ಸಿದ್ದು ಸಂಪುಟಕ್ಕೆ ಹೊಸದಾಗಿ ಸೇರಬಹುದಾದ ಶಾಸಕರ ಪಟ್ಟಿ ಇಲ್ಲಿದೆ!

ಬೆಂಗಳೂರು: ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮುಗಿಯುತ್ತಲೇ ಸಂಪುಟಕ್ಕೆ ಸರ್ಜರಿ ಮಾಡುವ ವಿಚಾರ ಮುನ್ನಲೆಗೆ ಬಂದಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ನಡೆಯಲಿರುವ ಎಐಸಿಸಿ ಕಾರ್ಯಕಾರಣಿಯಲ್ಲಿ ಪಾಲ್ಗೊಳ್ಳಲು ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ. ಅಲ್ಲಿಯೇ ಹೈಕಮಾಂಡ್ ಬಳಿ ಸಂಪುಟ ಪುನಾರಾಚನೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹೈಕಮಾಂಡ್ ಒಪ್ಪಿದರೆ, ಸಂಪುಟದಿಂದ ಆರೇಳು ಮಂದಿಗೆ ಕೊಕ್ ಕೊಟ್ಟು, ಹಲವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಗಳು ದಟ್ಟವಾಗಿವೆ. ಸಂಪುಟಕ್ಕೆ ಸೇರಬಹುದಾದವರ ಪಟ್ಟಿಯಲ್ಲಿ ಬೆಂಗಳೂರಿನ ವಿಜಯನಗರದ ಶಾಸಕ ಎಂ. ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಬಿ. ನಾಗೇಂದ್ರ, ಮೈಸೂರಿನ ತನ್ವೀರ್ ಸೇಠ್, ಹಾಲಿ ಆಹಾರ ಸಚಿವ ಕೆಎಚ್ ಮುನಿಯಪ್ಪನವರ ಪುತ್ರಿ ರೂಪಾ ಶಶಿಧರ್ (ಮುನಿಯಪ್ಪನವರ ಸ್ಥಾನಕ್ಕೆ), ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ, ಮಾಗಡಿ ಶಾಸಕ ಸಿಎಚ್ ಬಾಲಕೃ,ಷ್ಣ, ಬೆಳಗಾವಿ ಭಾಗದ ಪ್ರಮುಖ ನಾಯಕ ಲಕ್ಷ್ಮಣ ಸವದಿ ಮುಂತಾದವರ ಹೆಸರುಗಳು ಕೇಳಿಬರುತ್ತಿವೆ.

ಎಂ. ಕೃಷ್ಣಪ್ಪ

ಬೆಂಗಳೂರಿನ ವಿಜಯನಗರ ಕ್ಷೇತ್ರದ ಶಾಸಕರಾಗಿರುವ ಇವರು ಕಾಂಗ್ರೆಸ್ಸಿನ ಹಿರಿಯ ನಾಯಕರು ಹಾಗೂ ಪಕ್ಷನಿಷ್ಠೆಗೆ ಹೆಸರಾದವರು. ಇವರಿಗೆ ಸಿದ್ದರಾಮಯ್ಯ 2.0 ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಈ ಹಿಂದಿನ ಸಿದ್ದರಾಮಯ್ಯನವರ 1.0 ಸರ್ಕಾರದ ಸಂಪುಟದಲ್ಲಿ ಅವರು ವಸತಿ ಸಚಿವರಾಗಿದ್ದರು. ಕಳೆದ ವರ್ಷ ಸಿದ್ದರಾಮಯ್ಯನವರ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಅವರು ಸಚಿವ ಸ್ಥಾನಕ್ಕೆ ತೀವ್ರ ಪ್ರಯತ್ನ ನಡೆಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ, ಅವರೀಗ ಸಚಿವ ಸ್ಥಾನ ಸಿಕ್ಕುವ ಸಾಧ್ಯತೆಗಳು ದಟ್ಟವಾಗಿವೆ. ಅಲ್ಲದೆ, ಅವರಿಗೆ ಒಕ್ಕಲಿಗ ಕೋಟಾದಡಿ ಸೀಟು ಸಿಗುವ ಸಾಧ್ಯತೆಗಳಿವೆ.

ಬಿ.ಕೆ. ಹರಿಪ್ರಸಾದ್

ಸಿದ್ದರಾಮಯ್ಯನವರ 2.0 ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲವೆಂದು ಬೇಸರಗೊಂಡಿರುವ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಅವರಿಗೆ ಈ ಬಾರಿ ಸಚಿವ ಸ್ಥಾನ ಒಲಿಯುವ ಸಾಧ್ಯತೆಗಳಿವೆ. ಅದಕ್ಕೆ ಕಾರಣ ಎರಡು. ಮೊದಲನೆಯದಾಗಿ ಅವರು ಹೈಕಮಾಂಡ್ ಗೆ ಆಪ್ತರು. ಎರಡನೆಯದಾಗಿ ಅವರ ಪಕ್ಷ ನಿಷ್ಠೆ. ಹಾಗಾಗಿ, ಅವರಿಗೆ ಈ ಬಾರಿ ಸಂಪುಟ ಸರ್ಜರಿ ವೇಳೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ.

