ನೆಲಮಂಗಲ: ಶ್ರೀ ಮುರುಳಿ ಶಿಕ್ಷಣ ಸಂಸ್ಥೆ ಸಂಸ್ಥಾಪಕರಾದ ಮಾರಯ್ಯನವರ ಶಿಕ್ಷಣ ಪ್ರೇಮದಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯಲು ಸಹಕಾರಿಯಾಗಿದೆ ಮತ್ತು ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಕೊಡುವುದೆ ನಮ್ಮ ಧ್ಯೇಯ ಎಂದು ಶ್ರೀ ಮುರಳಿ ವಿದ್ಯಾ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮುರುಳಿಧರ್ ಅಭಿಪ್ರಾಯ ಪಟ್ಟರು.
ಇದೆ ಸಂದರ್ಭದಲ್ಲಿ ಪ್ರಾಂಶುಪಾಲರಾದ ರಾಮಯ್ಯನವರು ಮಾತನಾಡಿ ಕಾಲೇಜು ಪ್ರಾರಂಭದ ದಿನಗಳಿಂದು ಸಾವಿರಾರೂ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆ ಜೀವನ ರೂಪಿಸಿಕೊಟ್ಟಿದೆ ಮುಂದಿನ ದಿನಗಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿಯು ಕೂಡ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುತ್ತೇವೆ ಎಂದರು.
ನಗರದ ವಾಜರಹಳ್ಳಿಯ ಮಾರುತಿ ನಗರದಲ್ಲಿ ಶ್ರೀಮುರಳಿ ವಿದ್ಯಾಸಂಸ್ಥೆ ಆವರಣದಲ್ಲಿ ಮಾರಯ್ಯ ಬಿ ಎಂ ರವರ 7ನೇ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾಲೇಜಿನ ಹೊಸ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಹಾಗೂ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ಘಾಟಿಸಿಮಾತನಾಡಿದರು.
ಮುರುಳಿ ಸಂಸ್ಥೆ ಅನೇಕ ವರ್ಷಗಳಿಂದ ಗ್ರಾಮೀಣ ಮಕ್ಕಳಿಗೆ ಸೇವೆಯನ್ನು ಸಲ್ಲಿಸುವ ಮೂಲಕ ಸಾಧಕ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಪರಿಚಯಿಸಿದೆ.
ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತಷ್ಟು ಅನುಕೂಲವಾಗುವ ಸಹಕಾರವನ್ನು ಮಾಡುತ್ತೇವೆ ಎಂದರು.
ಸಂದರ್ಭದಲ್ಲಿ ವೈಭವ್ ನೇತ್ರಾಲಯ ಸಂಸ್ಥಾಪಕ ಡೆನೋಕಿರ್ಲೋಸ್ಕರ್ ಬೆಟ್ಟತಿಮ್ಮೇಗೌಡ, ರವಿಕುಮಾರ್, ಶರತ್ ಕುಮಾರ್, ಪ್ರದೀಪ್ ಕುಮಾರ್, ಪ್ರಾಂಶುಪಾಲರಾದ ರಾಮಯ್ಯ, ಮುಖ್ಯ ಶಿಕ್ಷಕ ಸುರೇಶ್, ಶಿಕ್ಷಕರಾದ ನಂಜುಡೇಗೌಡ, ಮಾರುತಿ ಎಮ್ ಪಿ, ಅಂಜನಾಮೂರ್ತಿ, ಚಂದ್ರಕಲಾ, ನರಹರಿ ರಾಜಕುಮಾರ್, ಶಿವನಾಯಕ್, ರೂಪಿಣಿ, ನರಸಿಂಹಮೂರ್ತಿ, ರಾಮಚಂದ್ರ ರಾವ್, ಪುಟ್ಟರಂಗಯ್ಯ, ಜೀತೇಂದ್ರ, ಜಯಸಿಂಹ, ಹೊನ್ನೇಗೌಡ, ಸೋಮಶೇಖರ್ ಇದ್ದರು.