ಸಂವಿಧಾನವನ್ನು ನೀವು ಉಳಿಸಿದರೆ ಅದು ನಿಮ್ಮನ್ನು ಉಳಿಸುವುದು -ಚಿಕ್ಕಮಾರನಹಳ್ಳಿ ಅನಂತ್

ನಾವು ಬಂದಿರುವುದೆ ಸಂವಿಧಾನವನ್ನು ಬದಲಿಸಿ ಮನುಸ್ಮೃತಿಯನ್ನು ಜಾರಿಮಾಡಲಿಕ್ಕಾಗಿ ಎಂಬುದನ್ನು ಸಾಕಷ್ಟು ವಿಷಯಗಳಲ್ಲಿ ಸಾಬೀತು ಮಾಡಿದ್ದಾರೆ ಅದರಲ್ಲಿ ಇದು ಕೂಡ ಒಂದು. 

  ಜಾತ್ಯತೀತ ಮತ್ತು ಸಮಾಜವಾದ ಎಂಬ ಎರಡು ಪದಗಳಷ್ಟೆ ನಮಗೆ ಕಾಣುತ್ತಿರುವುದು, ಇದು ತುಂಬಾ ಸುಲಭ ಎನಿಸಬಹುದು ಇದನ್ನು ‘ಜಾತ್ಯತೀತ ಮತ್ತು ಸಮಾಜವಾದ’ ಎಂಬ ಪದಗಳ ಅಂತರಾಳ ತಿಳಿಯದವರಿಗೆ.

  ಸಂವಿಧಾನವನ್ನೆ ಬದಲಿಸಲು ಹೊರಟವರಿಗೂ ಕೂಡ ಜಾತ್ಯಾತೀತ ಮತ್ತು ಸಮಾಜವಾದ ಎಂಬ ಎರಡು ಪದಗಳನ್ನು ಬದಲಿಸುವುದು ದೊಡ್ಡದೇನಲ್ಲ ಬಿಡಿ. 

  ಸಂವಿಧಾನವನ್ನು ಬದಲಿಸಿದರೂ ಕೂಡ ಅಂತಹ ದೊಡ್ಡ ಬದಲಾವಣೆಗಳೇನು ಆಗುವುದಿಲ್ಲ.! ಆಗುವುದು ಇಷ್ಟೆ.

   ಇಲ್ಲಿನ ಎಸ್ಸಿ, ಎಸ್ಟಿ ಮತ್ತು ಓಬಿಸಿಗಳ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಸ್ಥಿತಿಯಷ್ಟೆ ಬದಲಾಗುತ್ತದೆ. ಆಹಾ!! ಕೆಲವರಿಗೆ ಓಬಿಸಿಗಳೆಂದರೆ ಅರ್ಥವಾಗುವುದಿಲ್ಲ, ಪಾಪಾ ಅವರನ್ನ ಅವರು ಜನರಲ್ ಕ್ಯಾಟಗಿರಿ ಎಂದು ತಿಳಿದುಕೊಂಡಿದ್ದಾರೆ ಅಷ್ಟರ ಮಟ್ಟಕ್ಕೆ ಕೆಲವರು ಅಜ್ಞಾನಿಗಳಾಗಿದ್ದಾರೆ ಎಂಬುದೆ ಸತ್ಯ. 

  ನಾನು ಇದನ್ನು ಎಲ್ಲರಿಗೂ ಅರ್ಥವಾಗಬೇಕು ಎಂಬ ಸದುದೇಶದಿಂದ ಓಬಿಸಿಗಳ ಜಾತಿ ವಿಂಗಡಣೆ ಪಟ್ಟಿಯನ್ನು ಬರೆದಿರುವೆ ಅವು ಇವುಗಳಂತಿವೆ, ಎಲ್ಲವನ್ನು ಬರೆಯಲು ಸಾಧ್ಯವಾಗದಿದ್ದರು ಕರ್ನಾಟಕದಲ್ಲಿ ಹೆಚ್ಚಿನ ಜನ ಸಂಖ್ಯೆಯಲ್ಲಿರುವ ಜಾತಿಗಳನ್ನಷ್ಟೆ ಪಟ್ಟಿ ಮಾಡಲು ಪ್ರಯತ್ನಿಸಿದ್ದೇನೆ. ಒಕ್ಕಲಿಗ, ಕುರುಬ, ಲಿಂಗಾಯುತ, ಕುಂಬಾರ, ಅಕ್ಕಸಾಲಿಗ, ಈಡಿಗಾ, ಬೆಸ್ತ, ಕಾಡು ಕುರುಬ, ಜೇನು ಕುರುಬ, ವೀರಶೈವ, ಮತ್ತು 2A, 2B, 3A, 3B ಕೆಟಗಿರಿ 1 ನಲ್ಲಿ ಬರುವ ಇತರೆ ಜಾತಿಗಳು ಹಿಂದೂಳಿದವರು‌ ( ಸನಾತನ ಧರ್ಮದ ಶೂದ್ರರು) ಎಂಬುದನ್ನು ನೀವುಗಳು ತಿಳಿಯಬೇಕಿದೆ. 