ಸಿ ಪುಟ್ಟರಂಗ ಶೆಟ್ಟಿ

ಚಾಮರಾಜನಗರ ಕ್ಷೇತ್ರದ ಶಾಸಕ ಹಾಗೂ ಸಿಎಂ ಆಪ್ತರು. ಕಾಂಗ್ರೆಸ್ಸಿನ ಹಿರಿಯ ನಾಯಕರಾಗಿರುವರು ಪಕ್ಷನಿಷ್ಠೆಗೂ ಹೆಸರುವಾಸಿ. ಅಷ್ಟೇ ಅಲ್ಲದೆ, ಈ ಹಿಂದೆ ಆಡಳಿತದಲ್ಲಿ ಅನುಭವ ಹೊಂದಿರುವಂಥವರು. ಹಾಗಾಗಿ, ಇವರಿಗೆ ಈ ಬಾರಿ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆಯಿದೆ.

ಬಿ. ನಾಗೇಂದ್ರ

ವಾಲ್ಮೀಕಿ ಹಗರಣದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತು ಜೈಲು ಪಾಲಾಗಿದ್ದರಿಂದ ಸಚಿವ ಸ್ಥಾನ ತ್ಯಾಗ ಮಾಡಿದ್ದ ಬಿ. ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ. ಅವರು ಆರೋಪ ಮುಕ್ತರಾದರೆ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುವ ಬಗ್ಗೆ ಮುಖ್ಯಮಂತ್ರಿಯವರೇ ಈ ಹಿಂದೆ ಹೇಳಿದ್ದರಿಂದ ನಾಗೇಂದ್ರ ಅವರಿಗೆ ಸಂಪುಟದಲ್ಲಿ ಮತ್ತೆ ಸ್ಥಾನ ಸಿಗುವ ಸಾಧ್ಯತೆಗಳಿವೆ.

ತನ್ವೀರ್ ಸೇಠ್

ಮೈಸೂರು ಭಾಗದ ಪ್ರಭಾವಿ ಕಾಂಗ್ರೆಸ್ ನಾಯಕರಾಗಿರುವ ತನ್ವೀರ್ ಸೇಠ್ ಅವರು, ಸಿದ್ದರಾಮಯ್ಯನವರ ಆಪ್ತರು. ಕಾಂಗ್ರೆಸ್ಸಿನ ಹಿರಿಯ ನಾಯಕರೂ ಆಗಿರುವ ಅವರಿಗೆ ಮುಸ್ಲಿಂ ಪ್ರಾತಿನಿಧ್ಯದ ಕೋಟಾದಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳಬಹುದು. ಆದರೆ, ಈಗಾಗಲೇ ಆ ಕೋಟಾದಡಿ ಇರುವ ರಹಮಾನ್ ಅವರು ಪದತ್ಯಾಗ ಮಾಡಿದರೆ ಅವರ ಸ್ಥಾನಕ್ಕೆ ತನ್ವೀರ್ ಸೇಠ್ ಬರಬಹುದು ಎಂದು ಹೇಳಲಾಗುತ್ತಿದೆ.


ಶಿವಲಿಂಗೇಗೌಡ

ಅರಸೀಕೆರೆ ಕ್ಷೇತ್ರದ ಎಂಎಲ್ಎ ಆಗಿರುವ ಶಿವಲಿಂಗೇಗೌಡರಿಗೆ ಈ ಬಾರಿ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳಿವೆ. ಸಿದ್ದರಾಮಯ್ಯ 2.0 ಸರ್ಕಾರದಲ್ಲಿ ಹಾಸನ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿರಲಿಲಲ್ಲ. ಈಗ ಬದಲಾದ ಸಂದರ್ಭದಲ್ಲಿ ಹಾಸನಕ್ಕೆ ಪ್ರಾತಿನಿಧ್ಯ ನೀಡಲು ಶಿವಲಿಂಗೇಗೌಡರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಸಾಧ್ಯತೆಯಿ6ದೆ ಎನ್ನಲಾಗಿದೆ.

