ಪಿಂಚಣಿದಾರರಿಗೆ ಪಿಂಚಣಿ ಹೆಚ್ಚಳ ಘೋಷಿಸಿದ ಸರ್ಕಾರ !ಯಾರಿಗೆ ಎಷ್ಟು ಹೆಚ್ಚಳ ಇಲ್ಲಿದೆ ಸಂಪೂರ್ಣ ವಿವರ

ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿಯನ್ನು ಘೋಷಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಪಿಂಚಣಿದಾರರು ಇನ್ನು ಮುಂದೆ ಹೆಚ್ಚು ಪಿಂಚಣಿ ಪಡೆಯಲಿದ್ದಾರೆ. ಕೇಂದ್ರ ಸರ್ಕಾರ ಈ ಪಿಂಚಣಿದಾರರಿಗೆ ಅನುಕಂಪ ಭತ್ಯೆ ಹೆಸರಿನಲ್ಲಿ ಹೆಚ್ಚುವರಿ ಪಿಂಚಣಿ ನೀಡಲಿದೆ ಎಂದು ಈ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

80 ರಿಂದ 85 ವರ್ಷ ವಯಸ್ಸಿನ ಪಿಂಚಣಿದಾರರು ಮೂಲ ಪಿಂಚಣಿಯಲ್ಲಿ 20% ಹೆಚ್ಚಳವನ್ನು ಪಡೆಯುತ್ತಾರೆ. 85 ರಿಂದ 90 ವರ್ಷ ವಯಸ್ಸಿನ ಪಿಂಚಣಿದಾರರು ಮೂಲ ಪಿಂಚಣಿಯಲ್ಲಿ 30% ಹೆಚ್ಚಳವನ್ನು ಪಡೆಯಲಿದ್ದಾರೆ.  90 ರಿಂದ 95 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ ಮೂಲ ಪಿಂಚಣಿಯಲ್ಲಿ 40% ಹೆಚ್ಚಳವನ್ನು ನೀಡಲಾಗುವುದು. 95ರಿಂದ 100 ವರ್ಷ ವಯಸ್ಸಿನವರಿಗೆ 50% ಹೆಚ್ಚಳ ಮಾಡಲಾಗುವುದು. 

100 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪಿಂಚಣಿದಾರರು ಮೂಲ ಪಿಂಚಣಿಯ 100 ಪ್ರತಿಶತಕ್ಕೆ ಅರ್ಹರಾಗಿರುತ್ತಾರೆ.    ಪಿಂಚಣಿದಾರರು ನಿಗದಿತ ವಯಸ್ಸನ್ನು ತಲುಪಿದ ಮೊದಲ ದಿನದಿಂದಲೇ ಹೆಚ್ಚುವರಿ ಪಿಂಚಣಿ ಅಥವಾ ಅನುಕಂಪ ಭತ್ಯೆಗೆ ಅರ್ಹರಾಗುತ್ತಾರೆ. ಈ ಬಗ್ಗೆ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪಿಂಚಣಿ ಮತ್ತು ಪಿಂಚಣಿ ವಿತರಣೆಯಲ್ಲಿ ತೊಡಗಿರುವ ಎಲ್ಲಾ ಇಲಾಖೆಗಳು ಮತ್ತು ಬ್ಯಾಂಕ್‌ಗಳು ಹೊಸ ಪಿಂಚಣಿ ಮಾರ್ಗಸೂಚಿಗಳ ಬಗ್ಗೆ ಮಾಹಿತಿಯನ್ನು ಪ್ರಕಟಿಸಲು ಸೂಚಿಸಲಾಗಿದೆ. 

Related Posts

ಮೋದಿ ಸರ್ಕಾರದ ಜೊತೆ ಸೇರಿ ನಾಡಿಗೆ ಅನ್ಯಾಯ ಮಾಡಿದ್ದ ಯಡಿಯೂರಪ್ಪ: ಸಿಎಂ ಸಿದ್ದರಾಮಯ್ಯ ಆರೋಪ

ಬೆಂಗಳೂರು :2022-23ರಲ್ಲಿ ಕೇಂದ್ರ ಸರ್ಕಾರ ರೂ.450 ಕೋಟಿ ಅನುದಾನವನ್ನು ನಿಗದಿ ಮಾಡಿತ್ತು, ಆದರೆ ಕೊಟ್ಟಿದ್ದು ರೂ.50 ಕೋಟಿ ಮಾತ್ರ. ನಂತರ ಪ್ರಸಕ್ತ ಸಾಲಿನಲ್ಲಿ ರೂ.1350 ಕೋಟಿ ನಿಗದಿ ಮಾಡಿ, ಈ ವರೆಗೆ ಕೇವಲ ರೂ.450 ಕೋಟಿ ಬಿಡುಗಡೆ ಮಾಡಿದೆ.   ಅಂದು ಮೋದಿ…

ಅಕ್ಕಿ ವಿತರಣೆಯಲ್ಲಿ ದ್ವೇಷದ ರಾಜಕಾರಣ ಮಾಡುವುದು ಬೇಡ: ಕೇಂದ್ರ ಗೃಹ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಮನವಿ

ನವದೆಹಲಿ: ಅಕ್ಕಿ ವಿತರಣೆ ಬಗ್ಗೆ ರಾಜಕೀಯ ಅಥವಾ ದ್ವೇಷದ ರಾಜಕಾರಣ ಮಾಡುವುದು ಬೇಡ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನವದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ ರಾತ್ರಿ…

Leave a Reply

Your email address will not be published. Required fields are marked *