ನೈಜೇರಿಯಾದಲ್ಲಿ ಡಾ.ಬ್ರೋಗೆ ಚಾಕು ಇರಿದ್ರು, ಬ್ಲೇಡ್​ನಿಂದ ಬೆರಳು ಕತ್ತರಿಸಿದ್ರು! ವೈರಲ್‌ ಆದ ವಿಡಿಯೋ

ದೇಶ-ವಿದೇಶಗಳನ್ನು ಸುತ್ತುತ್ತಲೇ ಮನೆ ಮಾತಾಗಿರೋ  ಡಾ.ಬ್ರೋ ಈಗ ನೈಜೇರಿಯಾಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಹಿಂದಿನ ವಿಡಿಯೋಗಳಲ್ಲಿ, ಅಲ್ಲಿರುವ  ವಿಚಿತ್ರ ಜನರ ಪರಿಚಯ ಮಾಡಿಸಿದ್ದರು. ಚರಂಡಿ ಮೇಲೆಯೇ ಜನರು ಹೇಗೆ ಬದುಕಿತ್ತಿದ್ದಾರೆ ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದರು. ಅದರಲ್ಲಿಯೂ ವಿಶೇಷವಾಗಿ ನೈಜೇರಿಯಾ ಮಕ್ಕಳಿಗೆ ಕನ್ನಡ ಕಲಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದರು. ರಾಷ್ಟ್ರಭಾಷೆ ಕನ್ನಡ ಎಂದು ಹೇಳುವ ಮೂಲಕ ಕನ್ನಡಿಗರ ಮನ ಗೆದ್ದವರು ಡಾ.ಬ್ರೋ​ ಗಗನ್​.

