ನೆಲಮಂಗಲ‌ ಅಂಬೇಡ್ಕರ್ ಕ್ರಿಡಾಂಗಣದಲ್ಲೊಂದು ಪ್ರಾಣ ಕಂಟಕ ರಿವಾಲ್ವಿಂಗ್ ಗೇಟ್: ಕಣ್ಮುಚ್ಚಿ ಕುಳಿತ ಕ್ರೀಡಾ ಇಲಾಖೆ

ನೆಲಮಂಗಲ: ಬೆಂಗಳೂರು ಹೊರ ವಲಯದ ನೆಲಮಂಗಲ ತಾಲ್ಲೂಕು ಗಾರ್ಡನ್ ಸಿಟಿಗೆ ಹೊಂದಿಕೊಂಡಂತ್ತಿದ್ದು ನೆಲಮಂಗಲ ನಗರ ಪ್ರದೇಶದಲ್ಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿರು ಡಾ. ಬಿ.ಆರ್ ಅಂಬೇಂಡ್ಕರ್ ಕ್ರೀಡಾಂಗಣದಲ್ಲಿ ರಿವಾಲ್ವಿಂಗ್ ಗೇಟ್ ಒಂದು ಅಲ್ಲಿನ ಜನರ ಪ್ರಾಣಕ್ಕೆ ಕಂಟಕವಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕಣ್ಮುಚ್ಚಿ ಕುಳಿತಿದೆ.

ಈ ಕುರಿತು ಹಲವಾರು ಬಾರಿ ಬೆಂ.ಗ್ರಾ ಜಿಲ್ಲೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಗಮನಕ್ಕೆ ಗಮನಕ್ಕೆ ತಂದಿದ್ದರು ಕೂಡ ಪ್ರಯೋಜನವಿಲ್ಲ ಎನ್ನುತ್ತಿದ್ದಾರೆ ಕ್ರೀಡಾಭ್ಯಾರ್ಥಿಗಳು ಮತ್ತು ಸಾರ್ವಜನಿಕರು.

ನಾಲ್ಕೈದು ದಿನಗಳ ಹಿಂದೆ ಹಿಂದೆ ಬೆಂಗಳೂರಿನ ಮಲ್ಲೇಶ್ವರ ಕ್ರೀಡಾಂಗಣದಲ್ಲಿ ಕ್ರೀಡಾಂಗಣದ ಗೇಟ್ ಒಂದು ದುರಸ್ಥಿಗೊಳ್ಳದೆ ಅಮಾಯಕ 10 ವರ್ಷದ ಪುಟ್ಟ ಕಂದಮ್ಮನನ್ನು ಬಲಿ ತೆಗೆದುಕೊಂಡ ಘಟನೆಯೊಂದು ನಡೆದಿದ್ದು ಈಗ ಇಲ್ಲಿಯೂ ಕೂಡ ಇದೆ ರೀತಿಯ ಪರಿಣಾಮ ಉಂಟಾಗಬಹುದೆಂಬ ಆತಂಕದ ವಾತಾವರಣ ಸೃಷ್ಠಿಯಾಗಿದೆ.

ಪ್ರತಿನಿತ್ಯ ಸಾವಿರಾರೂ ಸಂಖ್ಯೆಯಲ್ಲಿ ಈ ಕ್ರೀಡಾಂಗಣಕ್ಕೆ ವಾಕ್ ಮಾಡಲು ವ್ಯಾಯಾಮಕ್ಕಾಗಿ ಮತ್ತು ಕ್ರೀಡಾಭ್ಯಸಕ್ಕಾಗಿ ಬರುತ್ತಾರೆ ಇವರೆಲ್ಲರೂ ಕೂಡ ಕ್ರೀಡಾಂಗಣದಲ್ಲಿರುವ ಇಂತಹ ಅನೇಕ ಸಮಸ್ಯೆಗಳ ಬಗ್ಗೆ ಧ್ವನಿಯತ್ತಿದರು ಕೂಡ ಪ್ರಯೋಜನವಿಲ್ಲವಾಗಿದೆ.

