ಬೆಂಗಳೂರು: ಬಹುಕೋಟಿಯ ಸಿನಿಮಾ ಪುಷ್ಪ 2 ಕಳೆದ ಗುರುವಾರ ಬಿಡುಗಡೆಗೊಂಡಿದ್ದು ಕರ್ನಾಟಕದ ಬಹುತೇಕ ಚಿತ್ರಮಂದಿರಗಳನ್ನು ಆವರಿಸಿಬಿಟ್ಟಿದ್ದ, ಎಲ್ಲರೂ ಕೂಡ ಪುಷ್ಪ ಟು ಚಿತ್ರವನ್ನು ನೋಡಲು ತುದಿಕಾಳಿನಲ್ಲಿ ಕಾದು ನಿಂತಿದ್ದರು. ಆದರೆ ಚಿತ್ರತಂಡವು ಪ್ರೇಕ್ಷಕರ ಈ ಎಲ್ಲಾ ಭರವಸೆಗಳನ್ನು ಸಂಪೂರ್ಣವಾಗಿ ಹುಸಿ ಮಾಡಿದೆ ಎಂದು ಚಿತ್ರ ವೀಕ್ಷಕಕರು ತಿಳಿಸಿದ್ದಾರೆ. 3:30 ನಿಮಿಷಗಳು ಇರುವಂತಹ ಈ ಚಿತ್ರ ಪ್ರೇಕ್ಷಕರನ್ನು ಬೋರ್ ಹೊಡೆಸಿರುವುದಾಗಿ ಚಿತ್ರ ನೋಡಿದಂತಹ ಬಹುತೇಕ ಮಂದಿಯ ವಿಮರ್ಶೆಯಾಗಿದೆ. ಸಾಕಷ್ಟು ಚಿತ್ರ ಇತರಕರು ಕೂಡ ಲಕ್ಷಾಂತರ ರೂಪಾಯಿಗಳನ್ನು ಕೊಟ್ಟು ಪುಷ್ಪ 2 ಖರೀದಿಸುವುದಾಗಿ ಮತ್ತು ಖರೀದಿಸಿದ ನಂತರ ಕೈ ಸುಟ್ಟಿಕೊಂಡಿರುವೆವು ಎಂದು ಮಾಧ್ಯಮಗಳಲ್ಲಿಯೂ ಕೂಡ ಮಾತನಾಡಿದ್ದಾರೆ.
ಆದರೆ ಈಗ ನಮ್ಮ ಕನ್ನಡದ ನೆಲಮೂಲದ ಕಥೆಯಾದ ಧೀರ ಭಗತ್ ರಾಯ್ ಚಿತ್ರದ ಮುಂದೆ ಪುಷ್ಪ ಮಂಡಿಯೂರಿದೆ, ಭೂ ಒಡೆತನದ ಕಥೆಯನ್ನು ಇಟ್ಟುಕೊಂಡು ಕಥೆ ಎಣಿದಿರುವಂತಹ ನಿರ್ದೇಶಕ ಕರ್ಣನ್ ಬಹಳ ಅಚ್ಚುಕಟ್ಟಾಗಿ ಪ್ರೇಕ್ಷಕರನ್ನು ರಂಜಿಸಲು ಮತ್ತು ಚಿತ್ರದ ಕೊನೆಯ ಕ್ಷಣದವರೆಗೂ ಕೂಡ ಚಿತ್ರ ವೀಕ್ಷಿಸಲು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತಹ ಅತ್ಯದ್ಭುತವಾದ ಕೆಲಸವನ್ನು ಮಾಡಿದ್ದಾರೆ ಎಂದು ಪ್ರೇಕ್ಷಕರ ಅಭಿಪ್ರಾಯ, ಪ್ರಮುಖವಾಗಿ ಈ ಚಿತ್ರದ ಮುಖ್ಯವಾದ ಭಾಗಗಳೆಂದರೆ ನಿರ್ದೇಶಕ ಕರ್ಣನ್ ರವರ ಅತ್ಯದ್ಭುತವಾದ ಸಂಭಾಷಣೆಯು ಪ್ರೇಕ್ಷಕರನ್ನು ಸಿನಿಮಾ ಮಂದಿರದಲ್ಲಿ ಶಿಳ್ಳೆ ಹೊಡೆಯುವಂತೆ ಮಾಡಿದೆ. ಚಿತ್ರದ ಕಂಟೆಂಟ್ ಇಂದ ಹಿಡಿದು ಮೇಕಿಂಗ್ ಮತ್ತು ಚಿತ್ರದಲ್ಲಿ ಅಭಿನಯಿಸಿರುವಂತಹ ಪ್ರತಿಯೊಬ್ಬರೂ ಕೂಡ ಅರ್ಥಪೂರ್ಣವಾಗಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ, ನಾಯಕ ನಟನ ಅಭಿನಯವಂತ ಮೊಟ್ಟಮೊದಲಿಗೆ ನಟಿಸಿರುವಂತಿಲ್ಲ ಸಾಕಷ್ಟು ಚಿತ್ರದಲ್ಲಿ ಇರುವಂತಹ ಅನುಭವವುಳ್ಳ ನಾಯಕ ನಟನಂತೆ ತಮ್ಮ ಪಾತ್ರಕ್ಕೆ ತಾವು ತಲ್ಲಿನರಾಗಿದ್ದಾರೆ ಎಂದು ಹೇಳಬಹುದಷ್ಟೆ.
ಒಟ್ಟಾರೆ ಕರ್ನಾಟಕದಲ್ಲಿ ಪುಷ್ಪ ಚಿತ್ರವನ್ನು ಕರ್ನಾಟಕದಲ್ಲಿ ಧೀರ ಭಗತ್ ರಾಯ್ ಸಂವಿಧಾನ ಕೊಟ್ಟ ಕಾನೂನು ಮತ್ತು ಚೌಕಟ್ಟುಗಳ ಮೂಲಕ ಬಂಧಿಸಿದ್ದಾನೆ ಎಂದರೆ ತಪ್ಪಾಗಲಾರದು.
ಇನ್ನೂ ಜನರ ಅಭಿಪ್ರಾಯದಂತೆ ರೇಟಿಂಗ್ಸ್ ಗಳನ್ನು ನೋಡುವುದಾದರೆ
ಪುಷ್ಪ ಚಿತ್ರ : 3/5
ಧೀರ ಭಗತ್ ರಾಯ್ :- 4.3/5