ರೂಪಾ ಶಶಿಧರ್

ಹಾಲಿ ಆಹಾರ ಸಚಿವರಾದ ಕೆಎಚ್ ಮುನಿಯಪ್ಪನವರ ಪುತ್ರಿ ರೂಪಾ ಶಶಿಧರ್. ಸಿದ್ದರಾಮಯ್ಯ 2.0 ಸರ್ಕಾರ ಬಂದಾಗಲೇ ರೂಪಾ ಶಶಿಧರ್ ಅವರಿಗೆ ಸಚಿವ ಸ್ಥಾನ ಸಿಗುವಂತೆ ಮಾಡಲು ಮುನಿಯಪ್ಪನವರು ಪ್ರಯತ್ನಿಸಿದ್ದರು. ಆದರೆ, ಅನುಭವದ ಕೊರತೆಯಿಂದಾಗಿ ರೂಪಾ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಈಗ ಪುತ್ರಿಗಾಗಿ ಮುನಿಯಪ್ಪನವರು ಸಂಪುಟದಿಂದ ನಿರ್ಗಮಿಸಿ, ತಮ್ಮ ಪುತ್ರಿಗೆ ಸ್ಥಾನ ಸಿಗುವಂತೆ ಮಾಡಬಹುದು ಎಂದು ಹೇಳಲಾಗಿದೆ.

ಪಿ. ನರೇಂದ್ರ ಸ್ವಾಮಿ, ಎಚ್ ಸಿ ಬಾಲಕೃಷ್ಣ, ಲಕ್ಷ್ಮಣ ಸವದಿ

ಇವರಲ್ಲದೆ, ಮಳವಳ್ಳಿ ಶಾಸಕ ಪಿ. ನರೇಂದ್ರ ಸ್ವಾಮಿ, ಮಾಗಡಿ ಶಾಸಕ ಹಾಗೂ ಡಿಕೆಶಿ ಆಪ್ತ ಎಚ್ ಸಿ ಬಾಲಕೃಷ್ಣ ಹಾಗೂ ಕಳೆದ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಬಂದು ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಕ್ಷ್ಮಣ್ ಸವದಿಯವರನ್ನು ಈ ಬಾರಿ ಸಂಪುಟಕ್ಕೆ ಸೇರಿಸಿಕೊಳ್ಳುವ ಯೋಚನೆ ಕಾಂಗ್ರೆಸ್ ನಾಯಕರಿಗೆ ಇದೆ ಎಂದು ಹೇಳಲಾಗಿದೆ.

Related Posts

ಸಂವಿಧಾನ ಕೊಟ್ಟ ಕಾನೂನಿನ ಮೂಲಕ ರಕ್ತ ಚಂದನದ ಕಳ್ಳ ಪುಷ್ಪನನ್ನು ಕರ್ನಾಟಕದಲ್ಲಿ ಬಂಧಿಸಿದ ಧೀರ ಭಗತ್ ರಾಯ್

ಬೆಂಗಳೂರು: ಬಹುಕೋಟಿಯ ಸಿನಿಮಾ ಪುಷ್ಪ 2 ಕಳೆದ ಗುರುವಾರ ಬಿಡುಗಡೆಗೊಂಡಿದ್ದು ಕರ್ನಾಟಕದ ಬಹುತೇಕ ಚಿತ್ರಮಂದಿರಗಳನ್ನು ಆವರಿಸಿಬಿಟ್ಟಿದ್ದ, ಎಲ್ಲರೂ ಕೂಡ ಪುಷ್ಪ ಟು ಚಿತ್ರವನ್ನು ನೋಡಲು ತುದಿಕಾಳಿನಲ್ಲಿ ಕಾದು ನಿಂತಿದ್ದರು. ಆದರೆ ಚಿತ್ರತಂಡವು ಪ್ರೇಕ್ಷಕರ ಈ ಎಲ್ಲಾ ಭರವಸೆಗಳನ್ನು ಸಂಪೂರ್ಣವಾಗಿ ಹುಸಿ ಮಾಡಿದೆ…

ಹಾಸನಕ್ಕೆ ಸಮಾವೇಶಕ್ಕೆ ಹೋಗುವಾಗ ಆಹಾರ ಸಚಿವ ಕೆ.ಎಚ್ ಕಾರು ಅಪಘಾತ: ಅಪಾಯದಿಂದ ಪಾರು

ಹಾಸನ : ಹಾಸನದಲ್ಲಿ ಇಂದು ನಡೆಯುತ್ತಿರುವ ಕಾಂಗ್ರೆಸ್ ನ ಜನ ಕಲ್ಯಾಣ ಸಮಾವೇಶಕ್ಕೆ ಹೋಗುವಾಗ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರ ಕಾರು ಅಪಘಾತವಾಗಿರುವ ಘಟನೆ ನಡೆದಿದೆ. ಹಾಸನದ ಮಾರ್ಗದಲ್ಲಿ ಸಚಿವ ಮುನಿಯಪ್ಪ ಕಾರು ಅಪಘಾತಕ್ಕೀಡಾಗಿದ್ದು, ಬಳಿಕ ಬೇರೆ ವ್ಯವಸ್ಥೆ ಮೂಲಕ…

Leave a Reply

Your email address will not be published. Required fields are marked *