ಬೇರೆಯವರಿಗೆ ಬೈಕ್, ಕಾರು ಕೊಡುವ ಮುನ್ನ ಎಚ್ಚರ! ನಿಮ್ಮ ಮೇಲೂ ಬೀಳುತ್ತೆ ಎಫ್​ಐಆರ್

ಬೆಂಗಳೂರು, ನವೆಂಬರ್ 20: ಬೆಂಗಳೂರು ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದರಿಂದ ಸಾಲು ಸಾಲು ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ಬ್ರೇಕ್ ಹಾಕಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದು, ಎಫ್ಐಆರ್ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಡಿಎಲ್ (ಚಾಲನಾ ಪರವಾನಗಿ) ಇಲ್ಲದೇ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರಿಗೆ ಕಂಟಕ ಎದುರಾಗಿದೆ. ಇನ್ಮುಂದೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರು ಖಾಕಿ ಕೈಗೆ ಸಿಕ್ಕರೆ ಎಫ್ಐಆರ್ ದಾಖಲಾಗುವದು ಖಚಿತವಾಗಿದೆ.

ಚಾಲಕ ಮಾತ್ರವಲ್ಲ, ಮಾಲೀಕನ ಮೇಲೂ ಕೇಸ್

ಬೆಂಗಳೂರು ನಗರದಲ್ಲಿ ಓಡಾಡುತ್ತಿರುವ ಕೋಟ್ಯಂತರ ವಾಹನ ಚಾಲಕರಲ್ಲಿ ಹಲವರ ಬಳಿ ಡ್ರೈವಿಂಗ್ ಲೈಸನ್ಸ್ ಇರುವುದೇ ಇಲ್ಲ. ಹಾಗೆಯೇ ಸುಮ್ಮನೇ ವಾಹನಗಳನ್ನು ತೆಗೆದುಕೊಂಡು ಸುತ್ತಾಡುತ್ತಿರುತ್ತಾರೆ. ಅಂಥವರಲ್ಲಿ ಕೆಲವರು ಡ್ರಂಕ್ ಆ್ಯಂಡ್ ಡ್ರೈವ್ ಮಾಡುತ್ತಿರುತ್ತಾರೆ‌. ಹೀಗೆ ಕುಡಿದು ವಾಹನ ಚಾಲನೆ ಮಾಡುವುದರಿಂದಾಗಿ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇಷ್ಟು ದಿನ ಡ್ರಂಕ್ ಆ್ಯಂಡ್ ಡ್ರೈವ್​ಗೆ ದಂಡ ಮಾತ್ರ ವಿಧಿಸಲಾಗುತ್ತಿತ್ತು. ಆದರೆ, ಈಗ ಕುಡಿದು ವಾಹನ ಚಾಲನೆ ಮಾಡುವವರ ಬಳಿ ಡ್ರೈವಿಂಗ್ ಲೈಸನ್ಸ್ ಇಲ್ಲದೇ ಹೋದರೆ ಎಫ್ಐಆರ್ ದಾಖಲಿಸಿ ಕೋರ್ಟ್​​​ಗೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಾಗುತ್ತಿದೆ.

ಕೇವಲ ವಾಹನ ಚಾಲನೆ ಮಾಡುವವರಿಗೆ ಮಾತ್ರ ಈ ಶಿಕ್ಷೆಯಲ್ಲ. ವಾಹನದ ಆರ್​​ಸಿ ಯಾರ ಹೆಸರಲ್ಲಿ‌ ಇದೆಯೋ ಅವರ ಮೇಲೂ ಕೇಸ್ ಹಾಕಲಾಗುತ್ತಿದೆ. ಸದ್ಯ ಈ ಪ್ರಕ್ರಿಯೆ ಬೆಂಗಳೂರಲ್ಲಿ ಶುರುವಾಗಿದ್ದು, ಪ್ರತಿ ದಿನ ಹತ್ತಾರು ಎಫ್ಐಆರ್ ದಾಖಲಾಗುತ್ತಿವೆ.

ಹೀಗಾಗಿ ವಾಹನ‌ ಮಾಲೀಕರು ಹುಷಾರಾಗಿಲ್ಲದಿದ್ದರೆ ಕಷ್ಟವಿದೆ. ಸ್ನೇಹಿತರು, ಸಂಬಂಧಿಕರು, ಪರಿಚಯದವರು ಕೇಳಿದರೆಂದು ಹಿಂದೆಮುಂದೆ ವಿಚಾರಿಸದೆ ವಾಹನ ಕೊಟ್ಟರೆ ನಾಳೆ ಕೋರ್ಟ್​ಗೆ ಅಲೆಯಬೇಕಾಗಬಹುದು.

Related Posts

ಸಂವಿಧಾನ ಕೊಟ್ಟ ಕಾನೂನಿನ ಮೂಲಕ ರಕ್ತ ಚಂದನದ ಕಳ್ಳ ಪುಷ್ಪನನ್ನು ಕರ್ನಾಟಕದಲ್ಲಿ ಬಂಧಿಸಿದ ಧೀರ ಭಗತ್ ರಾಯ್

ಬೆಂಗಳೂರು: ಬಹುಕೋಟಿಯ ಸಿನಿಮಾ ಪುಷ್ಪ 2 ಕಳೆದ ಗುರುವಾರ ಬಿಡುಗಡೆಗೊಂಡಿದ್ದು ಕರ್ನಾಟಕದ ಬಹುತೇಕ ಚಿತ್ರಮಂದಿರಗಳನ್ನು ಆವರಿಸಿಬಿಟ್ಟಿದ್ದ, ಎಲ್ಲರೂ ಕೂಡ ಪುಷ್ಪ ಟು ಚಿತ್ರವನ್ನು ನೋಡಲು ತುದಿಕಾಳಿನಲ್ಲಿ ಕಾದು ನಿಂತಿದ್ದರು. ಆದರೆ ಚಿತ್ರತಂಡವು ಪ್ರೇಕ್ಷಕರ ಈ ಎಲ್ಲಾ ಭರವಸೆಗಳನ್ನು ಸಂಪೂರ್ಣವಾಗಿ ಹುಸಿ ಮಾಡಿದೆ…

ಹಾಸನಕ್ಕೆ ಸಮಾವೇಶಕ್ಕೆ ಹೋಗುವಾಗ ಆಹಾರ ಸಚಿವ ಕೆ.ಎಚ್ ಕಾರು ಅಪಘಾತ: ಅಪಾಯದಿಂದ ಪಾರು

ಹಾಸನ : ಹಾಸನದಲ್ಲಿ ಇಂದು ನಡೆಯುತ್ತಿರುವ ಕಾಂಗ್ರೆಸ್ ನ ಜನ ಕಲ್ಯಾಣ ಸಮಾವೇಶಕ್ಕೆ ಹೋಗುವಾಗ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರ ಕಾರು ಅಪಘಾತವಾಗಿರುವ ಘಟನೆ ನಡೆದಿದೆ. ಹಾಸನದ ಮಾರ್ಗದಲ್ಲಿ ಸಚಿವ ಮುನಿಯಪ್ಪ ಕಾರು ಅಪಘಾತಕ್ಕೀಡಾಗಿದ್ದು, ಬಳಿಕ ಬೇರೆ ವ್ಯವಸ್ಥೆ ಮೂಲಕ…

Leave a Reply

Your email address will not be published. Required fields are marked *