ಗೂಗಲ್​​​ ಮ್ಯಾಪ್​​ನಲ್ಲಿ ಕೇಳುವ ಹೆಣ್ಣು ದನಿ ಯಾರದ್ದು ಎಂಬುದು ಗೊತ್ತಾ?

ಗೂಗಲ್ ಮ್ಯಾಪ್​​ನಲ್ಲಿ ನಿಮಗೆ ದಾರಿ ಹೇಳಿಕೊಡುವ ಹೆಣ್ಣು ದನಿಯೊಂದಿದೆ. ಈ ದನಿ ಯಾರದ್ದು ಅಂತ ಗೊತ್ತಾ? ಆಕೆಯ ಹೆಸರು ಕರೆನ್ ಜಾಕೋಬ್ಸೆನ್. ಈಕೆ ಆಸ್ಟ್ರೇಲಿಯನ್ ವಾಯ್ಸ್‌ಓವರ್ ಕಲಾವಿದೆ. ಆಕೆಯ ಧ್ವನಿಯನ್ನು Google ಮ್ಯಾಪ್ ಮತ್ತು ಇತರ GPS ಅಪ್ಲಿಕೇಶನ್‌ಗಳಲ್ಲಿ ಬಳಸಲಾಗಿದ್ದು, ವಾಹನ ಚಾಲಕರಿಗೆ ಪರಿಚಯವಿಲ್ಲದ ಮಾರ್ಗಗಳನ್ನು ಹುಡುಕಲು ಈ  ದನಿ ಸಹಾಯ ಮಾಡುತ್ತದೆ. ಇಲ್ಲಿಯವರೆಗೆ ಒಂದು ಬಿಲಿಯನ್‌ಗಿಂತಲೂ ಹೆಚ್ಚು Google ಡಿವೈಸ್  ಗೂಗಲ್ ಮ್ಯಾಪ್ ವೈಶಿಷ್ಟ್ಯವನ್ನು ಹೊಂದಿವೆ. ಮರು ಪ್ರಶ್ನೆ ಮಾಡದೆಯೇ ಪುರುಷರೆಲ್ಲರೂ ನಾನು ಹೇಳಿದಂತೆ ಕೇಳುತ್ತಾರೆ ಎಂದು ಜಾಕೋಬ್ಸೆನ್ ತಮಾಷೆಯಾಗಿ ಹೇಳುತ್ತಾರೆ. ಜಾಕೋಬ್ಸೆನ್ ಲಂಡನ್ ಮೂಲದ ಸಾಕ್ಷ್ಯಚಿತ್ರಗಳ ಕಂಪನಿಯಾದ ಗ್ರೇಟ್ ಬಿಗ್ ಸ್ಟೋರಿಗೆ ಜತೆ ಮಾತನಾಡಿದ್ದು ಜಗತ್ತಿನಲ್ಲಿ ಪುರುಷರು ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ಮಾಡಿದ ಏಕೈಕ ಮಹಿಳೆ ನಾನು ಎಂದು ಹೇಳಿದ್ದಾರೆ.

ನಡೆದು ಬಂದ ದಾರಿ

2000 ರ ದಶಕದ ಆರಂಭದಲ್ಲಿ GPS ತಯಾರಕ ಗಾರ್ಮಿನ್ ಅವರು ಗೂಗಲ್ ಮ್ಯಾಪ್ ವೈಶಿಷ್ಟ್ಯಕ್ಕಾಗಿ ಧ್ವನಿ ಕಲಾವಿದರನ್ನು ಸಂಪರ್ಕಿಸಿದರು. ಆಸ್ಟ್ರೇಲಿಯನ್ ಉಚ್ಚಾರಣೆ ಕೇಳಲು ತುಂಬಾ ಆಹ್ಲಾದಕರವಾಗಿರುತ್ತದೆ ಎಂಬ ಕಾರಣಕ್ಕೆ ಅವರು ನನ್ನ ದನಿ ಆಯ್ಕೆ ಮಾಡಿದರು. ನನ್ನ ಧ್ವನಿಯು ಒಂದು ಶತಕೋಟಿ GPS ಮತ್ತು ಸ್ಮಾರ್ಟ್‌ಫೋನ್ ಸಾಧನಗಳಲ್ಲಿ ಪ್ರಪಂಚದಾದ್ಯಂತ ಜನರಿಗೆ ನಿರ್ದೇಶನವನ್ನು ನೀಡುತ್ತಿದೆ. ನೀವು ನಿಮ್ಮ ಗಮ್ಯಸ್ಥಾನವನ್ನು ತಲುಪಿದ್ದೀರಿ ಎಂದು ನಾನು ಹೇಳುತ್ತೇನೆ ಎಂದು ಜಾಕೋಬ್ಸೆನ್ ನಗುತ್ತಾ ಹೇಳುತ್ತಾರೆ.

