ನೆಲಮಂಗಲ : 2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆ ನೆಲಮಂಗಲ ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳನ್ನು ಮಾಡಿಸುಕೊಳ್ಳಲು ಜನರು ಹರಸಾಹಸ ಪಡುವಂತಾಗಿದೆ.
ಅಧಿಕಾರಿಗಳು ಸರ್ವಾಧಿಕಾರಿಗಳಾಗುವುದು ತಪ್ಪು, ಯಾವುದೆ ವಿಷಯಗಳನ್ನು ವಿಚಾರವಾಗಿ ನಿರ್ಬಂಧಗಳನ್ನು ಮಾಡುವ ಮುನ್ನ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಇಲ್ಲವಾದಲ್ಲಿ ಸಾರ್ವಜನಿಕರು ಅದರಿಂದ ತೊಂದರೆ ಅನುಭವಿಸಬೇಕಾಗುತ್ತದೆ. ದೂರದ ಊರುಗಳಿಂದ ಬರು ರೈತರು, ವಿದ್ಯಾರ್ಥಿಗಳು ಮತ್ತು ವೃದ್ಧರು ಸಾಕಷ್ಟು ವಿಚಾರಗಳನ್ನು ಹೊತ್ತುತರುತ್ತಾರೆ ಆದರೆ ಅಧಿಕಾರಿಗಳ ಈ ನಿರ್ಧಾರಗಳಿಂದ ಅವರು ನಿರಾಶೆಹೊಂದುತ್ತಾರೆ ಎಂದು ಕ.ರ.ವೇ ರಾಜ್ಯಾಧ್ಯಕ್ಷ ಶಂಕರೇಗೌಡ ತಿಳಿಸಿದರು.
ಈಗಾಗಲೇ ಸಾರ್ವತ್ರಿಕ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಸಲು ಚುನಾವಣೆ ಆಯೋಗವು ಅವಕಾಶವನ್ನು ಮಾಡಿಕೊಟ್ಟಿದ್ದು ಹಲವಾರೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಲ್ಲಿಸುತ್ತಿದ್ದಾರೆ. ಈ ನಾಮಪತ್ರ ಸಲ್ಲಿಸುವ ದಿನದಂದು ತಾಲ್ಲೂಕು ಕಛೇರಿಗೆ ಸಾರ್ವಜನಿಕರಿಗೆ ಅನವಶ್ಯಕವಾಗಿ ಯಾವುದೇ ಮಾಹಿತಿಯನ್ನು ಮತ್ತು ಸರ್ಕಾರದ ಯಾವುದೆ ಸುತ್ತೋಲೆಳನ್ನು ನೀಡದೆ ನಿರ್ಭಂದವನ್ನು ಏರಲಾಗಿದ್ದು ಇದು ತಾಲ್ಲೂಕು ಕಛೇರಿಯ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಬರುವ ಸಾರ್ವಾಜನಿಕರಿಗೆ ಹೈರಾಣಾಗುವಂತೆ ಮಾಡಿದೆ ಎಂದು ದಲಿತ ಸಂಘಟನೆ ಮುಖಂಡ ಎನ್ ಆರ್ ನಾಗರಾಜು ತಿಳಿಸಿದ್ದಾರೆ.