ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಿಸಿದ ಕಿಡಿಗೇಡಿಗಳು
ಹೊಸಕೋಟೆ: ತಾಲ್ಲೂಕಿನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಬೆಂಕಿ ಹಚ್ಚಿದ ಪ್ರಕರಣ ಮರೆಯುವ ಮುನ್ನವೇ ದಳಸಗೆರೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ಕಿಡಿಗೇಡಿಗಳು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಗಣಿ ಎರಚಿ ಅಪಮಾನ ಮಾಡಿದ್ದಾರೆ ಎಂದು ದಲಿತ ಪರ ಸಂಘಟನೆಗಳು ಆರೋಪ ಮಾಡಿವೆ. …
ಸಂವಿಧಾನವನ್ನು ನೀವು ಉಳಿಸಿದರೆ ಅದು ನಿಮ್ಮನ್ನು ಉಳಿಸುವುದು -ಚಿಕ್ಕಮಾರನಹಳ್ಳಿ ಅನಂತ್
ನಾವು ಬಂದಿರುವುದೆ ಸಂವಿಧಾನವನ್ನು ಬದಲಿಸಿ ಮನುಸ್ಮೃತಿಯನ್ನು ಜಾರಿಮಾಡಲಿಕ್ಕಾಗಿ ಎಂಬುದನ್ನು ಸಾಕಷ್ಟು ವಿಷಯಗಳಲ್ಲಿ ಸಾಬೀತು ಮಾಡಿದ್ದಾರೆ ಅದರಲ್ಲಿ ಇದು ಕೂಡ ಒಂದು. ಜಾತ್ಯತೀತ ಮತ್ತು ಸಮಾಜವಾದ ಎಂಬ ಎರಡು ಪದಗಳಷ್ಟೆ ನಮಗೆ ಕಾಣುತ್ತಿರುವುದು, ಇದು ತುಂಬಾ ಸುಲಭ ಎನಿಸಬಹುದು ಇದನ್ನು ‘ಜಾತ್ಯತೀತ…
ಅಕ್ರಮ ಗೋಮಾಂಸ ಸಾಗಣೆ ಮತ್ತು ಅನೈತಿಕ ಪೊಲೀಸ್‌ಗಿರಿ ಸಂಬಂಧ 23 ಜನರ ಬಂಧನ
ದೊಡ್ಡಬಳ್ಳಾಪುರ: ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ವಾಹನಗಳನ್ನು ತಡೆದು, ಹಲ್ಲೆ ಮಾಡಿದ್ದಲ್ಲದೇ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆ ಪೊಲೀಸರು ಶ್ರೀರಾಮಸೇನೆ ಸಂಘಟನೆಯ 16 ಮಂದಿ ಮತ್ತು ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದ ಏಳು ಅರೋಪಿಗಳನ್ನು ಪೊಲೀಸರು ಬಂಧಿಸಿ, ಪ್ರಕರಣ…
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ನಾಮಫಲಕಕ್ಕೆ ಅವಮಾನ: ಕ್ಷಮೆ ಕೋರಿದ ಕಿಡಿಗೇಡಿ
ದೇವನಹಳ್ಳಿ: ತಾಲ್ಲೂಕಿನ ಕುಂದಾಣ ಹೋಬಳಿಯ ರಾಮನಾಥಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಅಂಬೇಡ್ಕರ್ ನಾಮಫಲಕಕ್ಕೆ ಸಗಣಿ ಎರಚಿ ಅವಮಾನ ಮಾಡಿದ್ದ ಕಿಡಿಗೇಡಿ ಘಟನೆಗೆ ತಪ್ಪು ಒಪ್ಪಿಕೊಂಡು ಕ್ಷಮೆ ಕೋರಿದ್ದಾನೆ. ಸೋಮವಾರ ರಾತ್ರಿ ರಾಮನಾಥಪುರ ಗ್ರಾಮದ ಕಾಲೋನಿಯಲ್ಲಿನ ದಲಿತ ಸಂಘಟನೆಯ ನಾಮ ಫಲಕಕ್ಕೆ ಕಿಡಿಗೇಡಿಯೊಬ್ಬ…
ಮೋದಿಗೆ ಹಸಿವಿಗಿಂತ ಎಥನಾಲ್ ಮುಖ್ಯ: ಬಡವರಿಗೆ ನೀಡಬೇಕಾದ ಅಕ್ಕಿಯನ್ನ ಖಾಸಗಿಯವರಿಗೆ ಮಾರಾಟ ಮಾಡುತ್ತಾರೆ; ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ವಾಗ್ದಾಳಿ
ದೊಡ್ಡಬಳ್ಳಾಪುರ: ಬಡವರಿಗೆ ಅಕ್ಕಿ ನೀಡಬೇಕಾದ ಮೋದಿ ಅದನ್ನು ಎಥನಾಲ್‌ಗಾಗಿ ಬಳಸುತ್ತಾರೆ, ಖಾಸಗಿಯವರಿಗೆ ಮಾರಾಟ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ತೀವ್ರ ವಾಗ್ದಾಳಿ ನಡೆಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. …
ಯುವ ಜನರು ಎಚ್ಚತ್ತುಕೊಂಡು ಪ್ರಶ್ನಿಸಬೇಕು.! ಇಲ್ಲವಾದರೆ ರಾಜಪ್ರಭುತ್ವ ಜಾರಿ ಮಾಡುತ್ತಾರೆ ಎಚ್ಚರ
ಯುವ ಶಕ್ತಿಯು ನಿರಂತರವಾದ ಅಭಿವೃದ್ಧಿಯನ್ನು ಬಯಸುವಂತಹ ಕಾರ್ಯವನ್ನೆ ಮಾಡುತ್ತದೆ. ಈ ಕೆಳಗಿನ ಚಿತ್ರಗಳಲ್ಲಿ ನಮ್ಮ ದೊಡ್ಡಬಳ್ಳಾಪುರದ ಯುವಜನರು ಬಾಶೆಟ್ಟಿಹಳ್ಳಿಯಲ್ಲಿ ತಮ್ಮ ಮೂಲಭೂತ ಹಕ್ಕುಗಳಲ್ಲಿ ಒಂದಾದ ಬಸ್ಸು ನಿಲ್ದಾಣ ನಿರ್ಮಾಣ ಮಾಡಿಕೊಡುವಂತೆ ಕೇಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇದರ…
ನೆಲಮಂಗಲ: ಅಂತರ್ಜಾತಿ ವಿವಾಹವಾದ ವಕೀಲ ಯುವಕನಿಗೆ ಬಹಿಷ್ಕಾರ ಹಾಕಿದ ಕುಟುಂಬಸ್ಥರು
ದಾಬಸ್‌ಪೇಟೆ: ಯುವಕಯೊಬ್ಬ ಅನ್ಯ ಜಾತಿ ಯುವತಿಯನ್ನು ಮದುವೆಯಾಗಿದ್ದಕ್ಕೆ ಸಮುದಾಯ ಮುಖಂಡರು ಆತನಿಗೆ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಸೋಂಪುರ ಹೋಬಳಿಯ ಮರಳಕುಂಟೆ ಗ್ರಾಮದ ತಿಗಳ ಸಮುದಾಯ ಮಧುಸೂದನ್ ವೃತ್ತಿಯಲ್ಲಿ ವಕೀಲನಾಗಿದ್ದು, ಈತ ಕಳೆದ ಒಂದೂವರೆ ವರ್ಷದ ಹಿಂದೆ ವಿಶ್ವಕರ್ಮ…
ಮಾಹಿತಿ ನಿರ್ಲಕ್ಷ್ಯ: ನೆಲಮಂಗಲ ತಹಶೀಲ್ದಾರ್‌ಗೆ 10ಸಾವಿರ ರೂ. ದಂಡ
ನೆಲಮಂಗಲ: ಮಾಹಿತಿ ನೀಡಲು ನಿರ್ಲಕ್ಷ್ಯ ಧೋರಣೆ ಹಾಗೂ ಆಯೋಗದ ವಿಚಾರಣೆಗೆ ಗೈರು ಹಾಜರಾಗಿರುವ ಪರಿಣಾಮ ತಹಶೀಲ್ದಾರ್ ಅರುಂಧತಿ ಅವರಿಗೆ 10ಸಾವಿರ ರೂ.ದಂಡವನು ವಿಧಿಸಿ ಕರ್ನಾಟಕ ಮಾಹಿತಿ ಆಯೋಗ ಆದೇಶ ನೀಡಿದ್ದು ಕಾನೂನಿನ ಮಹತ್ವತಿಳಿಸಿದೆ. ತಾಲೂಕು ವ್ಯಾಪ್ತಿಯ ಸೋಂಪುರ ಹೋಬಳಿ 2ರಲ್ಲಿ ಕಾರ್ಯನಿರ್ವಹಿ…
ದಲಿತರು ಬಳಕೆ ಮಾಡುತ್ತಿದ್ದ ಬಾವಿ ದ್ವಂಸ: ಅಶ್ವತ್ಥಕಟ್ಟೆ ನಿರ್ಮಾಣಕ್ಕೆ ಸಿದ್ದತೆ
ದೇವನಹಳ್ಳಿ: ತಾಲ್ಲೂಕಿನ ವಿಜಯಪುರ ಹೋಬಳಿಯ ಚಂದೇನಹಳ್ಳಿಯಲ್ಲಿ ಪರಿಶಿಷ್ಟ ಜನಾಂಗದವರು ಕಳೆದ ಸುಮಾರು ಎಂಬತ್ತು ವರ್ಷಗಳಿಂದ ಬಳಕೆ ಮಾಡುತ್ತಿದ್ದ ಬಾವಿಯನ್ನು ಮುಚ್ಚುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಇದೇ ಗ್ರಾಮದ ಗೋವಿಂದರಾಜು ಎಂಬುವವರು ಈ ಭೂಮಿ ತಮಗೆ ಸೇರಿದೆ ಎಂದು ಜೆಸಿಬಿಯಿಂದ ಬಾವಿಗೆ…
ದೊಡ್ಡಬಳ್ಳಾಪುರದ ಹೆಸರಿನ ಮೂಲ ಏನು…!?
ದೊಡ್ಡಬಳ್ಳಾಪುರ ಆಡಳಿತಾತ್ಮಕವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ಒಂದು ಪ್ರಮುಖ ತಾಲ್ಲೂಕು ಕೇಂದ್ರ. ಇದು ಬೆಂಗಳೂರಿನಿಂದ ಉತ್ತರ-ಪಶ್ಚಿಮಾಭಿಮುಖವಾಗಿ 40 ಕಿಲೋಮೀಟ ದೂರದಲ್ಲಿದೆ. ಭೌಗೋಳಿಕವಾಗಿ 78,760 ಹೆಕ್ಟೇರ್ ಭೂಪದೇಶವನ್ನು ಹೊಂದಿದೆ. ದೊಡ್ಡಬಳ್ಳಾಪುರ ತಾಲ್ಲೂಕನ್ನು ದೊಡ್ಡಬೆಳವಂಗಲ, ಮಧುರೆ, ಸಾಸಲು, ತೂಬಗೆರೆ ಮತ್ತು ಕಸಬಾ ಎಂದು…