ಕರ್ನಾಟಕದಲ್ಲಿ ಪ್ರತಿವರ್ಷ 900ಕ್ಕೂ ಹೆಚ್ಚು ಮಕ್ಕಳಲ್ಲಿ ಕ್ಯಾನ್ಸರ್‌- ಬೆಂಗಳೂರಲ್ಲೇ ಹೆಚ್ಚು: ಎಚ್ಚರಾ ಎಚ್ಚಾರಾ!

ಬೆಂಗಳೂರು:ರಾಜ್ಯದಲ್ಲಿ ಪ್ರತಿ ವರ್ಷ 900ಕ್ಕೂ ಹೆಚ್ಚು ಮಕ್ಕಳಲ್ಲಿ ಕ್ಯಾನ್ಸರ್‌ ಪತ್ತೆಯಾಗುತ್ತಿದೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ತಿಳಿಸಿದೆ.ಕರ್ನಾಟಕದಲ್ಲಿ ವಾರ್ಷಿಕ ಸುಮಾರು 975 ಮಕ್ಕಳಲ್ಲಿ ಕ್ಯಾನ್ಸರ್‌ ಪತ್ತೆಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ ಸರಾಸರಿ 280 ರಿಂದ 300 ಮಕ್ಕಳು ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ. ಎಲ್ಲಾ ವಯಸ್ಸಿನ ಪುರುಷರ ಪ್ರಕರಣಗಳನ್ನು ತೆಗೆದುಕೊಂಡರೆ ಶೇ. 2.7ರಷ್ಟು ಬಾಲಕರು ಮತ್ತು ಮಹಿಳೆಯರಲ್ಲಿ ಕಂಡು ಬರುವ ಪ್ರಕರಣಗಳಲ್ಲಿ ಶೇ.1.3 ರಷ್ಟು ಬಾಲಕಿಯರಲ್ಲಿ ಕ್ಯಾನ್ಸರ್‌ ಕಂಡು ಬರುತ್ತಿದೆ ಎಂದು ಹೇಳಿದೆ.

ಬಾಲಕರಲ್ಲಿ ಲಿಂಫಾಯಿಡ್‌ ಲ್ಯುಕೇಮಿಯಾ (ಶೇ.20.6), ಮೈಲೋಯ್ಡ್‌ ಲ್ಯುಕೇಮಿಯಾ (ಶೇ.14.4), ಮೆದುಳು ಮತ್ತು ನರಮಂಡಲ (ಶೇ.13.8), ಎನ್‌ಎಚ್‌ಎಲ್‌, ಹಾಡಿನ್ಸ್‌ ಕಾಯಿಲೆ (ಶೇ.7.5 ಮತ್ತು 6.9) ಪ್ರಮುಖವಾಗಿ ಕಂಡು ಬರುತ್ತಿದೆ. ಮಹಿಳೆಯರಲ್ಲಿ ಲಿಂಫಾಯಿಡ್‌ ಲ್ಯುಕೇಮಿಯಾ (25.5), ಮೆದುಳು ಮತ್ತು ನರಮಂಡಲದ ವ್ಯವಸ್ಥೆ (12.8), ಮೈಲೋಯ್ಡ್‌ ಲ್ಯುಕೇಮಿಯಾ (12.8), ಮೂಳೆ ಕ್ಯಾನ್ಸರ್‌ (117), ಅಂಡಾಶಯ (5.3), ಹಾಡ್‌ಲ್ಗಿನ್ಸ್‌ ಕಾಯಿಲೆ (4.3) ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಉಲ್ಲೇಖಿಸಲಾಗಿದೆ.

ಕಳೆದ ವರ್ಷ 86 ಸಾವಿರ ಪ್ರಕರಣ:

ರಾಜ್ಯದಲ್ಲಿ ಕಳೆದ ವರ್ಷ ಅಂದಾಜು 86,563 ಹೊಸ ಪ್ರಕರಣಗಳು ದಾಖಲಾಗಿವೆ. 2.3 ಲಕ್ಷ ಕ್ಯಾನ್ಸರ್‌ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು ನಗರವೊಂದಲ್ಲೆ ವಾರ್ಷಿಕವಾಗಿ 14,630 ಪ್ರಕರಣಗಳು ದಾಖಲಾಗುತ್ತಿವೆ. ಅವುಗಳಲ್ಲಿ6650 ಪುರುಷರು ಮತ್ತು 7980 ಮಹಿಳೆಯರಲ್ಲಿನ ಕ್ಯಾನ್ಸರ್‌ ಪತ್ತೆಯಾಗಿದೆ.

