊಟ್ಟು ಕೆಲವು ವಿದ್ಯಾರ್ಥಿಗಳಿಗೆ ಅನುಕೂಲ ಮತ್ತು ಕೆಲವರಿಗೆ ಅನಾನೂಕೂಲ‌ ಮಾಡಿಕೊಟ್ಟು ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಬೇಕು ಎಂದು ಆಸೆಗಳನ್ನು ಹೊಂದಿದ್ದ ಜಾವಲಿನ್ ಎಸೆಯಲು ಬಂದಿದ್ದ ವಿದ್ಯಾರ್ಥಿಗಳ ಭವಿಷ್ಯವು ನೂಚ್ಚುನೂರು ಮಾಡುವಂತಹ ಮನಸ್ಥಿತಿಯಲ್ಲಿ ಆಕ್ರೋಶವನ್ನು ಹೊರಹಾಕಿ ಜೀವಮಾನದಲ್ಲೆ ತಮಗಾದ ಅನ್ಯಾಯವನ್ನು ಮರೆಯದೆ ಹೊರನಡೆದರು.

ಜಾವಲಿನ್ ಎಸೆತದ ಕೋರ್ಟ್

ಈ ಕ್ರೀಡಾಕೂಟವನ್ನು ಒಟ್ಟಾರೆ ಇಷ್ಟೆಲ್ಲಾ ಸಮಸ್ಯೆಗಳ ಒಳಗೊಂಡುಕೂಡ ತಾಲ್ಲೂಕಿನ ಶಾಲಾ ಶಿಕ್ಷಣ ಇಲಾಖೆಯ ದೈಹಿಕ ನಡೆಸಿಕೊಟ್ಟರು.

ಈ ಅವ್ಯವಸ್ಥೆಯ ವಿಚಾರವಾಗಿ ಸಂಬಂಧ ಪಟ್ಟ ಅಧಿಕಾರಿಗಳು ಯಾವುದಾದರೂ ಕ್ರಮ ವಹಿಸಿ ಮಕ್ಕಳಿಗೆ ನ್ಯಾಯ ಸಿಗುವಂತೆ ಮಾಡುತ್ತಾರೆಯೋ? ಅಥವ‌ ಇನ್ನೂ ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಗಮನಹರಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆ ಕ್ರೀಡಾಸಕ್ತಿಯೊಂದಿದ ಮಕ್ಕಳಿಗಂತು ಅನ್ಯಾಯವಾಗದಿರಲಿ.

Related Posts

ನೆಲಮಂಗಲ: 15 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ 70 ರ ಮುದುಕ

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದ್ದು 15 ವರ್ಷದ ಬಾಲಕಿ ಮೇಲೆ 70 ವರ್ಷದ ವೃದ್ಧನಿಂದ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ ಯಾರೂ ಇಲ್ಲದ…

ತಾನು ಕೊಂದಿದ್ದ ಮಹಿಳೆಯ ದೇಹವನ್ನು ಅಂತ್ಯಸಂಸ್ಕಾರ ವೇಳೆ ಹೊತ್ತೊಯ್ಯಲು ಯತ್ನಿಸಿದ ಚಿರತೆ! ನೆಲಮಂಗಲದಲ್ಲೊಂದು ಭಯಾನಕ ಘಟನೆ

ನೆಲಮಂಗಲ: ಒಂಟಿಯಾಗಿ ಸಿಗುವವರ ಮೇಲೆ ದಾಳಿ ಮಾಡಿ ಕೊಂದು ತಿನ್ನುವ ಚಿರತೆ ಜನ ಸಮೂಹವನ್ನು ಕಂಡಾಗ ಅಡಗಿ ಕುಳಿತುಕೊಳ್ಳುತ್ತದೆ. ಆದರೆ ನೆಲಮಂಗಲದಲ್ಲಿ ಮಾತ್ರ ಇದಕ್ಕೆ ವಿರೋಧವೆಂಬಂತೆ ಚಿರತೆಯೊಂದು ಜನರು ಮೃತ ಮಹಿಳೆಯ ಶವವನ್ನು ಕಾಯುತ್ತಿದ್ದಾಗಲೇ ಅವರನ್ನು ಬೆದರಿಸಿ ಮೃತದೇಹವನ್ನು ಹೊತ್ತೊಯ್ಯಲು ಯತ್ನಿಸಿದೆ. ಬೆಂಗಳೂರು…

Leave a Reply

Your email address will not be published. Required fields are marked *