ಬೆಂಗಳೂರು: ನೀರಾವರಿ ಕಾಮಗಾರಿಗೆಂದು ಸ್ಥಾಪಿಸಲಾಗಿರುವ ‘ಕರ್ನಾಟಕ ನೀರವಾರಿ ನಿಗಮ ಲಿಮಿಟೆಡ್’ ನಲ್ಲಿನ ಅನುದಾನವನ್ನು ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿ, ಶಾಸಕರು ಪ್ರಾಬಲ್ಯ ಬಳಸಿಕೊಂಡು ನಿರಾವರಿಯೇತರ ಕಾಮಗಾರಿಗೆ ಬಳಸಿರುವ ಆರೋಪ ಕೇಳಿ ພ໐໖໖.
ಶಿವಮೊಗ್ಗ ಜಿಲ್ಲೆಯ ಶಾಸಕರು ಮತ್ತು ಸಂಸದರ ಮನವಿ ಆಧರಿಸಿ 2020ರಿಂದ 2023ರ ಅವಧಿಯಲ್ಲಿ ಸಮುದಾಯ ಭವನಗಳು, ಮಠಗಳು ಮತ್ತು ಬೆರಳೆಣಿಕೆಯಷ್ಟು ಶಾದಿ ಮಹಲ್ಗಳನ್ನು ನಿರ್ಮಿಸಲು ‘ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್’ ನ ನೂರಾರು ಕೋಟಿ ರೂ. ಬಳಕೆ ಮಾಡಲಾಗಿದೆ.
ಕಳೆದ ಒಂದು ವರ್ಷದಲ್ಲಿ ಕರ್ನಾಟಕ ನೀರಾವರಿ ನಿಗಮ ಅಥವಾ ಕೆಎನ್ಎನ್ಎಲ್ ನಷ್ಟದಲ್ಲಿದ್ದು, ನಿಗಮದಲ್ಲಿನ ಹಣಕಾಸಿನ ಕೊರತೆಯು ಕಾಲುವೆಗಳ ದುರಸ್ತಿಯಂತಹ ನಿರ್ಣಾಯಕ ಕೆಲಸಗಳ ಮೇಲೆ ಪರಿಣಾಮ ಬೀರಿದೆ.
ನಾವು 6,000 ಕೋಟಿ ರೂ.ನಷ್ಟು ಪಾವತಿ ಬಾಕಿ ಹೊಂದಿದ್ದೇವೆ, 2 ಕೋಟಿ ರೂ.ಗಳ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಹಲವು ತಿಂಗಳು ಕಾದ ಬಳಿಕ 8 ಲಕ್ಷ ರೂ. ನೀಡಲಾಗಿದೆ. ಶಿವಮೊಗ್ಗ ಒಂದರಲ್ಲೇ ಬಾಕಿ ಉಳಿದಿರುವ ಹಲವು ಯೋಜನೆಗಳಿಗೆ ಸುಮಾರು 2 ಸಾವಿರ ಕೋಟಿ ರೂ.ಗಳ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.