ಅತ್ಯಾಚಾರ ಪ್ರಕರಣ: ಆಸ್ಟ್ರೇಲಿಯಾದ ʼಓವರ್‌ಸೀಸ್ ಫ್ರೆಂಡ್ಸ್‌ ಆಫ್‌ ಬಿಜೆಪಿʼ ಸ್ಥಾಪಕ ಬಲೇಶ್‌ ಧನ್ಕರ್‌ ದೋಷಿ

ಮೆಲ್ಬೋರ್ನ್: ನಕಲಿ ಉದ್ಯೋಗ ಜಾಹೀರಾತುಗಳನ್ನು ಪ್ರಕಟಿಸಿ ತಾನು ಭೇಟಿಯಾದ ಐದು ಮಂದಿ ಕೊರಿಯನ್ ಮಹಿಳೆಯರಿಗೆ ಅಮಲು ಪದಾರ್ಥ ನೀಡಿ ಅವರ ಮೇಲೆ ಅತ್ಯಾಚಾರಗೈದ ಪ್ರಕರಣದಲ್ಲಿ ಓವರ್‌ಸ್ ಫ್ರೆಂಡ್ಸ್ ಆಫ್ ಬಿಜೆಪಿ ಇದರ ಆಸ್ಟ್ರೇಲಿಯಾ ವಿಭಾಗದ ಸ್ಥಾಪಕರಲ್ಲೊಬ್ಬನಾದ ಬಲೇಶ್ ಧನ್ನರ್ ಎಂಬಾತನನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿದೆ.

ಆತನ ವಿರುದ್ಧದ 39 ಆರೋಪಗಳಲ್ಲೂ ಆತನನ್ನು ಸಿಡ್ನಿಯ ಡೌನಿಂಗ್ ಸೆಂಟರ್‌ನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ದೋಷಿ ಎಂದು ಸೋಮವಾರ ಘೋಷಿಸುತ್ತಿದ್ದಂತೆಯೇ ಅಲ್ಲಿ ಹಾಜರಿದ್ದ ಧಡ್ಕರ್ ಕಣ್ಣೀರು ಸುರಿಸಿದ್ದ ಎಂದು ವರದಿಯಾಗಿದೆ. ಆತನ ವಿರುದ್ಧ ಒಟ್ಟು 13 ಅತ್ಯಾಚಾರ ಪ್ರಕರಣಗಳು, ಅತ್ಯಾಚಾರಗೈಯ್ಯಲು ಸಹಕಾರಿಯಾಗಲು ಅಮಲು ಪದಾರ್ಥ ನೀಡಿದ ಆರು ಪ್ರಕರಣಗಳು, ಅನುಮತಿಯಿಲ್ಲದೆ ಅಶ್ಲೀಲ ವೀಡಿಯೋಗಳನ್ನು ಸೆರೆಹಿಡಿದ 17 ಪ್ರಕರಣಗಳು ಇದ್ದವು.

ಜನವರಿ ಹಾಗೂ ಅಕ್ಟೋಬರ್ 2018 ರ ನಡುವಿನ ಈ ಅಪರಾಧಗಳಲ್ಲಿ ತನ್ನನ್ನು ರಕ್ಷಿಸಲು ಕಳೆದ ನಾಲ್ಕು ವರ್ಷಗಳಲ್ಲಿ ಧನ್ನರ್ ಇನ್ನಿಲ್ಲದ ಕಸರತ್ತು ನಡೆಸಿದ್ದ ಎಂದು ವರದಿಯಾಗಿದೆ. ಅಕ್ಟೋಬರ್ 2018 ರಲ್ಲಿ ಆತನ ನಿವಾಸಕ್ಕೆ ಪೊಲೀಸರು ದಾಳಿ ನಡೆಸಿದಾಗ ಹಲವಾರು ಅಶ್ಲೀಲ ವೀಡಿಯೋಗಳು ಅಲ್ಲಿ ದೊರಕಿದ್ದವಲ್ಲದೆ ಅವುಗಳಲ್ಲಿ ಹೆಚ್ಚಿನ ಸಂತ್ರಸ್ತೆಯರು ಪ್ರಜ್ಞಾಹೀನರಾಗಿದ್ದರೆಂಬುದನ್ನು ಪೊಲೀಸರು ಕಂಡುಕೊಂಡಿದ್ದರು., ಈ ವೀಡಿಯೋಗಳನ್ನು ಆತ ವಿವಿಧ ಫೋಲ್ಡರ್‌ಗಳಲ್ಲಿರಿಸಿದ್ದ ಹಾಗೂ ಅವುಗಳಿಗೆ ಕೊರಿಯನ್ ಮಹಿಳೆಯ ಹೆಸರು ನೀಡಿದ್ದ.

