ಉತ್ತರ ಪ್ರದೇಶ: ಮಧ್ಯಪ್ರದೇಶದಲ್ಲಿ ಆದಿವಾಸಿ ಬುಡಕಟ್ಟು ಯುವಕನ ಮುಖದ ಮೇಲೆ ಮೂತ್ರ ವಿಸರ್ಜನೆಯ ಘಟನೆಯ ಮಾಸುವ ಮೊದಲೇ ಉತ್ತರ ಪ್ರದೇಶದ ಸೋನಭದ್ರಾ ಜಿಲ್ಲೆಯಲ್ಲಿ ಮತ್ತೊಬ್ಬ ದಲಿತ ಯುವಕನನ್ನು ಅಮಾನವೀಯವಾಗಿ ನಡೆಸಿಕೊಂಡ ಘಟನೆಯ ವೀಡಿಯೋ ವೈರಲ್ ಆಗಿದೆ.
ದಲಿತ ಯುವಕನಿಂದ ತನ್ನ ಕಾಲು ನೆಕ್ಕಿಸಿಕೊಂಡ ಅಮಾನವೀಯ ಘಟನೆ ಉತ್ತರ ಪ್ರದೇಶದ ಸೋನಭದ್ರದಲ್ಲಿ ನಡೆದಿದೆ.
ದಲಿತ ಯುವಕ ವಿದ್ಯುತ್ ಇಲಾಖೆಯಲ್ಲಿ ಲೈನ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದು, ಮೇಲ್ವರ್ಗದ ವ್ಯಕ್ತಿ ಅಮಾನವೀಯವಾಗಿ ತನ್ನ ಕಾಲು ನೆಕ್ಕಿಸಿಕೊಂಡಿದ್ದು, ಇಂತಹ ನೀಚ ಕೃತ್ಯ ನಡೆಸಿದ ವ್ಯಕ್ತಿಯನ್ನು ತೇಜ್ ಬಾಲಿ ಸಿಂಗ್ ಎಂದು ಗುರುತಿಸಲಾಗಿದೆ.
ತೇಜ್ ಬಾಲಿ ಸಿಂಗ್ ದಲಿತ ಯುವಕನಿಗೆ ಅಮಾನವೀವಾಗಿ ಥಳಿಸಿ ಚಪ್ಪಲಿ ನೆಕ್ಕುವಂತೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಲಿತ ವ್ಯಕ್ತಿಯ ಕಿವಿ ಹಿಡಿದು ಅವನನ್ನು ( ಬಸ್ಕಿ ಹೊಡೆಸುವುದು) ಕೂರಿಸುವುದು ಸಹ ಕಂಡುಬರುತ್ತದೆ.
ವಿಡಿಯೋ ವೈರಲ್ ಆದ ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ತೇಜ್ ಬಾಲಿ ಸಿಂಗ್ ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ. ಇದು ಶಹಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಬಲಿಹ್ ಗ್ರಾಮದ ವೀಡಿಯೊ ಎಂದು ಹೇಳಲಾಗುತ್ತಿದೆ.
ಈ ವೈರಲ್ ವಿಡಿಯೋದಲ್ಲಿ ಗುತ್ತಿಗೆ ಲೈನ್‌ಮ್ಯಾನ್ ದಲಿತ ಯುವಕನಿಂದ ತೇಜ್ ಬಾಲಿ ಸಿಂಗ್ ಬಲವಂತವಾಗಿ ಚಪ್ಪಲಿಯನ್ನು ನೆಕ್ಕಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಪೊಲೀಸರು ತನಿಖೆ ನಡೆಸಿದಾಗ, ಜುಲೈ 6 ರಂದು ಈ ಘಟನೆ ನಡೆದಿರುವುದು ಕಂಡುಬಂದಿದೆ.
ತನ್ನ ತಾಯಿಯ ಚಿಕ್ಕಪ್ಪನ ಮನೆಯಲ್ಲಿ ವಿದ್ಯುತ್ ಕೆಟ್ಟಿದ್ದರಿಂದ ಸಂಜೆ 4 ಗಂಟೆಗೆ ದೋಷವನ್ನು ನೋಡಿದೆ. ಅಷ್ಟರಲ್ಲಿ ಶಹಗಂಜ್ ಪವರ್ ಹೌಸ್ ನಲ್ಲಿ ನೇಮಕಗೊಂಡ ಗುತ್ತಿಗೆ ನೌಕರ ತೇಜ್ಜಾಲಿ ಸಿಂಗ್ ಬಂದು ನನ್ನನ್ನು ನಿಂದಿಸಿ ಥಳಿಸಿ ಜಾತಿ ಸೂಚಕ ಪದಗಳನ್ನು ಬಳಸಿ ಚಪ್ಪಲಿ ನೆಕ್ಕುವಂತೆ ಮಾಡಿದ್ದಾನೆ. ಅಷ್ಟೇ ಅಲ್ಲ ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ. ಸುತ್ತಮುತ್ತಲಿನವರು ರಕ್ಷಣೆಗೆ ಬಂದಾಗ ನನ್ನನ್ನು ಬಿಟ್ಟು ಓಡಿ ಹೋದ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ.