ಇಡೀ ದೇಶದಲ್ಲಿ ಅನಾವಶ್ಯಕ ಹಿಂದಿ ಹೇರಿಕೆಯನ್ನು ಅನಗತ್ಯ ಹಾಗೂ ಅನಾವಶ್ಯಕವಾಗಿ ಈ ಹಿಂದಿನ ಹಾಗೂ ಈಗೀನ ಒಕ್ಕೂಟ ಸರ್ಕಾರಗಳು ತ್ರಿಭಾಷಾ ನೀತಿ ಎಂಬ ಅಸ್ತ್ರದ ಮೂಲಕ ಹಿಂದಿ ಹೇರಲು, ಕರ್ನಾಟಕ ಹಿಂದಿ ಹೇರಿಕೆಯ ಪ್ರಯೋಗಶಾಲೆಯಾಗಿ ಮಾಮಾರ್ಪಟ್ಟಿದೆಯೇ?!
ಇದೇ ನಿಟ್ಟಿನಲ್ಲಿ ಕರ್ನಾಟಕದ ಮಕ್ಕಳಿಗೆ ಪ್ರಾದೇಶಿಕ ಭಾಷೆಯಾಗಿ ಕನ್ನಡವನ್ನು ಹಾಗೂ ವಿಶ್ವವ್ಯಾಪಿ ಸಂವಹನಕ್ಕೆ ದ್ವೀತಿಯ ಭಾಷೆಯಾಗಿ ಆಂಗ್ಲಭಾಷೆಯನ್ನು ಕಲಿಯುತ್ತಿದ್ದಾರೆ, ಅದಲ್ಲದೇ ಅನೌಪಚಾರಿಕವಾಗಿದ್ದ ಹಿಂದಿ ಭಾಷೆಯನ್ನೂ 100 ಅಂಕಗಳ ಪಠ್ಯವಾಗಿ ಮಾರ್ಪಾಡಿಸಿ ಮಕ್ಕಳ ಮೇಲೆ ಹೇರಲಾಗಿದೆ.
ಈ ಕಾರಣದಿಂದ ಮಕ್ಕಳು ಗಣಿತ, ವಿಜ್ಞಾನ ಪಠ್ಯಗಳಿಗೆ ಹೆಚ್ಚಿನ ಗಮನ ನೀಡಲಾಗುತ್ತಿಲ್ಲ.
ಅನಾವಶ್ಯಕ ಹಿಂದಿ ಪಠ್ಯದ ಹೇರಿಕೆಯಿಂದ ಮಕ್ಕಳ ಶಿಕ್ಷಣ ಹಾಗೂ ಮುಂದಿನ ಭವಿಷ್ಯದ ಜೀವನವು ಮಾರಕವಾಗಿದೆ.
ಈ ಕಾರಣದಿಂದ ಕರ್ನಾಟಕ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರಿ ಶಾಲೆಗಳು ಹಾಗೂ ರಾಜ್ಯ ಪಠ್ಯಕ್ರಮದಲ್ಲಿ ಶಾಲೆ ನಡೆಸುತ್ತಿರುವ ರಾಜ್ಯದ ಖಾಸಗಿ,ಅರೆಖಾಸಗಿ ಹಾಗೂ ಅನುದಾನಿತ ಶಾಲೆಗಳು ಸೇರಿದಂತೆ ಮಠಮಾನ್ಯಗಳ ಶಿಕ್ಷಣ ಸಂಸ್ಥೆಗಳು ಸೇರಿದಂತೆ
ಎಲ್ಲಾ ಶೈಕ್ಷಣಿಕ ವಿಭಾಗಗಳಲ್ಲಿ “ದ್ವಿಭಾಷಾ ನೀತಿಬೇಕು-ತ್ರಿಭಾಷಾ ನೀತಿ ಸಾಕು”. ಎಂಬ ಜನಾಂದೋಲನದ ಜನಧ್ವನಿಗೆ ಮಣಿದು ಹಿಂದಿ ಪಠ್ಯವನ್ನು ರದ್ದುಗೊಳಿಸಿ,ರಾಜ್ಯದ ಮಕ್ಕಳು ಶೈಕ್ಷಣಿಕ ಸ್ವಾವಲಂಬನೆ ಸಾಧಿಸುವ ಮುಖೇನ ರಾಜ್ಯದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು
ಕರ್ನಾಟಕ ರಾಜ್ಯದಲ್ಲಿರುವ ಕೇಂದ್ರೀಯ ಸದನ ಶಿಕ್ಷಣ ಸಂಸ್ಥೆಗಳು,ಸಿ ಬಿ ಎಸ್ ಸಿ &ಐ ಸಿ ಎಸ್ ಸಿ ಸೇರಿದಂತೆ ನವೋದಯ,ಕಿತ್ತೂರರಾಣಿ ಚೆನ್ನಮ್ಮ,ಮುರಾರ್ಜಿ ದೇಸಾಯಿ ವಸತಿಶಾಲೆಗಳು ಸೇರಿದಂತೆ ರಾಜ್ಯದ ಸರ್ಕಾರಿ,ಅರೆಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಹ 1ರಿಂದ 10ನೇ ತರಗತಿಯವರೆಗೆ ಪ್ರಥಮ ಭಾಷೆಯಾಗಿ ಕನ್ನಡವನ್ನೇ ಕಲಿಸಬೇಕು.
1968 ರಲ್ಲಿ ಒಕ್ಕೂಟ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ನಡೆದ ಭಾಷಾ ಒಪ್ಪಂದದ ಪ್ರಕಾರ,ಕರ್ನಾಟಕ ರಾಜ್ಯಸರ್ಕಾರವು ತ್ರಿಭಾಷಾ ನೀತಿಯನ್ನು ಈ ದಿನದವರೆಗೂ ಅನುಮೊದಿಸಲ್ಪಟ್ಟಿಲ್ಲವಾದರೂ,
ಅನಾವಶ್ಯಕ ಹಿಂದಿ ಹೇರಿಕೆ ಮಾಡುತ್ತಿರುವ ಕಾರಣವೇನು?
ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಸರ್ಕಾರಗಳು ಹಿಂದಿ ಹೇರಿಕೆ ತಡೆಯುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳೇನು?!.
1968 ರ ತ್ರಿಭಾಷಾ ನೀತಿಯನ್ನು ಅಳವಡಿಕೆ ಮಾಡಿಕೊಳ್ಳುವುದು ಕಡ್ಡಾಯವಲ್ಲ ಹಾಗೂ ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟ ವಿಚಾರವಾಗಿದೆ.
ತ್ರಿಭಾಷಾ ನೀತಿಯ ಸಂಬಂಧ ಪರಸ್ಪರ ಹೊಂದಾಣಿಕೆ ಮುಖೇನ, ಉತ್ತರ ಭಾರತದ ರಾಜ್ಯಗಳ ಒಂದು ಭಾಷೆಯಾದ ಹಿಂದಿಯನ್ನೂ, ದಕ್ಷಿಣ ಭಾರತದ ಒಕ್ಕೂಟ ರಾಜ್ಯಗಳ ಮೇಲೆ ಹೇರಿಕೆ ಮಾಡುವುದಾದಲ್ಲಿ?! ದಕ್ಷಿಣ
ಭಾರತದ ಯಾವುದಾದರೂ ಒಂದು ರಾಜ್ಯದ ಭಾಷೆಯನ್ನು, ಉತ್ತರ ಭಾರತದ ರಾಜ್ಯಗಳ ಮೇಲೆ ಹೇರಬೇಕಾದದ್ದೂ ಸಮೋಚಿತ ಬೆಳವಣಿಗೆ,ಆದರೆ ಅದನ್ನು ಮಾಡದ ಒಕ್ಕೂಟ ಸರ್ಕಾರಗಳು ವ್ಯವಸ್ಥಿತವಾಗಿ ದಕ್ಷಿಣ ಭಾರತದ ನಮ್ಮ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಿರುವುದು ತೀವ್ರ ಖಂಡನೀಯ.