ಕತ್ತೆ ಕಿರುಬ ಸೇರಿದಂತೆ ಭಯಾನಕ ಕಾಡು ಪ್ರಾಣಿಗಳ ಹಾಗೂ ವಿಷ ಸರ್ಪಗಳ ಜೊತೆ ನೈಜೇರಿಯಾದ ಮಕ್ಕಳೂ ಸೇರಿದಂತೆ ದೊಡ್ಡವರು ಹೇಗೆ ಪರಿಚಿತರಾಗಿದ್ದಾರೆ. ಕಾಡು ಪ್ರಾಣಿಗಳನ್ನು ಇಲ್ಲಿಯ ಜನರು ಹೇಗೆ ಪ್ರೀತಿಸುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.ಕತ್ತೆ ಕಿರುಬದ ಬಾಯಲ್ಲಿ ಸಲೀಸಾಗಿ ಜನರು ಕೈ ಹಾಕುತ್ತಾರೆ. ಆದರೆ ಅಪ್ಪಿ ತಪ್ಪಿ ಆ ಸಮಯದಲ್ಲಿ ಕತ್ತೆ ಕಿರುಬ ಬಾಯಿ ಮುಚ್ಚಿದರೆ ಅಂದರೆ ಅದರ ಒಂದೇ ಒಂದು ಹಲ್ಲು ಕೈಗೆ ತಾಗಿದರೂ ಮೈ ಪೂರ್ತಿ ಕೊಳೆತು ಹೋಗುತ್ತದೆ. ಇದರ ಹೊರತಾಗಿಯೂ ಅಲ್ಲಿಯ ಜನರು ಹೇಗೆ ಪ್ರಾಣಿಗಳ ಜೊತೆ ಪ್ರೀತಿಯಿಂದ ಇದ್ದಾರೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಇದೇ ವೇಳೆ, ನೈಜೇರಿಯಾದ ಜಾದೂಗಾರರೊಬ್ಬನ್ನು ಭೇಟಿಯಾಗಿದ್ದಾರೆ ಡಾ.ಬ್ರೋ. ಈ ಜಾದೂಗಾರ ಚಾಕುವಿನಿಂದ ಡಾ.ಬ್ರೋಗೆ ಇರಿದಿದ್ದಾನೆ, ಬ್ಲೇಡ್​ನಿಂದ ಕೊಯ್ದಿದ್ದಾನೆ. ಆದರೆ ಏನೂ ಆಗಲಿಲ್ಲ.  ಆದರೆ ಕುತೂಹಲದ ವಿಷಯ ಎಂದರೆ, ಅದೇ ಚಾಕು ಮತ್ತು ಬ್ಲೇಡ್​ನಿಂದ ಬೇರೆ ಕಡೆ ಕತ್ತರಿಸಿದಾಗ ಅದು ಕತ್ತರಿಸಿ ಹೋಗಿದೆ. ಇಂಥ ಭಯಾನಕ ಹಾಗೂ ಹಾಸ್ಯಮಯ ಸನ್ನಿವೇಶವನ್ನು ವಿಡಿಯೋದಲ್ಲಿ ತೋರಿಸಿದ್ದಾರೆ ಗಗನ್​. ಈ ಹಿಂದಿನ ವಿಡಿಯೋದಲ್ಲಿ ಅವರು, ಎಲ್ಲಕ್ಕಿಂತಲೂ ವಿಚಿತ್ರ ಎನಿಸಿರೋ ನೈಜೇರಿಯಾದ ಟ್ರೈನ್​ ಮಾರ್ಕೆಟ್​ ತೋರಿಸಿದ್ರು. ಟ್ರೇನ್​ ಮಾರ್ಕೆಟ್​ ಅಂದ್ರೆ ಪ್ರತಿನಿತ್ಯವೂ ಹಳಿಗಳ ಮೇಲೆಯೇ ಇಲ್ಲಿ ಸಂತೆ ನಡೆಯುತ್ತದೆ. ಅದ್ಯಾವ ಪರಿಯ ಸಂತೆ ಎಂದ್ರೆ ನೂರಾರು ಮಂದಿ ಈ ಸಂತೆಗೆ ಬರ್ತಾರೆ. ಅಲ್ಲಿಯೇ ಗಾಡಿಗಳೂ ಓಡಾಡ್ತಾ ಇರುತ್ತವೆ. ಭಾರತ ಸೇರಿದಂತೆ ಬಹುತೇಕ ಎಲ್ಲಾ ದೇಶಗಳಲ್ಲಿ ರೈಲು ಬರುವಾಗ ಬಾಗಿಲು ಹಾಕುವುದು, ಐದು ನಿಮಿಷ ಅತ್ತಿತ್ತ ಕಡೆ ವಾಹನ ಸವಾರರು ಕಾಯುವುದು… ಎಲ್ಲವೂ ಮಾಮೂಲಿ. ಇದು ಇಲ್ಲದ ಕಡೆ ಎಷ್ಟೋ ಬಾರಿ ಅಪಘಾತಗಳೂ ಆಗಿರುವುದು ಉಂಟು.  