  ಸಂವಿಧಾನ ಬದಲಾಗಿ ಮನುಸ್ಮೃತಿ ಜಾರಿಯಾದರೆ ನಿಮ್ಮಲ್ಲರಿಗೂ ಆಗುವುದಿಷ್ಟೆ. 

  ಬಟ್ಟೆ, ಸೂಟು, ಸೀರೆ, ಲಂಗ ದಾವಣಿ ಇತರೆ ಉಡುಪುಗಳ ಬದಲಾಗಿ ಕತ್ತಿಗೊಂದು ಮಡಕೆ, ಸೊಂಟಕ್ಕೊಂದು ಪೊರಕೆ, ಕಾಲಿಗೊಂದು ಗಂಟೆ ತಿಕ್ಕೊಂದು ಲಂಗೋಟಿ ಬರುತ್ತದೆ.

  ವಿದ್ಯಾಭ್ಯಾಸದ ಬದಲಾಗಿ ತಲೆಗೆ ಸೆಗಣಿ ಬಂದು, ಅನಾಗರೀಕತೆ ಬರುತ್ತದೆ. 

  ಸರ್ಕಾರಿ ಉದ್ಯೋಗ, ಖಾಸಗಿ ಉದ್ಯೋಗ, ಉದ್ಯಮ, ಕೈಗಾರಿಕೋದ್ಯಮದ ಕೆಲಸಗಳ ಬದಲಾಗಿ ಚಾಕ್ರಿ, ಜೀತ, ಚರ್ಮ ಸುಲಿಯೋದು, ಚಪ್ಪಲಿ ಒಲಿಯೋದು, ದನ ಕಾಯೋದು, ತಲೆಯ ಮೇಲೆ ಕಕ್ಕ ಹೊರೋದು, ಚರಂಡಿ ಬಾಚುವಂತಹ ಕೀಳು ಮಟ್ಟದಂತೆ ಬಿಂಬಿಸಿರುವ ಕೆಲಸಗಳು ಬರುತ್ತದೆ. 

  ಮಹಿಳೆಯರು, ಹೆಣ್ಣು ಮಕ್ಕಳ ಎದೆಯ ಮೇಲಿನ ಬಟ್ಟೆಯ ಬದಲಾಗಿ ಬಟ್ಟೆಯಿಲ್ಲದೆ ಎದೆಗಳನ್ನು ಪುರುಷರೆಲ್ಲರಿಗೂ ತೋರಿಸಿಕೊಂಡು ಓಡಾಡುವುದು ಬರುತ್ತದೆ. 

  ಶಿಕ್ಷಣ ಕಲಿಯಬೇಕು ಎಂದು ಬಯಸುವವರು ಮತ್ತು ಬಾಯಲ್ಲಿ ಶಿಕ್ಷಣದ ಅಭ್ಯಾಸ ಮಾಡಬೇಕು ಎಂಬ ಬಯಕೆ ಬಂದರು ಅದರ ಬದಲಾಗಿ ಕಿವಿಗೆ ಕಾದ ಸೀಸ, ಬಾಯಿಲ್ಲಿನ ನಾಲಿಗೆಗೆ ಕತ್ತರಿ ಮತ್ತು ಮುಖದಲ್ಲಿರು ಕಣ್ಣುಗಳಿಗೆ ಅಂದತ್ವ ಬರುತ್ತದೆ. 

  ದುಡಿದರೆ ದುಡ್ಡಿನ ಬದಲಾಗಿ ರೊಟ್ಟಿ, ಹಲಸಿದ ಅನ್ನ, ಕೆಟ್ಟು ಹೋದ ಆಹಾರ ಸಿಗುತ್ತದೆ.

  ಮದುವೆ ಬಯಸಿದರೆ, ಮದುವೆ ಹೆಣ್ಣಿಗೆ ಮೊದಲು ಮೇಲ್ಜಾತಿಯವರಿಂದ ಕನ್ಯತ್ವ ಪರೀಕ್ಷೆ ಭಾಗ್ಯದ ನಂತರ ನಿಮ್ಮಗಳಿಗೆ ಮದುವೆಯ ಯೋಗ ಸಿಗುತ್ತದೆ. 

  ಅಯ್ಯೋ ಪಟ್ಟಿ ಮಾಡುತ್ತಾ ಹೋದರೆ ಒಂದಲ್ಲ‌ ಎರಡಲ್ಲ ನೂರಾರು ಬದಲಾವಣೆ ದೊರಕಿ ನಿಮ್ಮ ಜೀವನ ಬದಲಾಗುತ್ತಾ ಹೋಗುತ್ತದೆ. 