ಕ್ರೀಡಾಂಗಣ ಕಮಿಟಿಯ ಖಾತೆಯಲ್ಲಿ ಲಕ್ಷಾಂತರ ರೂ ಹಣವಿದ್ದರು ಕೂಡ ಅದನ್ನು ಬಳಸಿಕೊಂಡು ಈ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೆ ಈ ಸಮಸ್ಯೆಯ ಬಗ್ಗೆ ಗಮನ ಹರಿಸಿ ಪ್ರಾಣಕ್ಕೆ ಕಂಟಕವಾಗಿರುವ ಈ ಗೇಟ್ ಅನ್ನು ದುರಸ್ಥಿ ಮಾಡಿ ಸಮಸ್ಯೆಯನ್ನು ಬಗೆ ಹರಿಸುತ್ತಾರೆಯೆ ಎಂದು ಕಾಡು ನೋಡಬೇಕಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಸಮೀಪವಿದ್ದು ಅಧಿಕಾರಿಗಳು ಕಚೇರಿಗೆ ಹೋಗಿ ಕಚೇರಿಯ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಮನೆಗೆ ತೆರಳುತ್ತಾರೆ ಹೊರತು ಕ್ರೀಡಾಂಗಣಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸುವಂತಹ ಯಾವುದೇ ಕೆಲಸವನ್ನು ಕೂಡ ಮಾಡುತ್ತಿಲ್ಲ, ಇನ್ನು ನೆಲಮಂಗಲ ತಾಲೂಕು ಕ್ರೀಡಾಂಗಣ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಶದಲ್ಲಿದ್ದು ನೆಲಮಂಗಲ ತಾಲೂಕು ಕ್ರೀಡಾಂಗಣಕ್ಕೂ ಮತ್ತು ದೇವನಹಳ್ಳಿಯ ಕ್ರೀಡಾ ಇಲಾಖೆಯ ಕಚೇರಿಗೂ ತುಂಬಾ ಅಂತರವಿದ್ದು ಇಲ್ಲಿಗಂತು ಅಧಿಕಾರಿಗಳು ವರ್ಷಕ್ಕೊಮ್ಮೆ ಬರಲು ಹಿಂದೆ ಮುಂದೆ ನೋಡುತ್ತಾರೆ ಮತ್ತು ಕ್ರೀಡಾಂಗಣದ ತಾಲ್ಲೂಕು ಕಮಿಟಿಯ ಸಭೆಯನ್ನು ನಡೆಸಬೇಕು ಎಂಬ ಅದೇಶವಿದ್ದರು ಯಾವುದೆ ಕಮಿಟಿ ಸಭೆ ನಡೆಯುತ್ತಿಲ್ಲ ಮತ್ತು ಸಂಪೂರ್ಣವಾಗಿ ನೆಲಮಂಗಲ ತಾಲ್ಲೂಕನ್ನು ಕ್ರೀಡಾ ಇಲಾಖೆ ನಿರ್ಲಕ್ಷ್ಯ ಮಾಡುತ್ತಿದೆ ಮತ್ತು ಈ ರಿವಾಲ್ವಿಂಗ್‌ ಗೇಟ್‌ ಅನ್ನೂ ಕೂಡಲೆ ಸರಿಪಡಿಸಬೇಕು ಇಲ್ಲವಾದಲ್ಲಿ ಇದರಿಂದ ಯಾವುದೆ ಸಮಸ್ಯೆಗಳಾದಲ್ಲಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರೆ ನೇರ ಕಾರಣವಾಗಿ ಕ್ರಿಮಿನಲ್‌ ಮೊಕದ್ದಮ್ಮೆ ಹೊಡಬೇಕಾಗುತ್ತದೆ ಎಂದು ಯುವಶಕ್ತಿ ಕರ್ನಾಟಕ ರಾಜ್ಯ ಸಂಚಾಲಕ ಚಿಕ್ಕಮಾರನಹಳ್ಳಿ ಅನಂತ್ (Chikkamaranahalli ananth) ಆಕ್ರೋಶ ವ್ಯಕ್ತಪಡಿಸಿ ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುವಂತೆ ಆಗ್ರಹಿಸಿದ್ದಾರೆ.

Related Posts

ನೆಲಮಂಗಲ: 15 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ 70 ರ ಮುದುಕ

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದ್ದು 15 ವರ್ಷದ ಬಾಲಕಿ ಮೇಲೆ 70 ವರ್ಷದ ವೃದ್ಧನಿಂದ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ ಯಾರೂ ಇಲ್ಲದ…

ತಾನು ಕೊಂದಿದ್ದ ಮಹಿಳೆಯ ದೇಹವನ್ನು ಅಂತ್ಯಸಂಸ್ಕಾರ ವೇಳೆ ಹೊತ್ತೊಯ್ಯಲು ಯತ್ನಿಸಿದ ಚಿರತೆ! ನೆಲಮಂಗಲದಲ್ಲೊಂದು ಭಯಾನಕ ಘಟನೆ

ನೆಲಮಂಗಲ: ಒಂಟಿಯಾಗಿ ಸಿಗುವವರ ಮೇಲೆ ದಾಳಿ ಮಾಡಿ ಕೊಂದು ತಿನ್ನುವ ಚಿರತೆ ಜನ ಸಮೂಹವನ್ನು ಕಂಡಾಗ ಅಡಗಿ ಕುಳಿತುಕೊಳ್ಳುತ್ತದೆ. ಆದರೆ ನೆಲಮಂಗಲದಲ್ಲಿ ಮಾತ್ರ ಇದಕ್ಕೆ ವಿರೋಧವೆಂಬಂತೆ ಚಿರತೆಯೊಂದು ಜನರು ಮೃತ ಮಹಿಳೆಯ ಶವವನ್ನು ಕಾಯುತ್ತಿದ್ದಾಗಲೇ ಅವರನ್ನು ಬೆದರಿಸಿ ಮೃತದೇಹವನ್ನು ಹೊತ್ತೊಯ್ಯಲು ಯತ್ನಿಸಿದೆ. ಬೆಂಗಳೂರು…

Leave a Reply

Your email address will not be published. Required fields are marked *