ಅಂಬೇಡ್ಕರ್ ರಾಷ್ಟ್ರೀಯ ನಾಯಕರೇ ಅಲ್ಲ : ಗುಜರಾತ್ ಬಿಜೆಪಿ ಸರ್ಕಾರ 

ಆತ್ಮೀಯರೇ, 

ಇದ್ದಕ್ಕಿದ್ದಂತೆ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಅಪ್ಪಿಕೊಳ್ಳಲು ಹೊರಟಿರುವ ಸಂಘಿಗಳು ಏನೇ ನಾಟಕವಾಡಿದರೂ….

 ಅವರ ಸಂವಿಧಾನ ದ್ವೇಷ ಮತ್ತು ಅಂಬೇಡ್ಕರ್ ದ್ವೇಷವನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ…. 

 ಅದರ ಮತ್ತೊಂದು ಉದಾಹರಣೆ ಇಲ್ಲಿದೆ…

  ಈಗ ದೇಶಾದ್ಯಂತ ದಲಿತ ಬಂಧು ಎಂದು ಪೋಸು ಹೊಡೆಯುತ್ತಿರುವ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿ 14 ವರ್ಷ ಆಳ್ವಿಕೆ ಮಾಡಿದಾಗಲೂ ಅಂಬೇಡ್ಕರ್ ಅವರನ್ನು ಕೋರ್ಟು-ಕಚೇರಿಗಳಿಗಿರಲಿ ಶಾಸನಸಭೆ ಮತ್ತು ಶಾಲೆಗಳಲ್ಲೂ ಬಿಟ್ಟುಕೊಂಡಿರಲಿಲ್ಲ. ಈಗಲೂ ಅಂಬೇಡ್ಕರ್ ಅವರ ಫೋಟೋ ಅಲ್ಲಿನ ಕೋರ್ಟುಗಳಲ್ಲಿರಲಿ ಯಾವುದೇ ಸರ್ಕಾರೀ ಕಚೇರಿಗಳಲ್ಲೂ ಇಲ್ಲ. 

 ಕಾರಣವೇನು ಗೊತ್ತೇ? 

ಬಿಜೆಪಿಯ ಗುಜರಾತಿನಲ್ಲಿ ಅಂಬೇಡ್ಕರ್ ರಾಷ್ಟ್ರೀಯ ನಾಯಕರೇ ಅಲ್ಲವಂತೆ.!!

 2012ರಲ್ಲಿ ಅಂದರೆ ಮೋದಿಯವರು ಮುಖ್ಯಮಂತ್ರಿಯಾಗಿ 11 ವರ್ಷಗಳ ಕಾಲ ಆಡಳಿತ ಮಾಡಿ ದೇಶದ ಪ್ರಧಾನಿಯಾಗಲು ತಯಾರಾಗುತ್ತಿದ್ದಾಗ… 

  ಗುಜರಾತಿನ ಭಾವ್ ನಗರದ ದಲಿತ ಕಾರ್ಯಕರ್ತ ದಹ್ಯ ಭಾಯ್ ಚೌಹಾಣ್ ಎಂಬವರು ಗುಜರಾತಿನ ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಫೋಟೋ ಏಕಿಲ್ಲವೆಂದು ಒಂದು RTI ಅರ್ಜಿ ಹಾಕುತ್ತಾರೆ. 

  ಅದಕ್ಕೆ 2012ರ ಜನವರಿಯಲ್ಲಿ ಮೋದಿ ಸರ್ಕಾರ ಕೊಟ್ಟ ಉತ್ತರ ನೋಡಿದರೆ ಬಿಜೆಪಿಯ ಅಸಲೀ ಮುಖ ಸ್ಪಷ್ಟವಾಗುತ್ತದೆ: 

 ಮೋದಿ ಸರ್ಕಾರದ ಪ್ರಕಾರ ಗುಜರಾತಿನ ಸರ್ಕಾರೀ ಕಚೇರಿಗಳಲ್ಲಿ 

ಎಂಟು ಜನ ರಾಷ್ಟ್ರೀಯ ನಾಯಕರ ಫೋಟೋಗಳನ್ನು ಮಾತ್ರ ಹಾಕಬಹುದಂತೆ. 