  ಮೀಸಲಾತಿ ಬಯಸಿದರೆ ತಲೆಯಿಂದ ಹುಟ್ಟೋದು, ಭುಜದಿಂದ ಹುಟ್ಟೋದು, ಸೊಂಟದಿಂದ ಹುಟ್ಟೋದು ಮತ್ತು ಕಾಲಿನಿಂದ ಹುಟ್ಟು ಕೊನೆಗೆ ಕಕ್ಕದಿಂದ ಉದುರುವುದು ಸಿಗುತ್ತದೆ. 

  ಒಟ್ಟಾರೆ ಬ್ರಹ್ಮನ ತಲೆಯಿಂದೊಬ್ಬ, ಭುಜದಿಂದ ಮತ್ತೊಬ್ಬ, ಸೊಂಟದಿಂದ ಇನ್ನೊಬ್ಬ ಮತ್ತು ಶೂದ್ರ ಮುಂಡೆವು ಕಾಲಿಂದ ಹುಟ್ಟು ಅತಿ ಶೂದ್ರರು ಹೆಸಿಗೆಯಿಂದ ಹುಟ್ಟುವ ಸನ್ನಿವೆಷ ದೊರಕುತ್ತದೆ. 

  ಯೋಚಿಸಿ ಸಂವಿಧಾನದ ನಂತರದ ನಿಮ್ಮ ಸ್ಥಿತಿಗತಿಗಳು ಏನೆಂಬುದನ್ನು. ಇನ್ನಾದರೂ ಬದಲಾಗಿ ನಾವೆಲ್ಲ ಸಂವಿಧಾನದ ಅಡಿಯಲ್ಲಿ ಜೀವಿಸೋಣಾವೆ ಅಥವಾ ಕೆಲರಿಗೆ ತಿಳಿದು, ಕೆಲವರಿಗೆ ತಿಳಿಯದೆ ಇರುವಂತ ಮನುಸ್ಮೃತಿ ಬೇಕೆ. 

 ಆಯ್ಕೆ ನಿಮ್ಮದು….👉 

 ನೀವು ಸಂವಿಧಾನವನ್ನು ಉಳಿಸಿದರೆ ಅದು ನಿಮ್ಮನ್ನು ಉಳಿಸುವುದು.

 -ಚಿಕ್ಕಮಾರನಹಳ್ಳಿ ಅನಂತ್

Related Posts

ಸಂವಿಧಾನ ಕೊಟ್ಟ ಕಾನೂನಿನ ಮೂಲಕ ರಕ್ತ ಚಂದನದ ಕಳ್ಳ ಪುಷ್ಪನನ್ನು ಕರ್ನಾಟಕದಲ್ಲಿ ಬಂಧಿಸಿದ ಧೀರ ಭಗತ್ ರಾಯ್

ಬೆಂಗಳೂರು: ಬಹುಕೋಟಿಯ ಸಿನಿಮಾ ಪುಷ್ಪ 2 ಕಳೆದ ಗುರುವಾರ ಬಿಡುಗಡೆಗೊಂಡಿದ್ದು ಕರ್ನಾಟಕದ ಬಹುತೇಕ ಚಿತ್ರಮಂದಿರಗಳನ್ನು ಆವರಿಸಿಬಿಟ್ಟಿದ್ದ, ಎಲ್ಲರೂ ಕೂಡ ಪುಷ್ಪ ಟು ಚಿತ್ರವನ್ನು ನೋಡಲು ತುದಿಕಾಳಿನಲ್ಲಿ ಕಾದು ನಿಂತಿದ್ದರು. ಆದರೆ ಚಿತ್ರತಂಡವು ಪ್ರೇಕ್ಷಕರ ಈ ಎಲ್ಲಾ ಭರವಸೆಗಳನ್ನು ಸಂಪೂರ್ಣವಾಗಿ ಹುಸಿ ಮಾಡಿದೆ…

ಪುಷ್ಪ 2 ಚಿತ್ರ ಬಾಯ್ ಕಟ್ ಗೆ ಕರವೆ ಕರೆ : ಶಂಕರ್ ಗೌಡ

ಬೆಂಗಳೂರು: ಪುಷ್ಪ 2 ಚಿತ್ರವು ಇದೆ ತಿಂಗಳ 05 ನೇ ತಾರೀಖು ಬಿಡುಗಡೆಗೊಳ್ಳುಲ್ಲು ಸಜ್ಜಾಗಿದ್ದು ಚಿತ್ರಕ್ಕೆ ಈಗ ಬಾಯ್ ಕಟ್ ಅಭಿಯಾನದ ಬಿಸಿ ಮುಟ್ಟಿದೆ. ಕರ್ನಾಟಕದಲ್ಲಿ ಕನ್ನಡಿಗರೆ ಸಾರ್ವಭೌಮ ಕನ್ನಡ ಚಿತ್ರಗಳಿಗೆ ಹೆಚ್ಚು ಚಿತ್ರಮಂದಿರಗಳನ್ನು ಕೊಡಬೇಕು ಎಂದು ತಿಳಿಸಿದ್ದಾರೆ. ಹಾಗೇಯೆ ಪುಷ್ಪ…

Leave a Reply

Your email address will not be published. Required fields are marked *