ಹಿಂದಿ ಭಾಷೆಯ ಕಲಿಕೆಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆ.
ಇದರಿಂದ ಉಳಿದ ವಿಷಯಗಳಲ್ಲಿ ಏಕಾಗ್ರತೆ ಒಡಮೂಡದೆ ನಾಡಿನ ಪ್ರತಿಭಾವಂತ ಮಕ್ಕಳು ಕಡಿಮೆ ಅಂಕಗಳಿಗೆ ತೃಪ್ತಿ ಪಟ್ಟುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.
ಬ್ಯಾಂಕಿಂಗ್,ರೈಲ್ವೆ ಸೇರಿದಂತೆ ಒಕ್ಕೂಟ ಸರ್ಕಾರದ ಉದ್ಯೋಗಗಳಿಂದ ವಂಚಿತರಾಗುವುದಲ್ಲದೇ,ರಾಜ್ಯದ ಪ್ರತಿಷ್ಠಿತ ಕಂಪನಿಗಳ ಉದ್ಯೋಗಗಳು ಪರರಾಜ್ಯದವರ ಪಾಲಾಗಿವೆ.ವೈದ್ಯಕೀಯ,ದಂತ ವೈದ್ಯಕೀಯ ಹಾಗೂ ಐಐಟಿಗಳಂತ ಪ್ರತಿಷ್ಠಿತ ಉನ್ನತ ವ್ಯಾಸಂಗಕ್ಕೆ ತೆರಳಲು ನಾಡಿನ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ.
ನೆರೆಯ ತಮಿಳುನಾಡು ಮಾದರಿಯಲ್ಲಿ ದ್ವಿಭಾಷಾ ನೀತಿಯ ಪಠ್ಯಕ್ರಮವನ್ನು ರಾಜ್ಯದ ಶಿಕ್ಷಣ ಕ್ರಮದಲ್ಲಿ 11 ದಿನಗಳ ಗಡುವಿನಲ್ಲಿ ಜಾರಿಗೊಳಿಸಬೇಕು.
ಮೊದಲ ಹಂತದ 440 ಹಾಗೂ ಎರಡನೇ ಹಂತದಲ್ಲಿ 937 ಉರ್ದು ಮಾಧ್ಯಮ ಶಾಲೆಗಳನ್ನೂ,ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಮಾರ್ಪಾಡು ಮಾಡುತ್ತಿರುವುದು ಸರಿಯಷ್ಟೇ?
ಸದರಿ ಈ ಶಾಲೆಗಳನ್ನು ಕನ್ನಡ ಮಾಧ್ಯಮ ಶಾಲೆಗಳಾಗಿ ಪರಿವರ್ತಿಸುವ ಸುತ್ತೊಲೆಯನ್ನು ಈ ಕೂಡಲೇ ತುರ್ತು ಹೊರಡಿಸಬೇಕು.
ಈ ನಿಟ್ಟಿನಲ್ಲಿ ರಾಜ್ಯದ ಮಕ್ಕಳ ಶೈಕ್ಷಣಿಕ ಹಾಗೂ ರಾಜ್ಯದ ಹಿತಾಸಕ್ತಿಗೆ ಪೂರಕವಾಗಿ ತಾವು ಸ್ಪಂದಿಸುವಂತೆ ಯುವಶಕ್ತಿ ಕರ್ನಾಟಕದ ರಾಜ್ಯಧ್ಯಕ್ಷರಾದ ಚಿಕ್ಕಮಾರನಹಳ್ಳಿ ಅನಂತ್ ಅವರು ಕನ್ನಡ ದಿನಪತ್ರಿಕೆಯ ಸಂಪಾದಕರು & ವರದಿಗಾರರಲ್ಲಿ ಪತ್ರಿಕಾ ಪ್ರಕಟಣೆ ನೀಡುವ ಮೂಲಕ ಒತ್ತಾಯ ಮಾಡಿದರು.