 ಯಾರು ಆ ಎಂಟು ಜನ? : 

ಮಹಾತ್ಮ ಗಾಂಧಿ 

ನೆಹರು 

 ಸರ್ದಾರ್ ಪಟೇಲ್ 

ಹಾಲಿ ರಾಷ್ಟ್ರಪತಿ 

ಹಾಲೀ ಪ್ರಧಾನಿ 

ಭಾರತ್ ಮಾತಾ 

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ 

ಮತ್ತು 

 ಶಾಮ ಪ್ರಸಾದ ಮುಖರ್ಜಿ !! 

 ಅಗ್ರಮಾನ್ಯ ರಾಷ್ಟ್ರ ನಾಯಕ ಅಂಬೇಡ್ಕರ್ ಬಿಜೆಪಿ ಪಟ್ಟಿಯಲ್ಲಿ ಇಲ್ಲವೇ ಇಲ್ಲ!! 

  1990ರಲ್ಲಿ ಅಂಬೇಡ್ಕರ್ ಅವರಿಗೆ ವಿಪಿ ಸಿಂಗ್ ಭಾರತ ರತ್ನ ಪ್ರಶಸ್ತಿ ಕೊಡಲೂ ಹಾಗೂ ಸಂಸತ್ ಭವನದಲ್ಲಿ 1990ರಲ್ಲಿ ಅಂಬೇಡ್ಕರ್ ಫೋಟೋ ಅನಾವರಣ ಮಾಡಲು ತಾನು ಕಾರಣ ಎಂದು ಹೇಳಿಕೊಳ್ಳುವ ಬಿಜೆಪಿ 2012ರಲ್ಲಿ ಕೊಟ್ಟ ಉತ್ತರವಿದು. 

 ಹೆಚ್ಚಿನ ವಿವರಗಳಿಗೆ The Indian Express ನಲ್ಲಿ 2012ರ ಜನವರಿ 7 ರಂದು ಪ್ರಕಟವಾಗಿರುವ ಈ ವರದಿಯನ್ನು ಗಮನಿಸಿ : https://indianexpress.com/article/cities/ahmedabad/photos-in-govt-offices-8-figure-in-official-list-ambedkar-not-yet-in/

  ಮತ್ತೊಮ್ಮೆ ಗುಜರಾತಿನ ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಫೋಟೋ ಏಕೆ ಹಾಕಲಾಗುತ್ತಿಲ್ಲವೆಂದು ಕೇಳಿ ಗುಜರಾತಿನ ದಲಿತ್ ಅಧಿಕಾರ್ ಮಂಚ್ ನ ಕೀರ್ತಿ ರಾಥೋಡ್ ಅವರು ಸರ್ಕಾರಕ್ಕೆ ಅರ್ಜಿ ಹಾಕಿದ್ದರು . 

 ಅದಕ್ಕೆ 2020ರ ಡಿಸಂಬರ್ ನಲ್ಲಿ ಉತ್ತರಿಸಿರುವ ಆಗಿನ ಬಿಜೆಪಿ ಮುಖ್ಯಮಂತ್ರಿ ವಿಜಯ್ ರುಪಾಣಿ ಅವರು :

"ಸರ್ಕಾರಿ ಕಚೇರಿಗಳಲ್ಲಿ ಯಾವ ರಾಷ್ಟ್ರ ನಾಯಕರ ಫೋಟೋಗಳನ್ನು ತೂಗುಹಾಕಬೇಕೆಂಬ ಬಗ್ಗೆ 1996ರ ಸುತ್ತೋಲೆಯೊಂದಿದೆ. (ಪ್ರಥಮ ಬಿಜೆಪಿ ಸರ್ಕಾರ ಹೊರಡಿಸಿದ್ದು..). ಅದರಲ್ಲಿ ರಾಷ್ಟ್ರ ನಾಯಕರ ಪಟ್ಟಿಯಲ್ಲಿ ಅಂಬೇಡ್ಕರ್ ಹೆಸರನ್ನು ಸೇರಿಸಲಾಗಿಲ್ಲ. ನಮ್ಮ ಸರ್ಕಾರ ಅದೇ ಪಟ್ಟಿಯನ್ನು ಮುಂದುವರೆಸುವ ತೀರ್ಮಾನ ಮಾಡಿದೆ"

ಅಂದರೆ ಬಿಜೆಪಿ ಸರ್ಕಾರ ಅಂಬೇಡ್ಕರ್ ಅವರನ್ನು ರಾಷ್ಟ್ರೀಯ ನಾಯಕರೂ ಎಂದು ಕೂಡ ಅಧಿಕೃತವಾಗಿ ಗುಜರಾತಿನಲ್ಲಿ ಪರಿಗಣಿಸುತ್ತಿಲ್ಲ.