ಪುರುಷರಲ್ಲಿನ ವಿವಿಧ ಕ್ಯಾನ್ಸರ್‌ಗಳ ಪೈಕಿ ಶ್ವಾಸಕೋಶದ ಕ್ಯಾನ್ಸರ್‌ ಶೇ.9.7ರಷ್ಟು ಪಾಲು ಹೊಂದಿದೆ. ಪ್ರಾಸ್ಟೇಟ್‌ (ಶೇ.6.9) ಹೊಟ್ಟೆ ಕ್ಯಾನ್ಸರ್‌ (ಶೇ.6.5) ಮತ್ತು ಬಾಯಿ ಕ್ಯಾನ್ಸರ್‌ (ಶೇ.6.4), ಮಹಿಳೆಯರಿಗೆ ಕಾಡುವ ಕ್ಯಾನ್ಸರ್‌ಗಳ ಪೈಕಿ ಸ್ತನದ ಕ್ಯಾನ್ಸರ್‌ ಪಾಲು ಶೇ.31.5 ರಷ್ಟಿದೆ. ಗರ್ಭಗೊರಳಿನ ಕ್ಯಾನ್ಸರ್‌ (ಶೇ.9.1), ಅಂಡಾಶಯದ ಕ್ಯಾನ್ಸರ್‌ (ಶೇ.6.4), ಬಾಯಿ ಕ್ಯಾನ್ಸರ್‌ (ಶೇ.4.3), ಕಾರ್ಪಸ್‌ ಯುಟೆರಿ ಕ್ಯಾನ್ಸರ್‌ (ಶೇ.4.2ರಷ್ಟು) ಕಂಡು ಬಂದಿದೆ.

ಮುನ್ನೆಚ್ಚರಿಕೆ ಅಗತ್ಯ

ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ. ಅತಿಯಾದ ತಂಬಾಕು ಸೇವನೆ, ಮದ್ಯಪಾನ, ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್‌, ಬಾಯಿ ಮತ್ತು ಗಂಟಲು ಕ್ಯಾನ್ಸರ್‌, ಅನ್ನನಾಳ, ಹೊಟ್ಟೆ ಮತ್ತು ಕರುಳು ಕ್ಯಾನ್ಸರ್‌, ಮೂತ್ರಕೋಶದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಹೀಗಾಗಿ, ಇಂತಹ ದುಶ್ಚಟಗಳಿಂದ ದೂರವಿರುವುದು ಸೂಕ್ತ.

Related Posts

ಪುರುಷರೇ ನಿಮ್ಮ ದೇಹದಲ್ಲಿ ಈ 6 ಲಕ್ಷಣಗಳು ಕಾಣಿಸಿಕೊಂಡರೆ ಕ್ಯಾನ್ಸರ್ ಇರಬಹುದು ಎಚ್ಚರಾ! 

 ವಿಶ್ವದಾದ್ಯಂತ ಭಯಾನಕ ಕಾಯಿಲೆಗಳಲ್ಲಿ ಕ್ಯಾನ್ಸರ್ ಪ್ರಮುಖ. ಕ್ಯಾನ್ಸರ್ ಅನ್ನು ಮಾರಣಾಂತಿಕ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಆದರೆ ಇದು ಆರಂಭಿಕ ಹಂತಗಳಲ್ಲಿ ಪತ್ತೆಯಾದರೆ ಗುಣಪಡಿಸುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ, ವಿವಿಧ ರೀತಿಯ ಕ್ಯಾನ್ಸರ್ ರೋಗಲಕ್ಷಣಗಳ ಬಗ್ಗೆ ತಿಳುವಳಿಕೆಯನ್ನು ಹೊಂದಿರುವುದು ಬಹಳ ಮುಖ್ಯ.  ಕೆಲವು…

ರಾಜ್ಯದಲ್ಲಿ 250ಕ್ಕೂ ಹೆಚ್ಚು ಔಷಧಿಗಳು ಔಟ್ ಆಫ್ ಸ್ಟಾಕ್; ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರೆಗಳ ಕೊರತೆ!

ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದ್ರೂ ಜೀವರಕ್ಷಕ ಔಷಧಗಳು ಸ್ಟಾಕ್ ಇಲ್ಲ, ಸುಮಾರು 250ಕ್ಕೂ ಹೆಚ್ಚು ಔಷಧಿಗಳು ಔಟ್ ಆಫ್ ಸ್ಟಾಕ್ ಆಗಿದ್ದು, ಆಸ್ಪತ್ರೆಗಳಲ್ಲಿ ಔಷಧಿಗಳು ಲಭ್ಯವಾಗುತ್ತಿಲ್ಲ. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ 250 ಔಷಧಗಳ ದಾಸ್ತಾನು ಶೂನ್ಯವಿದೆ. ವಿವಿಧ ಟೆಂಡರ್…

Leave a Reply

Your email address will not be published. Required fields are marked *