ಯುವ ಜನರು ಎಚ್ಚತ್ತುಕೊಂಡು ಪ್ರಶ್ನಿಸಬೇಕು.! ಇಲ್ಲವಾದರೆ ರಾಜಪ್ರಭುತ್ವ ಜಾರಿ ಮಾಡುತ್ತಾರೆ ಎಚ್ಚರ

ಯುವ ಶಕ್ತಿಯು ನಿರಂತರವಾದ ಅಭಿವೃದ್ಧಿಯನ್ನು ಬಯಸುವಂತಹ ಕಾರ್ಯವನ್ನೆ ಮಾಡುತ್ತದೆ.

ಈ ಕೆಳಗಿನ ಚಿತ್ರಗಳಲ್ಲಿ ನಮ್ಮ ದೊಡ್ಡಬಳ್ಳಾಪುರದ ಯುವಜನರು ಬಾಶೆಟ್ಟಿಹಳ್ಳಿಯಲ್ಲಿ ತಮ್ಮ ಮೂಲಭೂತ ಹಕ್ಕುಗಳಲ್ಲಿ ಒಂದಾದ ಬಸ್ಸು ನಿಲ್ದಾಣ ನಿರ್ಮಾಣ ಮಾಡಿಕೊಡುವಂತೆ ಕೇಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಇದರ ಮೂಲಕ ಸಮಾಜದಲ್ಲಿ ಯುವ ಜನರ ಪಾತ್ರವನ್ನು ಸಕ್ರಿಯವಾಗಿಸಿ ಪ್ರಜಾಪ್ರಭುತ್ವದಲ್ಲಿನ ಯುವ ಜನರ ಪಾತ್ರ ಮತ್ತು ಪ್ರಮುಖ್ಯತೆಯನ್ನು ತಿಳಿಸುವ ಜೊತೆಗೆ ಕಲಿಸುವಂತೆ ಮಾಡುತ್ತಿದೆ.

ಸಂವಿಧಾನದಲ್ಲಿ ಪ್ರಶ್ನೆ ಮಾಡುವುದು ಕೂಡ ನಮ್ಮ ಹಕ್ಕು ಅದರಂತೆ ಮೂಲಭೂತ ಸೌಕರ್ಯಗಳನ್ನು ಕೇಳುವುದು ಕೂಡ ನಮ್ಮಗಳ ಹಕ್ಕು ಎಂಬುದನ್ನು ಇಲ್ಲಿನ ಯುವಜನರು ಪ್ರಶ್ನಿಸುವ ಮೂಲಕ ತಮ್ಮ ಗ್ರಾಮದ ಜನರಿಗೆ ಮಾದರಿಯೆಂಬಂತೆ ತಿಳಿಸುವಂತಹ ಕೆಲಸ ಮಾಡಿದ್ದಾರೆ.

ಯುವ ಶಕ್ತಿಯೆಂದರೆ ನಾನಲ್ಲ, ನಾವು ಎಂಬುದನ್ನು ಅರಿತು ನಾವೆಲ್ಲರೂ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳುವಂತಹ ಕೆಲಸವನ್ನು ಮಾಡೋಣಾ.

ಇಲ್ಲವಾದರೆ ಪ್ರಶ್ನಿಸುವುದನ್ನೆ, ಕೇಳುವುದನ್ನೆ, ಭಾಗವಹಿಸುವುದನ್ನೆ ಇಲ್ಲವಾಗಿಸಿ ರಾಜಪ್ರಭುತ್ವವನ್ನು ಜಾರಿಗೊಳಿಸಿ ಬಿಡುತ್ತಾರೆ ಎಚ್ಚರ.! ಎಂದು ಸಂದೇಶ ಕೊಡುವ ಮೂಲಕ ಯುವಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.

Related Posts

ಸಂವಿಧಾನ ಕೊಟ್ಟ ಕಾನೂನಿನ ಮೂಲಕ ರಕ್ತ ಚಂದನದ ಕಳ್ಳ ಪುಷ್ಪನನ್ನು ಕರ್ನಾಟಕದಲ್ಲಿ ಬಂಧಿಸಿದ ಧೀರ ಭಗತ್ ರಾಯ್

ಬೆಂಗಳೂರು: ಬಹುಕೋಟಿಯ ಸಿನಿಮಾ ಪುಷ್ಪ 2 ಕಳೆದ ಗುರುವಾರ ಬಿಡುಗಡೆಗೊಂಡಿದ್ದು ಕರ್ನಾಟಕದ ಬಹುತೇಕ ಚಿತ್ರಮಂದಿರಗಳನ್ನು ಆವರಿಸಿಬಿಟ್ಟಿದ್ದ, ಎಲ್ಲರೂ ಕೂಡ ಪುಷ್ಪ ಟು ಚಿತ್ರವನ್ನು ನೋಡಲು ತುದಿಕಾಳಿನಲ್ಲಿ ಕಾದು ನಿಂತಿದ್ದರು. ಆದರೆ ಚಿತ್ರತಂಡವು ಪ್ರೇಕ್ಷಕರ ಈ ಎಲ್ಲಾ ಭರವಸೆಗಳನ್ನು ಸಂಪೂರ್ಣವಾಗಿ ಹುಸಿ ಮಾಡಿದೆ…

ಪುಷ್ಪ 2 ಚಿತ್ರ ಬಾಯ್ ಕಟ್ ಗೆ ಕರವೆ ಕರೆ : ಶಂಕರ್ ಗೌಡ

ಬೆಂಗಳೂರು: ಪುಷ್ಪ 2 ಚಿತ್ರವು ಇದೆ ತಿಂಗಳ 05 ನೇ ತಾರೀಖು ಬಿಡುಗಡೆಗೊಳ್ಳುಲ್ಲು ಸಜ್ಜಾಗಿದ್ದು ಚಿತ್ರಕ್ಕೆ ಈಗ ಬಾಯ್ ಕಟ್ ಅಭಿಯಾನದ ಬಿಸಿ ಮುಟ್ಟಿದೆ. ಕರ್ನಾಟಕದಲ್ಲಿ ಕನ್ನಡಿಗರೆ ಸಾರ್ವಭೌಮ ಕನ್ನಡ ಚಿತ್ರಗಳಿಗೆ ಹೆಚ್ಚು ಚಿತ್ರಮಂದಿರಗಳನ್ನು ಕೊಡಬೇಕು ಎಂದು ತಿಳಿಸಿದ್ದಾರೆ. ಹಾಗೇಯೆ ಪುಷ್ಪ…

Leave a Reply

Your email address will not be published. Required fields are marked *