ದೊಡ್ಡಬಳ್ಳಾಪುರ: ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಕ್ಕಳಿಗೂ ಹಣ ಹಂಚಿದ ಪ್ರಸಂಗ ತಾಲ್ಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ನಡೆದಿದೆ
ಇಂದು ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಅವರಿಂದ ಪಕ್ಷದ ಅಭ್ಯರ್ಥಿ ಬಿ.ಮುನೇಗೌಡ ಅವರ ಪರವಾಗಿ ಪ್ರಚಾರ ಸಭೆ ನಡೆಯಿತು.
ಸಭೆ ಮುಗಿದ ನಂತರ ಪ್ರಚಾರಸಭೆಗೆ ಕರೆ ತಂದಿದ್ದ ಜನರಿಗೆ ಜೆಡಿಎಸ್ ಮುಖಂಡರು ಹಣ ಹಂಚುತ್ತಿರುವ ದೃಷ್ಯ ದೂರವಾಣಿಯಲ್ಲಿ ಸೆರೆಯಾಗಿರುವುದ್ದು, ಈ ದೃಷ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ,
ಮಕ್ಕಳಿಗೆ ಹಣ ಹಂಚಿಕೆ ಮಾಡುತ್ತಿರುವ ದೃಷ್ಯ ನ್ಯೂಸ್ ಗೆ ಲಭ್ಯವಾಗಿದೆ.
ಕಾರ್ಯಕ್ರಮ ಮುಗಿದ ನಂತರ ವೇದಿಕೆ ಬಳಿ ಪ್ರಚಾರ ಸಭೆಗೆ ಕರೆ ತಂದಿದ್ದ ಜನರಿಗೆ ತಲಾ ₹300 ರೂಪಾಯಿ ಹಣ ಹಂಚಿಕೆ ಮಾಡಲಾಯಿತು ಎನ್ನಲಾಗಿದೆ.
ಸಾವಿರಾರು ಮಂದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರು ಅಪ್ರಾಪ್ತ ಭಾಲಕರೂ ಸೇರಿದಂತೆ ಮಹಿಳೆಯರಿಗೆ ಹಣ ಹಂಚಿಕೆ ಮಾಡುತ್ತಿರುವ ದೃಷ್ಯ ಕಂಡುಬಂದಿದೆ.