ಗೃಹ ಸಚಿವ ಪರಮೇಶ್ವರ್ ಕ್ಷೇತ್ರದಲ್ಲಿ ಅಮಾನವೀಯ ಘಟನೆ: ಬರಿಗೈಲಿ ಮಲ ಬಾಚುವ ಪದ್ಧತಿ ಜೀವಂತ

ತುಮಕೂರು: ಗೃಹ ಸಚಿವ ಜಿ ಪರಮೇಶ್ವರ ಅವರ ವಿಧಾನಸಭಾ ಕ್ಷೇತ್ರದಲ್ಲೇ ಬರಿಗೈಲಿ ಮಲ ಬಾಚುವ ಪದ್ಧತಿ ಜೀವಂತ ಇರುವುದು ಗೊತ್ತಾಗಿದೆ. ತುಮಕೂರಿನ ಕೊರಟಗೆರೆ ಕೆಎಸ್​​ಆರ್​ಟಿಸಿ ಬಸ್ ನಿಲ್ದಾಣದ ಶೌಚಾಲಯದ ಪಿಟ್​​ನಿಂದ ಹೊರಬಂದಿದ್ದ ಮಲವನ್ನು ಬಾಚಿ ಎತ್ತಿಹಾಕಲು ಹಿಂದುಳಿದ ಸಮುದಾಯದವರ ಬಳಕೆ ಮಾಡಲಾಗಿದೆ. ಬರಿಗೈಯಲ್ಲಿ ಗುದ್ದಲಿ ಹಿಡಿದು ಮಲ ಸ್ವಚ್ಛಗೊಳಿಸುತ್ತಿದ್ದ ಬಾಲಕ ಹಾಗೂ ವ್ಯಕ್ತಿ ಬಳಿ ಆ ಬಗ್ಗೆ ಪ್ರಶ್ನಿಸುತ್ತಿದ್ದಂತೆಯೇ ಕೆಲಸ ಸ್ಥಗಿತಗೊಳಿಸುವಂತೆ ಅಧಿಕಾರಿ, ಸಿಬ್ಬಂದಿ ಸನ್ನೆ ಮೂಲಕ ತಿಳಿಸಿದ್ದಾರೆ. ಕೂಡಲೇ ಕೆಲಸ ಬಿಟ್ಟು ಬಾಲಕ ಹಾಗೂ ವ್ಯಕ್ತಿ ತೆರಳಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡದಂತೆ ಬಾಲಕನಿಗೆ ಸಿಬ್ಬಂದಿ ಸನ್ನೆ ಮಾಡುತ್ತಿದ್ದರು.

ಬಸ್ ನಿಲ್ದಾಣದ ಆವರಣದಲ್ಲಿರುವ ಪ್ರಯಾಣಿಕರ ಶೌಚಾಲಯದ ಪಿಟ್ ತುಂಬಿ ಫ್ಲಾಟ್ ಫಾರಂಗೆ ಹರಿದಿತ್ತು. ಪ್ರಯಾಣಿಕರು ದುರ್ನಾತದಲ್ಲೇ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ನಿಲ್ದಾಣದ ಫ್ಲಾಟ್ ಫಾರಂಗೆ ಹರಿಯುತ್ತಿದ್ದ ಮಲ ಸ್ವಚ್ಛಗೊಳಿಸಲು ಬಾಲಕನ ಬಳಸಲಾಗಿದೆ. ಆ ಮೂಲಕ ಮಲ ಹೊರುವ ಪದ್ಧತಿ ನಿಷೇಧ ಹಾಗೂ ಬಾಲ ಕಾರ್ಮಿಕ ಪದ್ಧತಿ ನಿಷೇದ ಕಾನೂನು ಉಲ್ಲಂಘನೆಯಾಗಿದೆ.

Related Posts

ದಲಿತ ಮಹಿಳೆ ಹತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ತುಮಕೂರು: 14 ವರ್ಷಗಳ ಹಿಂದೆ ದಲಿತ ಮಹಿಳೆಯೊಬ್ಬರನ್ನು ಹತ್ಯೆಗೈದ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 21 ಮಂದಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ. 2010ರ ಜೂನ್ 28ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ಡಾಬಾ…

ತುಮಕೂರಿನ ವಸಂತಪುರದಲ್ಲಿ ನಿರ್ಮಾಣವಾಗಲಿದೆ ಜಪಾನೀಸ್ ಇಂಡಸ್ಟ್ರಿಯಲ್ ಪಾರ್ಕ್!

ಬೆಂಗಳೂರು: ತುಮಕೂರಿನ ವಸಂತನರಸಾಪುರದಲ್ಲಿ ಎರಡನೇ ಜಪಾನೀಸ್ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಕೈಗಾರಿಕಾ ಅಭಿವೃದ್ಧಿ ಆಯುಕ್ತ ಮತ್ತು ಇನ್ವೆಸ್ಟ್ ಕರ್ನಾಟಕ ಫೋರಂನ ಸಿಇಒ ಗುಂಜನ್ ಕೃಷ್ಣ ಘೋಷಿಸಿದ್ದಾರೆ. ಇಂಡಿಯಾ ಜಪಾನ್ ಬಿಸಿನೆಸ್ ಶೃಂಗಸಭೆಯಲ್ಲಿ (ಐಜೆಬಿಎಸ್) ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ಶೀಘ್ರದಲ್ಲೇ ಹೊಸ…

Leave a Reply

Your email address will not be published. Required fields are marked *