ಕೊರಿಯನ್ ಇಂಗ್ಲಿಷ್ ಮಾತನಾಡುವವರು ಬೇಕಿದ್ದಾರೆ ಎಂದುಆತ ಜಾಹೀರಾತು ಪ್ರಕಟಿಸುತ್ತಿದ್ದ ಹಾಗೂ ಅದನ್ನು ನಂಬಿ ಆತನನ್ನು ಭೇಟಿಯಾಗಲು ಬರುವವರನ್ನು ಆತನ ನಿವಾಸದ ಸಮೀಪವಿದ್ದ ಸಿಡ್ನಿಯ ಹಿಲ್ಟನ್ ಹೋಟೆಲ್ ಬಾರ್‌ಗೆ ಕರೆದೊಯ್ದು ಅಲ್ಲಿ ವೈನ್ ಅಥವಾ ಐಸ್ ಕ್ರೀಂಗೆ ಅಮಲು ಪದಾರ್ಥ ಬೆರೆಸಿ ಕೊಡುತ್ತಿದ್ದ. ಆತನ ಮಂಚದ ಪಕ್ಕದಲ್ಲಿದ್ದ ಅಲಾರ್ಮ್ ಕ್ಲಾಕ್‌ನಲ್ಲಿ ಹಾಗೂ ಆತನ ಕೈಗಡಿಯಾರದಲ್ಲಿ ರಹಸ್ಯ ಕ್ಯಾಮೆರಾ ಇತ್ತು ಎಂದು ವರದಿಯಾಗಿದೆ.

ಈತನ ಸಂಘಟನೆ ಓವರ್‌ಸ್ ಫ್ರೆಂಡ್ಸ್ ಆಫ್ ಬಿಜೆಪಿ, ಆಸ್ಟ್ರೇಲಿಯಾ 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿಯ ಭೇಟಿ ವೇಳೆಗಿನ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

Related Posts

ಹಾಸನಕ್ಕೆ ಸಮಾವೇಶಕ್ಕೆ ಹೋಗುವಾಗ ಆಹಾರ ಸಚಿವ ಕೆ.ಎಚ್ ಕಾರು ಅಪಘಾತ: ಅಪಾಯದಿಂದ ಪಾರು

ಹಾಸನ : ಹಾಸನದಲ್ಲಿ ಇಂದು ನಡೆಯುತ್ತಿರುವ ಕಾಂಗ್ರೆಸ್ ನ ಜನ ಕಲ್ಯಾಣ ಸಮಾವೇಶಕ್ಕೆ ಹೋಗುವಾಗ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರ ಕಾರು ಅಪಘಾತವಾಗಿರುವ ಘಟನೆ ನಡೆದಿದೆ. ಹಾಸನದ ಮಾರ್ಗದಲ್ಲಿ ಸಚಿವ ಮುನಿಯಪ್ಪ ಕಾರು ಅಪಘಾತಕ್ಕೀಡಾಗಿದ್ದು, ಬಳಿಕ ಬೇರೆ ವ್ಯವಸ್ಥೆ ಮೂಲಕ…

ಅಂಬೇಡ್ಕರ್ ರಾಷ್ಟ್ರೀಯ ನಾಯಕರೇ ಅಲ್ಲ : ಗುಜರಾತ್ ಬಿಜೆಪಿ ಸರ್ಕಾರ 

ಆತ್ಮೀಯರೇ,  ಇದ್ದಕ್ಕಿದ್ದಂತೆ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಅಪ್ಪಿಕೊಳ್ಳಲು ಹೊರಟಿರುವ ಸಂಘಿಗಳು ಏನೇ ನಾಟಕವಾಡಿದರೂ….  ಅವರ ಸಂವಿಧಾನ ದ್ವೇಷ ಮತ್ತು ಅಂಬೇಡ್ಕರ್ ದ್ವೇಷವನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ….   ಅದರ ಮತ್ತೊಂದು ಉದಾಹರಣೆ ಇಲ್ಲಿದೆ…   ಈಗ ದೇಶಾದ್ಯಂತ ದಲಿತ ಬಂಧು ಎಂದು ಪೋಸು ಹೊಡೆಯುತ್ತಿರುವ…

Leave a Reply

Your email address will not be published. Required fields are marked *