ಚೀನಾ: ಕಪ್ಪು ಬಣ್ಣದ ಮಗು ಹುಟ್ಟಿದ್ದಕ್ಕೆ ಅನುಮಾನಗೊಂಡ ವ್ಯಕ್ತಿಯೊಬ್ಬ ಹೆಂಡತಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾನೆ. ಚೀನಾದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ನಾನು ಮತ್ತು ಹೆಂಡತಿ ಇಬ್ಬರೂ ಬಿಳಿ ಬಣ್ಣದವರಾಗಿದ್ದೇವೆ. ಆದರೆ ನಮಗೆ ಅದು ಹೇಗೆ ಕಪ್ಪು ಬಣ್ಣದ ಮಗು ಹುಟ್ಟಲು ಸಾಧ್ಯವೆಂದು ಪ್ರಶ್ನಿಸಿರುವ ಗಂಡ DNA ಪರೀಕ್ಷೆಗೆ ಒತ್ತಾಯಿಸಿದ್ದಾನೆ.
ತನ್ನ ಹೆಂಡತಿಯ ಚಾರಿತ್ರ್ಯಾ ಸರಿಯಿಲ್ಲವೆಂದು ಆರೋಪಿಸಿರುವ ಆತ ತನಗೆ ವಿಚ್ಛೇದನ ಬೇಕೆಂದು ಅರ್ಜಿ ಸಲ್ಲಿಸಿದ್ದಾನೆ. ವರದಿಯ ಪ್ರಕಾರ, ಸುಮಾರು 1 ತಿಂಗಳ ಹಿಂದೆ 30 ವರ್ಷದ ಮಹಿಳೆ ಸಿ-ಸೆಕ್ಷನ್ ಮೂಲಕ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಅವರಿಗೆ ಕಪ್ಪು ಬಣ್ಣದ ಮಗು ಹುಟ್ಟಿತ್ತು. ಆಕೆ ಮತ್ತು ಆಕೆಯ ಗಂಡ ಬಿಳಿ ಬಣ್ಣದವರಾಗಿದ್ದು, ಕಪ್ಪು ಮಗು ಹೇಗೆ ಹುಟ್ಟಿತು ಅಂತಾ ಆಕೆಯ ಪತಿ ಆಘಾತಕ್ಕೊಳಗಾಗಿದ್ದಾನೆ. ಇದೇ ಕಾರಣಕ್ಕೆ ಇದೀಗ ಆತ ವಿಚ್ಛೇದನ ಕೋರಿದ್ದಾನೆ.
ಈ ಘಟನೆಯನ್ನು ನೊಂದ ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಸಂಕಷ್ಟದ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ಸಲಹೆ ಕೇಳಿದ್ದಾಳೆ. ತನ್ನ ಪತಿ ಮೊದಲು ಮಗುವನ್ನು ನೋಡಲು ಬಂದಾಗ ಆಶ್ಚರ್ಯ ವ್ಯಕ್ತಪಡಿಸಿದ್ದ. ಕಪ್ಪು ಬಣ್ಣದ ಮಗುವಿನ ಕಾರಣ ಅದನ್ನು ಎತ್ತಿಕೊಳ್ಳಲು ನಿರಾಕರಿಸಿದ. ನಂತರ DNA ಪರೀಕ್ಷೆ ನಡೆಸಿ ಈ ಮಗು ನನಗೆ ಹುಟ್ಟಿದ್ದು ಅಂತಾ ದೃಢಪಡಿಸುವಂತೆ ಒತ್ತಾಯಿಸಿದ. ಅದು ನಮ್ಮಿಬ್ಬರದ್ದೇ ಮಗು ಅಂತಾ ಎಷ್ಟೇ ಹೇಳಿದರೂ ಆತ ಕೇಳಲಿಲ್ಲವೆಂದು ಮಹಿಳೆ ಬೇಸರ ವ್ಯಕ್ತಪಡಿಸಿದ್ದಾಳೆ.
ಮಗುವಿನ ಕಪ್ಪು ಮೈಬಣ್ಣದಿಂದ ನನಗೂ ಸಹ ಆಶ್ಚರ್ಯವಾಗಿದೆ ಅಂತಾ ಆಕೆ ಹೇಳಿಕೊಂಡಿದ್ದಾಳೆ. ಆದರೆ ಬಣ್ಣದ ಕಾರಣಕ್ಕೆ ನಾನು ಹೆತ್ತ ಮಗುವನ್ನು ಕೈಬಿಡುವುದಿಲ್ಲವೆಂದು ಹೇಳಿದ್ದಾನೆ. ಆಕೆಯ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಈ ವಿಷಯದ ಬಗ್ಗೆ ಚರ್ಚಿಸಿ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಅನೇಕರು ಆಕೆಯ ಪತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇನ್ನೂ ಕೆಲವರು ಬಿಳಿ ಚರ್ಮದ ದಂಪತಿ ಕಪ್ಪು ಚರ್ಮದ ಮಗು ಹೊಂದುವುದು ಕಾಮನ್ ಅಂತಾ ಹೇಳಿದ್ದಾರೆ. ಏನೇ ಆಗಲಿ ಮೊದಲು DNA ಪರೀಕ್ಷೆಯಾಗಲಿ, ಇಲ್ಲವಾದರೆ ನನಗೆ ವಿಚ್ಛೇದ ನೀಡುವಂತೆ ಮಹಿಳೆಯ ಪತಿ ಪಟ್ಟು ಹಿಡಿದಿದ್ದಾನಂತೆ.