ದಲಿತ ಕೂಲಿ ಕಾರ್ಮಿಕನೋರ್ವನಿಗೆ ಜಾತಿ ನಿಂದಿಸಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 72 ವರ್ಷದ ವ್ಯಕ್ತಿಗೆ ಉತ್ತರಪ್ರದೇಶದ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಭದೋಹಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಸದ್ ಅಹ್ಮದ್ ಹಶ್ಮಿ ಅವರು 2002ರಲ್ಲಿ ನಡೆದ ಅಜೀತ್ ಕುಮಾರ್ (32) ಕೊಲೆ ಪ್ರಕರಣದಲ್ಲಿ ದೇವಿಚರಣ್ ವಿಶ್ವಕರ್ಮ ದೋಷಿ ಎಂದು ತೀರ್ಪು ನೀಡಿದ್ದು, ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು ಮತ್ತು 52,000 ರೂ.ದಂಡವನ್ನು ವಿಧಿಸಿದ್ದಾರೆ.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (SC-ST) ಅನಿಲ್ ಕುಮಾರ್ ಶುಕ್ಲಾ ಅವರು ಈ ಘಟನೆ 2022ರ ಜು.18ರಂದು ಸಂಭವಿಸಿದೆ. ಆಕಾಶ್ ಮಿಶ್ರಾ ಎಂಬವರು ಮನೆ ನಿರ್ಮಾಣ ಮಾಡುತ್ತಿದ್ದರು ಮತ್ತು ದೇವಿಚರಣ್ ವಿಶ್ವಕರ್ಮ ಮತ್ತು ಮೃತ ಅಜೀತ್ ಕುಮಾರ್ ಅಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.
ಅಜೀತ್ ಕುಮಾರ್ ಇತರ ಕಾರ್ಮಿಕರಿಗೆ ಚಹಾ ನೀಡುತ್ತಿದ್ದಾಗ ವಿಶ್ವಕರ್ಮ ಜಾತಿ ನಿಂದನೆ ಮಾಡಿದ್ದಾನೆ. ಇದಕ್ಕೆ ಅಜೀತ್ ಕುಮಾರ್ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ ಅಲ್ಲಿದ್ದ ಬಲವಾದ ಆಯುಧದಿಂದ ವಿಶ್ವಕರ್ಮ, ಅಜೀತ್ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿದ್ದ ಅಜೀತ್ ಸ್ಥಳದಲ್ಲೇ ಮೃತಪಟ್ಟಿದ್ದರು.
ಘಟನೆ ಬಳಿಕ ಆರೋಪಿ ದೇವಿಚರಣ್ ವಿಶ್ವಕರ್ಮ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆ ಬಳಿಕ ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಕೂಡ ಸಲ್ಲಿಕೆಯಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ದೇವಿಚರಣ್ ವಿಶ್ವಕರ್ಮ ಅಪರಾಧಿ ಎಂದು ತೀರ್ಪು ವಿಧಿಸಿದೆ.