ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ದೇಶಕ್ಕೆ ಕಂಟಕ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪತಿ ಡಾ.ಪರಕಾಲ ಪ್ರಭಾಕರ್‌

ಬೆಂಗಳೂರು: ಮೋದಿ ಆಡಳಿತವು ಆರ್ಥಿಕತೆ ಮತ್ತು ಇತರ ಹಲವು ವಿಷಯಗಳ ನಿರ್ವಹಣೆಯಲ್ಲಿ ಅಸಮರ್ಥವಾಗಿದ್ದರೂ, ಜನರಲ್ಲಿ ಸುಪ್ತವಾಗಿರುವ ವಿಭಜಕ ಭಾವನೆಗಳನ್ನು ಹೊರ ತರಲು ಅದು ಅತ್ಯಂತ ಸಮರ್ಥವಾಗಿದೆ ಎಂದು ಅರ್ಥಶಾಸ್ತ್ರಜ್ಞ ಮತ್ತು ಸಾಮಾಜಿಕ ವಿಮರ್ಶಕ ಡಾ. ಪರಕಾಲ ಪ್ರಭಾಕರ್ ಅವರು thewire.in ಸುದ್ದಿ ಜಾಲತಾಣಕ್ಕಾಗಿ ಕರಣ್ ಥಾಪರ್ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಡಾ ಪ್ರಭಾಕರ್ ಅವರ ಹೊಸ ಪುಸ್ತಕ ‘The Crooked Timber of New India: Essays on A Republic in Crisis’ ರವಿವಾರ, ಮೇ 14 ರಂದು ಬೆಂಗಳೂರಿನಲ್ಲಿ ಔಪಚಾರಿಕವಾಗಿ ಬಿಡುಗಡೆಯಾಯಿತು. ಈ ಪುಸ್ತಕವು ಮೋದಿ ಸರ್ಕಾರದ ಆರ್ಥಿಕತೆ, ರಾಜಕೀಯ ಮತ್ತು ಇತರ ವಿಷಯಗಳ ಬಗ್ಗೆ ಪ್ರಬಂಧಗಳ ಸರಣಿಯನ್ನು ಒಳಗೊಂಡಿದೆ.

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪಿಎಚ್.ಡಿ ಪಡೆದಿರುವ ಡಾ.ಪ್ರಭಾಕರ್ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ.

Related Posts

ಸಂವಿಧಾನ ಕೊಟ್ಟ ಕಾನೂನಿನ ಮೂಲಕ ರಕ್ತ ಚಂದನದ ಕಳ್ಳ ಪುಷ್ಪನನ್ನು ಕರ್ನಾಟಕದಲ್ಲಿ ಬಂಧಿಸಿದ ಧೀರ ಭಗತ್ ರಾಯ್

ಬೆಂಗಳೂರು: ಬಹುಕೋಟಿಯ ಸಿನಿಮಾ ಪುಷ್ಪ 2 ಕಳೆದ ಗುರುವಾರ ಬಿಡುಗಡೆಗೊಂಡಿದ್ದು ಕರ್ನಾಟಕದ ಬಹುತೇಕ ಚಿತ್ರಮಂದಿರಗಳನ್ನು ಆವರಿಸಿಬಿಟ್ಟಿದ್ದ, ಎಲ್ಲರೂ ಕೂಡ ಪುಷ್ಪ ಟು ಚಿತ್ರವನ್ನು ನೋಡಲು ತುದಿಕಾಳಿನಲ್ಲಿ ಕಾದು ನಿಂತಿದ್ದರು. ಆದರೆ ಚಿತ್ರತಂಡವು ಪ್ರೇಕ್ಷಕರ ಈ ಎಲ್ಲಾ ಭರವಸೆಗಳನ್ನು ಸಂಪೂರ್ಣವಾಗಿ ಹುಸಿ ಮಾಡಿದೆ…

ಅಂಬೇಡ್ಕರ್ ರಾಷ್ಟ್ರೀಯ ನಾಯಕರೇ ಅಲ್ಲ : ಗುಜರಾತ್ ಬಿಜೆಪಿ ಸರ್ಕಾರ 

ಆತ್ಮೀಯರೇ,  ಇದ್ದಕ್ಕಿದ್ದಂತೆ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಅಪ್ಪಿಕೊಳ್ಳಲು ಹೊರಟಿರುವ ಸಂಘಿಗಳು ಏನೇ ನಾಟಕವಾಡಿದರೂ….  ಅವರ ಸಂವಿಧಾನ ದ್ವೇಷ ಮತ್ತು ಅಂಬೇಡ್ಕರ್ ದ್ವೇಷವನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ….   ಅದರ ಮತ್ತೊಂದು ಉದಾಹರಣೆ ಇಲ್ಲಿದೆ…   ಈಗ ದೇಶಾದ್ಯಂತ ದಲಿತ ಬಂಧು ಎಂದು ಪೋಸು ಹೊಡೆಯುತ್ತಿರುವ…

Leave a Reply

Your email address will not be published. Required fields are marked *