ಬೆಂಗಳೂರು: ಪುಷ್ಪ 2 ಚಿತ್ರವು ಇದೆ ತಿಂಗಳ 05 ನೇ ತಾರೀಖು ಬಿಡುಗಡೆಗೊಳ್ಳುಲ್ಲು ಸಜ್ಜಾಗಿದ್ದು ಚಿತ್ರಕ್ಕೆ ಈಗ ಬಾಯ್ ಕಟ್ ಅಭಿಯಾನದ ಬಿಸಿ ಮುಟ್ಟಿದೆ.
ಕರ್ನಾಟಕದಲ್ಲಿ ಕನ್ನಡಿಗರೆ ಸಾರ್ವಭೌಮ ಕನ್ನಡ ಚಿತ್ರಗಳಿಗೆ ಹೆಚ್ಚು ಚಿತ್ರಮಂದಿರಗಳನ್ನು ಕೊಡಬೇಕು ಎಂದು ತಿಳಿಸಿದ್ದಾರೆ. ಹಾಗೇಯೆ ಪುಷ್ಪ 2 ಚಿತ್ರದ ನಿರ್ಮಾಪಕ ಕನ್ನಡಿಗರ ದುಡ್ಡನ್ನು ಬಾಚುತ್ತೇನೆ ಬಳಿಯುತ್ತೇನೆ ಎಂಬೆಲ್ಲ ರೀತಿ ಮಾತನಾಡಿ ಕನ್ನಡಿಗರಿಗೆ ಅವಮಾನ ಮಾಡಿದ್ದಾನೆ ಅವನು ಈ ಕೂಡಲೆ ಕ್ಷಮೆ ಕನ್ನಡಿಗರನ್ನು ಕೇಳಬೇಕು ಎಂದು ಹೇಳಿದ್ದಾರಲ್ಲದೆ.
ಪುಷ್ಪ 2 ಚಿತ್ರದ ಬದಲಾಗಿ ಕನ್ನಡದ ನೆಲಮೂಲದ ಕಥೆ ಧೀರ ಭಗತ್ ರಾಯ್ ಚಿತ್ರವನ್ನು ನೋಡಿ ಕನ್ನಡಿಗರನ್ನು ಕನ್ನಡನಾಡನ್ನು ಬೆಳೆಸಿ ಎಂದು ಹೇಳಿಕೆ ತಮ್ಮ ಫೇಸ್ಬುಕ್ ಲೈವ್ ವಿಡಿಯೋದಲ್ಲಿ ಹೇಳಿದ್ದಾರೆ. ಕನ್ನಡದ ಚಿತ್ರಗಳಿಗೆ ಅವಕಾಶ ಕೊಡದಿದ್ದಲ್ಲಿ ಚಿತ್ರಮಂದಿರಗಳಿಗೆ ತೆರಳಿ ಕಪ್ಪು ಮಸಿ ಬಳಿಯಲಾಗುತ್ತದೆ ಎಂದು ಆ ವಿಡಿಯೋದಲ್ಲಿ ಮಾತನಾಡಿದ್ದಾರೆ.
ಅವರ ನಂತರ ರಾಜ್ಯಾದ್ಯಂತ ಸಾಕಷ್ಟು ಕನ್ನಡಪರ ಮತ್ತು ಪ್ರಗತಿ ಪರ ಸಂಘಟನೆಗಳು ಬಾಯ್ ಕಟ್ ಪುಷ್ಪ 2 ಚಿತ್ರದ ಅಭಿಯಾನದಲ್ಲಿ ಪಾಲ್ಗೊಂಡು ಬಾಯ್ ಕಟ್ ಮಾಡಲು ಮುಂದಾಗಿದ್ದಾರೆ.