ಆಸ್ಟ್ರೇಲಿಯಾದಲ್ಲಿ ಬಿಜೆಪಿ ನಾಯಕನಿಂದ ಕೊರಿಯಾದ ಹುಡುಗಿಯರ ಅತ್ಯಾಚಾರ: ತಪ್ಪಿತಸ್ಥ ಎಂದು ತೀರ್ಪು ನೀಡಿದ ನ್ಯಾಯಾಲಯ

ಸಿಡ್ನಿ: ಬಿಜೆಪಿಯ ಓವರ್ ಸೀಸ್ ಫ್ರೆಂಡ್ಸ್’ನ (ಸಾಗರೋತ್ತರ ಸ್ನೇಹಿತರು) ಆಸ್ಟ್ರೇಲಿಯಾ ವಿಭಾಗದ ಸಂಸ್ಥಾಪಕ ಬಾಲೇಶ್ ದನ್ಕರ್ ಎಂಬಾತನ ಕೊರಿಯನ್ ಹುಡುಗಿಯರನ್ನು ಅತ್ಯಾಚಾರವೆಸಗಿರುವುದು ಸಾಬೀತಾಗಿದೆ.


ಆಸ್ಟ್ರೇಲಿಯಾದಲ್ಲಿ ಭಾರತದ ಬಿಜೆಪಿ ಪ್ರಮುಖ ಎನ್ನಲಾದ ಬಾಲೇಶ್ ದನ್ಕರ್ ಸಿಡ್ನಿಯ ಇತಿಹಾಸದಲ್ಲೇ ಅತಿ ದೊಡ್ಡ ರೇಪಿಸ್ಟ್ ಎಂಬ ಕುಖ್ಯಾತಿಗೆ ಪಾತ್ರನಾಗಿದ್ದಾನೆ. ಈತನು ಮಾದಕ ವಸ್ತು ನೀಡಿ ಅಮಲಿನಲ್ಲಿ ಐವರು ಕೊರಿಯನ್ ಹುಡುಗಿಯರನ್ನು ಅತ್ಯಾಚಾರ ಎಸಗಿರುವುದು ರುಜುವಾತಾಗಿದೆ.
ಸಿಡ್ನಿ ಡೌನಿಂಗ್ ಸೆಂಟರ್’ನ ಜಿಲ್ಲಾ ನ್ಯಾಯಾಧೀಶರು ಸೋಮವಾರ ಈ ಅತ್ಯಾಚಾರಿಯನ್ನು ರಾಜಕೀಯ ಸಂಪರ್ಕದ ದುಷ್ಟ ಪ್ರಾಣಿ ಎಂದು ಕರೆದರು. ಕೊರಿಯಾದ ಹುಡುಗಿಯರನ್ನು ವೆಬ್ ದಾರಿಯಾಗಿ ಪರಿಚಯಿಸಿಕೊಂಡು ಅವರಿಗೆ ಮಾದಕ ವಸ್ತು ನೀಡಿ ಮತಿ ಕಳೆದುಕೊಳ್ಳುವಂತೆ ಮಾಡಿ ಐವರ ಅತ್ಯಾಚಾರ ಎಸಗಿದ್ದಾನೆ ಈ ಪಾತಕಿ.
ಈ ಬಾಲೇಶ್ ಆಸ್ಟ್ರೇಲಿಯಾದಲ್ಲಿ ಕಡಲಾಚೆಯ ಬಿಜೆಪಿ ಮಿತ್ರರ ದಂಡು ಒಂದರ ಮುಖ್ಯಸ್ಥನಾಗಿದ್ದ.

ಬೆಡ್ ಪಕ್ಕದ ಅಲಾರಾಂನಲ್ಲಿ ಕ್ಯಾಮೆರಾ ಅಡಗಿಸಿಟ್ಟು ಹಾಗೂ ಮೊಬೈಲ್ ಮೂಲಕವೂ ಈ ಬಾಲೇಶ್ ದನ್ಕರ್ ತನ್ನ ರೇಪ್ ಸಾಹಸವನ್ನು ಚಿತ್ರೀಕರಿಸಿದ್ದ. ಸಿಡ್ನಿಯ ಇತಿಹಾಸದಲ್ಲೇ ಬಾಲೇಶ್ ಅತಿ ಕೆಟ್ಟ ಅತ್ಯಾಚಾರಿ ಎಂದು ಕೋರ್ಟ್ ಹೇಳಿತು.
ದತ್ತಾಂಶ ತಜ್ಞನಾದ ಬಾಲೇಶ್ ಮೇಲಿನ 39 ಆರೋಪಗಳಲ್ಲಿ ಆತ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡುತ್ತಳೇ ಅಲ್ಲೇ ಆತ ಕಣ್ಣೀರು ಸುರಿಸಿದ.
ಬಾಲೇಶನ ಜಾಮೀನನ್ನು ನಿರಾಕರಿಸಿದ ಜ್ಯೂರಿ ಬೇಡಿಯೊಡನೆ ಕರೆದುಕೊಂಡು ಹೋಗುವಂತೆ ಆದೇಶಿಸಿದರು.