ಇದರ ಬಗ್ಗೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ 2020ರ ಡಿಸಂಬರ್ ನಲ್ಲಿ ಗುಜರಾತ್ ಸರ್ಕಾರದ ಸ್ಪಷ್ಟೀಕರಣ ಕೇಳಿದೆ. ಆದರೆ ಅದು ಉತ್ತರ ಕೊಡುವ ಗೋಜಿಗೂ ಹೋಗಿಲ್ಲ.


ಇದು ಸಂಘಪರಿವಾರ ಮತ್ತು ಮೋದಿ ಸರ್ಕಾರಕ್ಕೆ ಅಂಬೇಡ್ಕರ್ ಬಗ್ಗೆ ಇರುವ ಅಸಹನೆಯ ಅಸಲೀ ಚಿತ್ರಣ ..

ಅಂಬೇಡ್ಕರ್ ಅವರನ್ನು ಪ್ರಾತಃಸ್ಮರಣೀಯ ಎನ್ನುತ್ತಲೇ ಸಂಧ್ಯಾ ಕಾಲದಲ್ಲಿ ಗುಪ್ತವಾಗಿ ಒಳಗಿಂದಲೇ ಹತ್ಯೆ ಮಾಡುವ ಸಂಘಪರಿವಾರದ ಅಸಲೀ ಹುನ್ನಾರಗಳನ್ನು ಈ ದೇಶದ ದಲಿತ ದಮನಿತರು ಅರಿಯುವರೇ ?

ಹೆಚ್ಚಿನ ವಿವರಗಳಿಗೆ ಆಸಕ್ತರು ಈ ವರದಿಯನ್ನು ಗಮನಿಸಬಹುದು :

Related Posts

ಹಾಸನಕ್ಕೆ ಸಮಾವೇಶಕ್ಕೆ ಹೋಗುವಾಗ ಆಹಾರ ಸಚಿವ ಕೆ.ಎಚ್ ಕಾರು ಅಪಘಾತ: ಅಪಾಯದಿಂದ ಪಾರು

ಹಾಸನ : ಹಾಸನದಲ್ಲಿ ಇಂದು ನಡೆಯುತ್ತಿರುವ ಕಾಂಗ್ರೆಸ್ ನ ಜನ ಕಲ್ಯಾಣ ಸಮಾವೇಶಕ್ಕೆ ಹೋಗುವಾಗ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರ ಕಾರು ಅಪಘಾತವಾಗಿರುವ ಘಟನೆ ನಡೆದಿದೆ. ಹಾಸನದ ಮಾರ್ಗದಲ್ಲಿ ಸಚಿವ ಮುನಿಯಪ್ಪ ಕಾರು ಅಪಘಾತಕ್ಕೀಡಾಗಿದ್ದು, ಬಳಿಕ ಬೇರೆ ವ್ಯವಸ್ಥೆ ಮೂಲಕ…

ಸಿಗರೇಟ್, ಪೆಪ್ಸಿ, ಕೋಕಾಕೋಲಾ ಬೆಲೆ ಶೇ. 35ಕ್ಕೆ ಏರಿಕೆ ಸಾಧ್ಯತೆ

ನವದೆಹಲಿ: ಜಿಎಸ್​ಟಿ ದರ ಪರಿಷ್ಕರಣೆ ನಿರ್ಧರಿಸಲು ರಚಿಸಲಾಗಿರುವ ಸಚಿವರ ಮಂಡಳಿಯು (ಜಿಒಎಂ) ತಂಬಾಕು ಇತ್ಯಾದಿ ದುಷ್ಕರ್ಮ ಸರಕುಗಳಿಗೆ ಸಿನ್ ಟ್ಯಾಕ್ಸ್ ಅನ್ನು ಶೇ. 28ರಿಂದ ಶೇ. 35ಕ್ಕೆ ಹೆಚ್ಚಿಸಲು ನಿರ್ಧರಿಸಿದೆ. ಇದರೊಂದಿಗೆ ದುಷ್ಕರ್ಮ ಸರಕುಗಳೆಂದು ಪರಿಗಣಿಸಲಾದ ಸಿಗರೇಟು ಇತ್ಯಾದಿ ತಂಬಾಕು ಉತ್ಪನ್ನಗಳು, ಪೆಪ್ಸಿ,…

Leave a Reply

Your email address will not be published. Required fields are marked *