ಆಕೆಯ ಹಿನ್ನೆಲೆಯ ಬಗ್ಗೆ ಹೇಳುವುದಾದರೆ ಜಾಕೋಬ್‌ಸೆನ್ ಮೂಲತಃ ಮ್ಯಾಕೆಯಿಂದ ಬಂದವರು. ಇದು ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ಬಳಿಯ ಉತ್ತರ ಕ್ವೀನ್ಸ್‌ಲ್ಯಾಂಡ್‌ನ ಪಟ್ಟಣ. ನಾನು ವೃತ್ತಿಪರ ಗಾಯಕಿಯಾಗಲು ಅಮೆರಿಕಾಕ್ಕೆ ಹೋಗಲು ಬಯಸಿದ್ದೆ. ಆದರೆ ನಾನು ನನ್ನ ಕನಸನ್ನು ಬೆಂಬೆತ್ತಿ ನ್ಯೂಯಾರ್ಕ್​​​ಗೆ ಹೋಗಲಿಲ್ಲ. ನಾನು 2002 ರಲ್ಲಿ ಅಲ್ಲಿಗೆ ತೆರಳಿದ ಸ್ವಲ್ಪ ಸಮಯದ ನಂತರ, ವಾಯ್ಸ್‌ಓವರ್ ಕಲಾವಿದರಿಗಾಗಿ ಆಡಿಷನ್ ಇತ್ತು.  ಕ್ಲೈಂಟ್‌ಗಳು ಯುನೈಟೆಡ್ ಸ್ಟೇಟ್ಸ್‌ನ ಈಶಾನ್ಯದಲ್ಲಿ ವಾಸಿಸುವ ಸ್ಥಳೀಯ ಆಸ್ಟ್ರೇಲಿಯನ್, ಮಹಿಳೆ ವಾಯ್ಸ್‌ಓವರ್ ಕಲಾವಿದರನ್ನು ಹುಡುಕುತ್ತಿದ್ದರು. ಆ ಎಲ್ಲ ಅರ್ಹತೆಗಳು ನನಗಿತ್ತು. ನಾನು ಆಡಿಷನ್‌ಗೆ ಹೋದೆ, ನನಗೆ ಕೆಲಸವೂ ಸಿಕ್ಕಿತು. ನಾನು ಆಸ್ಟ್ರೇಲಿಯನ್ ಆಗಿದ್ದು ಇಲ್ಲಿ ಪ್ಲಸ್ ಪಾಯಿಂಟ್ ಆಗಿತ್ತು. ಆ ಸಮಯದಲ್ಲಿ, ಆಸ್ಟ್ರೇಲಿಯಾದ ಧ್ವನಿಯು ಹೆಚ್ಚಿನ ಆದ್ಯತೆಯಾಗಿದೆ ಎಂದು ನನಗೆ ಹೇಳಲಾಯಿತು. ಏಕೆಂದರೆ ಆಸ್ಟ್ರೇಲಿಯನ್ ಉಚ್ಚಾರಣೆಯು ಕೇಳಲು ಅತ್ಯಂತ ಆಹ್ಲಾದಕರವಾದ ಇಂಗ್ಲಿಷ್ ಮಾತನಾಡುವ ಉಚ್ಚಾರಣೆ ಎಂದು ಪರಿಗಣಿಸಲಾಗಿದೆ ಅಂತಾರೆ ಜಾಕೋಬ್ಸೆನ್.

Related Posts

ಹಾಸನಕ್ಕೆ ಸಮಾವೇಶಕ್ಕೆ ಹೋಗುವಾಗ ಆಹಾರ ಸಚಿವ ಕೆ.ಎಚ್ ಕಾರು ಅಪಘಾತ: ಅಪಾಯದಿಂದ ಪಾರು

ಹಾಸನ : ಹಾಸನದಲ್ಲಿ ಇಂದು ನಡೆಯುತ್ತಿರುವ ಕಾಂಗ್ರೆಸ್ ನ ಜನ ಕಲ್ಯಾಣ ಸಮಾವೇಶಕ್ಕೆ ಹೋಗುವಾಗ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರ ಕಾರು ಅಪಘಾತವಾಗಿರುವ ಘಟನೆ ನಡೆದಿದೆ. ಹಾಸನದ ಮಾರ್ಗದಲ್ಲಿ ಸಚಿವ ಮುನಿಯಪ್ಪ ಕಾರು ಅಪಘಾತಕ್ಕೀಡಾಗಿದ್ದು, ಬಳಿಕ ಬೇರೆ ವ್ಯವಸ್ಥೆ ಮೂಲಕ…

ಸಿಗರೇಟ್, ಪೆಪ್ಸಿ, ಕೋಕಾಕೋಲಾ ಬೆಲೆ ಶೇ. 35ಕ್ಕೆ ಏರಿಕೆ ಸಾಧ್ಯತೆ

ನವದೆಹಲಿ: ಜಿಎಸ್​ಟಿ ದರ ಪರಿಷ್ಕರಣೆ ನಿರ್ಧರಿಸಲು ರಚಿಸಲಾಗಿರುವ ಸಚಿವರ ಮಂಡಳಿಯು (ಜಿಒಎಂ) ತಂಬಾಕು ಇತ್ಯಾದಿ ದುಷ್ಕರ್ಮ ಸರಕುಗಳಿಗೆ ಸಿನ್ ಟ್ಯಾಕ್ಸ್ ಅನ್ನು ಶೇ. 28ರಿಂದ ಶೇ. 35ಕ್ಕೆ ಹೆಚ್ಚಿಸಲು ನಿರ್ಧರಿಸಿದೆ. ಇದರೊಂದಿಗೆ ದುಷ್ಕರ್ಮ ಸರಕುಗಳೆಂದು ಪರಿಗಣಿಸಲಾದ ಸಿಗರೇಟು ಇತ್ಯಾದಿ ತಂಬಾಕು ಉತ್ಪನ್ನಗಳು, ಪೆಪ್ಸಿ,…

Leave a Reply

Your email address will not be published. Required fields are marked *