ಬಾಗಲಕೋಟೆ: ಇಂದು ನಡೆದ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ವೇಳೆ ಮಾತಾನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಪ್ರಣಾಳಿಕೆ ಕುರುತಂತೆ ಮೋದಿ ಪ್ರಣಾಳಿಕೆ ಇಲ್ಲಿವರೆಗೆ ಇಂಪ್ಲಿಮಿಂಟ್ ಆಗಿದೀಯಾ. ಉದ್ಯೋಗ ಕೊಡ್ತಿವಿ ಅಂದಿದ್ರು ಕೊಟ್ಡಿದ್ದಾರಾ ಎಂದರು.
ಆ ವೇಳೆ ಕೋಮುವಾದದ ಬಗ್ಗೆಯೂ ಮಾತಾನಾಡಿದರು. ಪ್ರಣಾಳಿಕೆಯಲ್ಲಿ ವೇಳೆ ಬಿಡುಗಡೆ ವೇಳೆ ರಾಜ್ಯದಲ್ಲಿ ಕೋಮುವಾದಿ ಕೆಲಸ ಮಾಡೋರನ್ನ ಭಜರಂಗದಳ, ಪಿಎಫ್ಐ ಬ್ಯಾನ್ ಮಾಡುತ್ತೇವೆ ಎಂದರು. ಯಾರು ಕೋಮುವಾದಿ ಕೆಲಸ ಮಾಡ್ತಾರೆ ಯಾರು ಹೇಟ್ರೇಟ್ ಪೊಲಿಟಿಕ್ಸ್ ಮಾಡ್ತಾರೆ ಅಂತವರನ್ನ ಬ್ಯಾನ್ ಮಾಡ್ತೀವಿ ಎಂದರು.
ರಾಜ್ಯಕ್ಕೆ ಮೋದಿ & ಅಮಿತ್ ಶಾ ಪದೇ ಪದೇ ಬರ್ತಿರೋ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದು, ಮೋದಿ, ಶಾ, ನಡ್ಡಾ ಯಾಕಾಗಿ ರಾಜ್ಯಕ್ಕೆ ಪದೇ ಪದೇ ಬರುತ್ತಾರೆಂದರೆ, ಬಿಜೆಪಿಯವರ ಮುಖ ನೋಡಿ ಜನ ವೋಟ್ ಹಾಕಲ್ಲ ಅಂತ ಗೊತ್ತಿದೆ. ಹೀಗಾಗಿ ಅದಕ್ಕಾಗಿ ಮೋದಿ, ಶಾ, ನಡ್ಡಾ ಕರೆಸುತ್ತಾರೆ.
ಹಾಗೆಯೇ ವರುಣಾದಲ್ಲಿ ಸಿದ್ದರಾಮಯ್ಯನನ್ನು ಸೋಲಿಸಿದ್ರೆ ಸಮಗ್ರ ಅಭಿವೃದ್ಧಿ ಎಂದು ಅಮಿತ್ ಶಾ ಹೇಳಿದ್ರು. ವರುಣಾಕ್ಕೆ ಇಲ್ಲಿವರೆಗೂ ಬಿಜೆಪಿ ಕೊಡುಗೆ ಏನು ಇಲ್ಲ. ಏನು ಮಾಡದೇ ನಾವು ಮುಂದೆ ಮಾಡ್ತಿವಿ ಅಂದ್ರೆ ನಂಬ್ತಾರಾ ಜನಾ…ಸಮಗ್ರ ಅಭಿವೃದ್ಧಿ ಅಂತೆ,ಅಮಿತದ ಶಾಗೂ ವರುಣಾಗೂ ಏನು ಇಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.