43ರ ದನ್ಕರ್ ಮೇನಲ್ಲಿ ಮತ್ತೊಮ್ಮೆ ಕೋರ್ಟ್ ಎದುರಿಸಲಿದ್ದು, ಈ ವರುಷಾಂತ್ಯದೊಳಗೆ ನಿಶ್ಚಿತ ಶಿಕ್ಷೆಗೆ ಒಳಗಾಗಲಿದ್ದಾನೆ.
ಹೊಸ ತಾರೆ ಎನ್ನಲಾದ ಬ್ಯಾರಿಸ್ಟರನ್ನು ಗೊತ್ತು ಮಾಡಲು ಮತ್ತು ಇತರ ವೆಚ್ಚಕ್ಕೆ ಬಾಲೇಶ್ ತನ್ನ ಕುಟುಂಬದ ಆಸ್ತಿ ಮಾರಾಟ ಮಾಡಿದ್ದಾನೆ.
2018ರಲ್ಲಿ ಬಾಲೇಶನು ಬೇರೆ ಬೇರೆ ಹುಡುಗಿಯರೊಂದಿಗಿರುವ ಹತ್ತಾರು ವೀಡಿಯೋಗಳು ವೈರಲ್ ಆಗಿದ್ದವು. ಇದರಲ್ಲಿ ಹುಡುಗಿಯರು ಮತಿ ತಪ್ಪಿರುವುದು ಇಲ್ಲವೇ ಅರೆ ಪ್ರಜ್ಞಾವಸ್ಥೆಯಲ್ಲಿ ಪ್ರತಿಭಟಿಸುತ್ತಿರುವುದು ಕಂಡು ಬಂದಿತ್ತು.
ವೀಡಿಯೋಗಳನ್ನು ಪಟ್ಟಿ ಮಾಡಿ ಪ್ರತಿಯೊಂದರಲ್ಲೂ ಕೊರಿಯಾದ ಹೆಣ್ಣಿನ ಹೆಸರು ಬರೆಯಲಾಗಿತ್ತು. ಕೊನೆಗೆ ಪೊಲೀಸರು ಬಾಲೇಶ್’ನ ಬ್ರೌಸರ್ ನಲ್ಲಿ ಸರಣಿ ಬುಕ್ ಮಾರ್ಕ್ ಗಳನ್ನು ಗುರುತಿಸಿದರು.

Related Posts

ಹಾಸನಕ್ಕೆ ಸಮಾವೇಶಕ್ಕೆ ಹೋಗುವಾಗ ಆಹಾರ ಸಚಿವ ಕೆ.ಎಚ್ ಕಾರು ಅಪಘಾತ: ಅಪಾಯದಿಂದ ಪಾರು

ಹಾಸನ : ಹಾಸನದಲ್ಲಿ ಇಂದು ನಡೆಯುತ್ತಿರುವ ಕಾಂಗ್ರೆಸ್ ನ ಜನ ಕಲ್ಯಾಣ ಸಮಾವೇಶಕ್ಕೆ ಹೋಗುವಾಗ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರ ಕಾರು ಅಪಘಾತವಾಗಿರುವ ಘಟನೆ ನಡೆದಿದೆ. ಹಾಸನದ ಮಾರ್ಗದಲ್ಲಿ ಸಚಿವ ಮುನಿಯಪ್ಪ ಕಾರು ಅಪಘಾತಕ್ಕೀಡಾಗಿದ್ದು, ಬಳಿಕ ಬೇರೆ ವ್ಯವಸ್ಥೆ ಮೂಲಕ…

ಅಂಬೇಡ್ಕರ್ ರಾಷ್ಟ್ರೀಯ ನಾಯಕರೇ ಅಲ್ಲ : ಗುಜರಾತ್ ಬಿಜೆಪಿ ಸರ್ಕಾರ 

ಆತ್ಮೀಯರೇ,  ಇದ್ದಕ್ಕಿದ್ದಂತೆ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಅಪ್ಪಿಕೊಳ್ಳಲು ಹೊರಟಿರುವ ಸಂಘಿಗಳು ಏನೇ ನಾಟಕವಾಡಿದರೂ….  ಅವರ ಸಂವಿಧಾನ ದ್ವೇಷ ಮತ್ತು ಅಂಬೇಡ್ಕರ್ ದ್ವೇಷವನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ….   ಅದರ ಮತ್ತೊಂದು ಉದಾಹರಣೆ ಇಲ್ಲಿದೆ…   ಈಗ ದೇಶಾದ್ಯಂತ ದಲಿತ ಬಂಧು ಎಂದು ಪೋಸು ಹೊಡೆಯುತ್ತಿರುವ…

Leave a Reply

Your email address will not be published. Required fields are marked *