ಕೊನೆಗೂ ಸಿಸಿಬಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ಚೈತ್ರಾ ಕುಂದಾಪುರ.

ಬೆಂಗಳೂರು: ಚೈತ್ರಾ ಕುಂದಾಪುರ 5 ಕೋಟಿ ವಂಚನೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರೋದು ನಿಮಗೆಲ್ಲಾ ಗೊತ್ತೇ ಇದೆ. ಪ್ರಕರಣದಲ್ಲಿ ಹಾಲಶ್ರೀ ಬಂಧನವಾಗುತ್ತಿದ್ದಂತೆ ಹಾಲು ಕುಡಿದಷ್ಟು ಖುಷಿಯಿಂದ ತೇಲುತ್ತಿದ್ದ ಚೈತ್ರಾಳನ್ನು ಸಿಸಿಬಿ ಅಧಿಕಾರಿಗಳು ಚೆನ್ನಾಗಿಯೇ ಬೆವರಿಳಿಸಿದ್ದಾರೆ. ಸಿಸಿಬಿ ಪ್ರಶ್ನೆಗಳಿಗೆ ಕಂಗಾಲಾದ ಚೈತ್ರಾ ಅಯ್ಯೋ ! ನನ್ನಿಂದ ತಪ್ಪಾಗಿದೆ. ಎಲ್ಲವನ್ನೂ ಹೇಳ್ತಿನಿ ಬಿಟ್ಬಿಡಿ ಎಂದು ಎಲ್ಲಾ ಸತ್ಯಗಳನ್ನು ಹೇಳಿದ್ದಾಳೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ವಿಚಾರಣೆ ವೇಳೆ ಚೈತ್ರಾ ಆಂಡ್ ಗ್ಯಾಂಗ್ ವ್ಯವಹಾರ ನಡೆಸಿದ್ದಕ್ಕೆ ವಿಡಿಯೋ, ಆಡಿಯೋ, ಮೊಬೈಲ್ ಕರೆಗಳು ಹಾಗೂ ವಂಚನೆ ಮಾಡಿದ್ದಾರೆ ಎನ್ನುವುದಕ್ಕೆ ಚಿನ್ನ, ಹಣ, ಬ್ಯಾಂಕ್, ಠೇವಣಿ, ಜಪ್ತಿ ಮಾಡಿದ್ದ ಕಾರು ಸೇರಿ ದಾಖಲೆಗಳನ್ನ ಮುಂದಿಟ್ಟು ಸಿಸಿಬಿ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ದಾಖಲೆ ಕಂಡು ಕಕ್ಕಾಬಿಕ್ಕಿ ಆದ ಚೈತ್ರ ಬೇರೆ ದಾರಿ ಕಾಣದೆ ಎಲ್ಲವನ್ನು ಬಾಯಿಬಿಟ್ಟಿದ್ದಾಳೆ. ತಾನು ಹಣ ಮಾಡುವ ಉದ್ದೇಶದಿಂದ ಇದೆಲ್ಲಾ ಮಾಡಿದೆ ಎಂದು ತಪ್ಪು ಒಪ್ಪಿಕೊಂಡಿದ್ದಾಳೆ.

ಅದಕ್ಕಾಗಿ ಪರಿಚಿತರೊಬ್ಬರ ಮೂಲಕ ಗೋವಿಂದ ಬಾಬು ಅವರನ್ನು ಮುನ್ನೆಲೆಗೆ ತರುತ್ತೇನೆ ಎಂದು ನಂಬಿಸಿ ಟಿಕೆಟ್ ನಮಗೆ ಬರುವಂತಹ ಸನ್ನಿವೇಶ ಸೃಷ್ಟಿಸುವುದಾಗಿ ಹೇಳಿದ್ದಾಳೆ. ನಂತರ ಟಿಕೆಟ್ ಸಿಕ್ಕರೆ ತಾನು ಸೇಫ್ ಅಂತ ಪ್ಲಾನ್ ಮಾಡಿದ್ದಳು ಎಂದು ಹೇಳಿದ್ದಾಳೆ.ಒಂದು ವೇಳೆ ಪ್ಲಾನ್ ಮಿಸ್ಸಾಗಿ ಟಿಕೆಟ್ ಮಿಸ್ ಆದ್ರೂ ಕೂಡ ಏನು ಮಾಡಬೇಕು ಅನ್ನೋದನ್ನ ಕೂಡ ಚೈತ್ರ ಮತ್ತು ಒಂದು ವೇಳೆ ಟಿಕೆಟ್ ಮಿಸ್ ಆಗಿದ್ದರೆ.ಚೈತ್ರಾ ಮತ್ತು ಗ್ಯಾಂಗ್ ಎರಡನೇ ಪ್ಲಾನ್ ಮಾಡಿದ್ದರು. ನಾವು ಹಣ ಇಟ್ಟುಕೊಂಡಿಲ್ಲ ವಿಶ್ವನಾಥ ಜಿಗೆ ಕೊಟ್ಟಿದ್ದಾಗಿ ಗೋವಿಂದ ಬಾಬುಗೆ ಹೇಳಿದ್ದಾರೆ.ನಾವು ನೆಪ ಮಾತ್ರಕ್ಕೆ ಸಹಾಯ ಮಾಡಿದ್ದೇವೆ ಹಣ ತೆಗೆದುಕೊಂಡು ಹೋಗಿ ನೀಡಿದ್ದೇವೆ ಅಷ್ಟೇ ಎಂದು ನಂಬಿಸುವುದು ಎರಡನೇ ಪ್ಲಾನ್ ಆಗಿತ್ತು.