ಆದರೆ ಇಲ್ಲಿ, ಹಳಿಗಳ ಮೇಲೆ ಪ್ರತಿನಿತ್ಯ ಸಂತೆ ನಡೆಯುತ್ತೆ. ದೂರದಿಂದ ಟ್ರೈನ್​ ಬರುವ ಶಬ್ದ ಆಗುತ್ತಲೇ ಸೆಕೆಂಡ್​ ಒಳಗೆಯೇ ಸಂತೆ ಗಾಯಬ್​ ಆಗುತ್ತೆ. ಮಾರುವವರು, ಕೊಳ್ಳುವವರು ಎಲ್ಲರೂ ಎಸ್ಕೇಪ್​  ಆಗುತ್ತಾರೆ. ಅಲ್ಲಿ ಏನೂ ಇಲ್ಲವೇನೋ ಎನ್ನುವಂತೆ  ಕಾಣಿಸುತ್ತದೆ. ರೈಲು ಅತ್ತ ಹೋದ ಮೇಲೆ ಮತ್ತೆ ರಪರಪ ಎಂದು ಎಲ್ಲರೂ ಮುತ್ತಿಗೆ ಹಾಕುತ್ತಾರೆ. ಪುನಃ ರೈಲು ಬಂದರೆ ಹೋಗುತ್ತಾರೆ. ಈ ರೈಲಿನ ಮುಂಭಾಗ ಸೇರಿದಂತೆ ಎಲ್ಲೆಂದರಲ್ಲಿ ಪ್ರಯಾಣಿಕರು ಪ್ರಯಾಣ ಮಾಡುವುದು ನೋಡಿದರೆ, ಅಬ್ಬಬ್ಬಾ ಹೀಗೂ ಒಂದು ದೇಶ ಇರುತ್ತಾ ಎಂದು ಹುಬ್ಬೇರಿಸುವುದು ಗ್ಯಾರೆಂಟಿ. ಇವೆಲ್ಲಾ ಕುತೂಹಲದ ವಿಷಯವನ್ನು ಡಾ.ಬ್ರೋ ಹೇಳಿದ್ದು. ಅದರ ವಿಡಿಯೋ ಲಿಂಕ್​ ಈ ಕೆಳಗೆ ಇದೆ. 

Related Posts

ಸಿಗರೇಟ್, ಪೆಪ್ಸಿ, ಕೋಕಾಕೋಲಾ ಬೆಲೆ ಶೇ. 35ಕ್ಕೆ ಏರಿಕೆ ಸಾಧ್ಯತೆ

ನವದೆಹಲಿ: ಜಿಎಸ್​ಟಿ ದರ ಪರಿಷ್ಕರಣೆ ನಿರ್ಧರಿಸಲು ರಚಿಸಲಾಗಿರುವ ಸಚಿವರ ಮಂಡಳಿಯು (ಜಿಒಎಂ) ತಂಬಾಕು ಇತ್ಯಾದಿ ದುಷ್ಕರ್ಮ ಸರಕುಗಳಿಗೆ ಸಿನ್ ಟ್ಯಾಕ್ಸ್ ಅನ್ನು ಶೇ. 28ರಿಂದ ಶೇ. 35ಕ್ಕೆ ಹೆಚ್ಚಿಸಲು ನಿರ್ಧರಿಸಿದೆ. ಇದರೊಂದಿಗೆ ದುಷ್ಕರ್ಮ ಸರಕುಗಳೆಂದು ಪರಿಗಣಿಸಲಾದ ಸಿಗರೇಟು ಇತ್ಯಾದಿ ತಂಬಾಕು ಉತ್ಪನ್ನಗಳು, ಪೆಪ್ಸಿ,…

ಸಮುದ್ರ ತೀರದಲ್ಲಿ ಯೋಗ ಮಾಡುತ್ತಿದ್ದ ಖ್ಯಾತ ನಟಿ ದುರಂತ ಅಂತ್ಯ, ದೈತ್ಯ ಅಲೆಗೆ ಬಲಿ!

ಥಾಯ್ಲೆಂಡ್ :  ಸಮುದ್ರದ ತೀರದಲ್ಲಿನ ಬಂಡೆಗಳ ಮೇಲೆ ಕುಳಿತು ಪ್ರಾಣಾಯಾಮ ಸೇರಿದಂತೆ ಯೋಗಾಭ್ಯಾಸದಲ್ಲಿ ನಿರತಳಾಗಿದ್ದ ಖ್ಯಾತ ನಟಿ ಮೇಲೆ ಭೀಕರ ಸಮುದ್ರದ ಅಲೆಗಳು ಅಪ್ಪಳಿಸಿದೆ. ನೋಡ ನೋಡುತ್ತಿದ್ದಂತೆ ನಟಿ ಅಲೆಯ ರಭಸಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆ ಥಾಯ್ಲೆಂಡ್‌ನ ಕೊಹ್ ಸಮುಯಿ ದ್ವೀಪದಲ್ಲಿ…

Leave a Reply

Your email address will not be published. Required fields are marked *