ಗಂಡ್ಸಾಗಿದ್ದರೆ ಪೊಲೀಸ್​​ಗೆ ಹೊಡಿ ಎಂದ ತಾಯಿ: ನೆಲಮಂಗಲ ನಗರ ಠಾಣೆಯಲ್ಲಿ ಮಹಿಳಾ PSI ಮೇಲೆ ಹಲ್ಲೆ ಮಾಡಿದ ಮಗ.

ನೆಲಮಂಗಲ: ತಾಯಿಯ ಮಾತಿನಿಂದ ಪ್ರಚೋದನೆಗೊಂಡ ಮಗ ಮಹಿಳಾ ಪಿಎಸ್​ಐ ಮೇಲೆ ಹಲ್ಲೆ ಮಾಡಿದ್ದಾನೆ. ಮಧಸೂದನ್​ ಹಲ್ಲೆ ಮಾಡಿದ ಆರೋಪಿ. ಬಿಇ ಡ್ರಾಪ್​ಔಟ್ ಆಗಿರುವ ಮಧುಸೂದನ್​ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮುಕ್ತಿನಾಥೇಶ್ವರ ಬಡಾವಣೆಯಲ್ಲಿ ವಾಸವಾಗಿದ್ದಾನೆ.

ಮಧುಸೂದನ್​ ಕೆಲಸಕ್ಕೆ ಹೋಗದೆ ಮನೆಯಲ್ಲೇ ಕಾಲ ಕಳೆಯುತ್ತಿದ್ದನು. ಈ ವಿಚಾರವಾಗಿ ತಾಯಿ ಸುಶೀಲಮ್ಮ ಮತ್ತು ಮಧುಸೂದನ್​ ನಡುವೆ ಗಲಾಟೆ ನಡೆದಿದೆ. ಬಳಿಕ, ತಾಯಿ ಸುಶೀಲಮ್ಮ ಮಗನ ವಿರುದ್ಧ ನೆಲಮಂಗಲ ಟೌನ್​ ಠಾಣೆಗೆ ದೂರು ನೀಡಿದ್ದಾರೆ.

ನಂತರ, ಪೊಲೀಸರು ವಿಚಾರಣೆಗೆಂದು ಇಬ್ಬರನ್ನೂ ಠಾಣೆಗೆ ಕರೆಸಿದ್ದಾರೆ. ಪೊಲೀಸ್​ ಠಾಣೆಯಲ್ಲೇ ತಾಯಿ ಮತ್ತು ಮಗ ಜಗಳವಾಡಲು ಆರಂಭಿಸಿದ್ದಾರೆ. ಈ ವೇಳೆ ಮಹಿಳಾ ಪಿಎಸ್​ಐ ಜಯಂತಿ, ಮಧುಸೂದನ್​ಗೆ ಗದರಿಸಿ ಒಂದೇಟು ಹೊಡೆದಿದ್ದಾರೆ.

ಈ ಸಂದರ್ಭದಲ್ಲಿ ಸುಶೀಲಮ್ಮ, “ದೂರು ಕೊಟ್ಟು ಪೊಲೀಸರಿಂದ ಹೊಡೆಸಿದರೇ, ಪೊಲೀಸರಿಗೆ ತಿರುಗಿ ಹೊಡೆಯುವೆ ಅಂತ ಹೇಳುತ್ತಿದ್ದಿಯಲ್ಲ. ಈಗ ಹೊಡಿ ನೋಡೋಣ. ನೀನು ಗಂಡಸಾಗಿದ್ದರೆ ಪೊಲೀಸರಿಗೆ ಹೊಡೆದು ತೋರಿಸು. ಹೊಡಿ ಈಗ ಪೊಲೀಸರಿಗೆ ನೋಡೋಣ” ಎಂದು ಮಗ ಮಧುಸೂದನ್​ನನ್ನು ಪ್ರಚೋದಿಸಿದ್ದಾಳೆ. ಪ್ರಚೋದನೆಗೊಂಡ ಮಧುಸೂದನ್​ ಮಹಿಳಾ ಪಿಎಸ್​ಐ ಜಯಂತಿ ಮೇಲೆ ಹಲ್ಲೆ ಮಾಡಿದ್ದಾನೆ. ಮಹಿಳಾ ಪಿಎಸ್​​ಐ ಜಯಂತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ ರಾತ್ರಿ 10 ಗಂಟೆ ಸುಮಾರು ನೆಲಮಂಗಲ ಟೌನ್ ಠಾಣೆಯಲ್ಲಿ ಘಟನೆ ನಡೆದಿದೆ. ಮಧುಸೂದನ್​ ವಿರುದ್ಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಧುಸೂದನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಮಧುಸೂದನ್​ ವಿರುದ್ಧ ಕಲಂ-132 ,121(1 ),121(2),352, 54, ಜೊತೆಗೆ 3(5) ಬಿಎನ್ಎಸ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Related Posts

ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು ಹೇಳಿಕೆ: ಚಂದ್ರಶೇಖರ ಸ್ವಾಮೀಜಿ ವಿರುದ್ಧ FIR

ಬೆಂಗಳೂರು: ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು ಮತ್ತು ದೇಶದಲ್ಲಿ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ವಿರುದ್ಧ FIR ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಸೈಯ್ಯದ್ ಅಬ್ಬಾಸ್ ಎಂಬಾತ ಚಂದ್ರಶೇಖರ ಸ್ವಾಮೀಜಿ…

ನೆಲಮಂಗಲ: 15 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ 70 ರ ಮುದುಕ

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದ್ದು 15 ವರ್ಷದ ಬಾಲಕಿ ಮೇಲೆ 70 ವರ್ಷದ ವೃದ್ಧನಿಂದ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ ಯಾರೂ ಇಲ್ಲದ…

Leave a Reply

Your email address will not be published. Required fields are marked *