ಒಂದು ವೇಳೆ ನಂಬದಿದ್ದರೆ ವಿಶ್ವನಾಥ್ ಜಿ ಮೃತಪಟ್ಟಿದ್ದಾರೆ. ನಮಗೆ ಗೊತ್ತೇ ಇಲ್ಲ ಎಂದು ಗೋವಿಂದ ಬಾಬು ಬಳಿ ಹೇಳುವುದಾಗಿ ಪ್ಲಾನ್ ಮಾಡಿದ್ದರು. ಅದರಂತೆ ಗೋವಿಂದ ಬಾಬುಗೆ ಹೇಳಿದ ಚೈತ್ರ ಆಂಡ್ ಗ್ಯಾಂಗ್ ನಂತರ ಮೂರುವರೆ ಕೋಟಿ ಚೈತ್ರ ಕೈ ಸೇರಿತ್ತು ಎನ್ನಲಾಗಿದೆ. ಈ ಎಲ್ಲಾ ವಿಚಾರವನ್ನು ಸಿಸಿಬಿ ಮುಂದೆ ಚೈತ್ರ ಬಾಯಿ ಬಿಟ್ಟಿದ್ದಾಳೆ ಎನ್ನಲಾಗಿದೆ.

Related Posts

ಸಂವಿಧಾನ ಕೊಟ್ಟ ಕಾನೂನಿನ ಮೂಲಕ ರಕ್ತ ಚಂದನದ ಕಳ್ಳ ಪುಷ್ಪನನ್ನು ಕರ್ನಾಟಕದಲ್ಲಿ ಬಂಧಿಸಿದ ಧೀರ ಭಗತ್ ರಾಯ್

ಬೆಂಗಳೂರು: ಬಹುಕೋಟಿಯ ಸಿನಿಮಾ ಪುಷ್ಪ 2 ಕಳೆದ ಗುರುವಾರ ಬಿಡುಗಡೆಗೊಂಡಿದ್ದು ಕರ್ನಾಟಕದ ಬಹುತೇಕ ಚಿತ್ರಮಂದಿರಗಳನ್ನು ಆವರಿಸಿಬಿಟ್ಟಿದ್ದ, ಎಲ್ಲರೂ ಕೂಡ ಪುಷ್ಪ ಟು ಚಿತ್ರವನ್ನು ನೋಡಲು ತುದಿಕಾಳಿನಲ್ಲಿ ಕಾದು ನಿಂತಿದ್ದರು. ಆದರೆ ಚಿತ್ರತಂಡವು ಪ್ರೇಕ್ಷಕರ ಈ ಎಲ್ಲಾ ಭರವಸೆಗಳನ್ನು ಸಂಪೂರ್ಣವಾಗಿ ಹುಸಿ ಮಾಡಿದೆ…

ಪುಷ್ಪ 2 ಚಿತ್ರ ಬಾಯ್ ಕಟ್ ಗೆ ಕರವೆ ಕರೆ : ಶಂಕರ್ ಗೌಡ

ಬೆಂಗಳೂರು: ಪುಷ್ಪ 2 ಚಿತ್ರವು ಇದೆ ತಿಂಗಳ 05 ನೇ ತಾರೀಖು ಬಿಡುಗಡೆಗೊಳ್ಳುಲ್ಲು ಸಜ್ಜಾಗಿದ್ದು ಚಿತ್ರಕ್ಕೆ ಈಗ ಬಾಯ್ ಕಟ್ ಅಭಿಯಾನದ ಬಿಸಿ ಮುಟ್ಟಿದೆ. ಕರ್ನಾಟಕದಲ್ಲಿ ಕನ್ನಡಿಗರೆ ಸಾರ್ವಭೌಮ ಕನ್ನಡ ಚಿತ್ರಗಳಿಗೆ ಹೆಚ್ಚು ಚಿತ್ರಮಂದಿರಗಳನ್ನು ಕೊಡಬೇಕು ಎಂದು ತಿಳಿಸಿದ್ದಾರೆ. ಹಾಗೇಯೆ ಪುಷ್ಪ…

Leave a Reply

Your email address will not be published. Required fields are marked *